ಎಲ್‌ಪಿಜಿ ಬಳಕೆದಾರರು ಆದಾಯ ಲೆಕ್ಕ ನೀಡುವುದು ಕಡ್ಡಾಯ
ನವದೆಹಲಿ, ಫೆಬ್ರವರಿ, 15: ವಾರ್ಷಿಕ 10 ಲಕ್ಷ ರು.ಗಿಂತ ಹೆಚ್ಚು ಆದಾಯ ಹೊಂದಿರುವವರಿಗೆ ಎಲ್ಪಿಜಿ ಸಬ್ಸಿಡಿ ಸಿಬ್ಸಿಡಿ ಕಡಿತ ಮಾಡಲು ನಿರ್ಧರಿಸಿದ್ದ ಕೇಂದ್ರ ಸರ್ಕಾರ ಇದೀಗ ಒಂದು ಹೆಜ್ಜೆ ಮುಂದಡಿ ಇಟ್ಟಿದೆ. ಗ್ರಾಹಕರು ಆದಾಯ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಲು ತೀರ್ಮಾನ ತೆಗೆದುಕೊಂಡಿದೆ.
ಹೊಸ ಯೋಜನೆಯಂತೆ ಆದಾಯ ತೆರಿಗೆ ಕಾಯ್ದೆ 1961ರ ಅನ್ವಯ ವಾರ್ಷಿಕ 10 ಲಕ್ಷ ರುಗೂ ಅಧಿಕ ಆದಾಯ ಹೊಂದಿರುವ ವ್ಯಕ್ತಿಗಳು ಎಲ್ ಪಿಜಿ ಸಬ್ಸಿಡಿ ಪಡೆಯುವಂತಿಲ್ಲ. ಸದ್ಯಕ್ಕೆ ಇದನ್ನು ಕಡ್ಡಾಯಗೊಳಿಸಿಲ್ಲ. ಗ್ರಾಹಕರು ಸ್ವಯಂಪ್ರೇರಿತರಾಗಿ ಸಬ್ಸಿಡಿ ಹಿಂತಿರುಗಿಸಲು ಅವಕಾಶ ಸಹ ಅವಕಾಶ ನೀಡಲಾಗಿತ್ತು.[10 ಲಕ್ಷ ರು ವಾರ್ಷಿಕ ಆದಾಯವಿದ್ದರೆ, ಎಲ್ ಪಿಜಿ ಸಬ್ಸಿಡಿ ಖೋತಾ]

ಪ್ರಧಾನಿ ಮೋದಿ ಅವರ ಹೇಳಿಕೆಗೆ ಬದ್ಧರಾಗಿ ಲಕ್ಷಾಂತರ ಜನ ಸ್ವ ಇಚ್ಛೆಯಿಂದ ಸಬ್ಸಿಡಿ ತೊರೆದಿದ್ದರು. ಆದರೆ ಕೆಲ ದಿನಗಳಿಂದ ತೊರೆಯುವವರ ಪ್ರಮಾಣದಲ್ಲಿ ತೀವ್ರ ಇಳಿಕೆಯಾಗಿದ್ದು ಕೇಂದ್ರ ಸರ್ಕಾರ ಹೊಸ ಕ್ರಮಕ್ಕೆ ಮುಂದಾಗಿದೆ.[ಲೀಟರ್ ಪೆಟ್ರೋಲ್ ಗೆ ಎಷ್ಟು ಕೊಡ್ತಾ ಇದೀರಿ? ಈ ಲೆಕ್ಕ ನೋಡಿ]
ಈ ಎಲ್ಲ ವಿಚಾರಗಳು ಮುಂದಿನ ಕ್ಯಾಬಿನೆಟ್ ಸಭೆಯ ನಂತರ ಸ್ಪಷ್ಟವಾಗಲಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ. ಆದಾಯದ ಮಾಹಿತಿ ಸಿಕ್ಕರೆ ಕುಟುಂಬದ ಸ್ಥಿತಿ-ಗತಿಯನ್ನು ಅಳೆಯಲು ಸಾಧ್ಯವಿದ್ದು ಕಾನೂನು ಕ್ರಮದ ಮೂಲಕವೇ ಇತರರಿಗೆ ಅನುಕೂಲ ಮಾಡಿಕೊಡಲು ಸಾಧ್ಯವಾಗುತ್ತದೆ ಎಂದು ಸಚಿವಾಲಯ ಹೇಳಿದೆ.












Click it and Unblock the Notifications