ಧಮ್ ಹೊಡಿಬೇಕಂದ್ರೆ ಇಡೀ ಪ್ಯಾಕ್ ತಗೋಬೇಕು!
ನವದೆಹಲಿ. ನ. 25: ಕದ್ದು ಒಂದೊಂದೇ ಸಿಗರೇಟ್ ತೆಗೆದುಕೊಂಡು ಧಮ್ ಹೊಡೆಯುವವರಿಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಲು ಮುಂದಾಗಿದೆ. ಸಿಗರೇಟ್ ಸೇದಲೇ ಬೇಕೆಂದವರು ಇನ್ನು ಮುಂದೆ ಪ್ಯಾಕ್ ಖರೀದಿಸಬೇಕಾದ್ದು ಅನಿವಾರ್ಯ.
ಬಿಡಿ ಸಿಗರೇಟ್ ಮಾರಾಟ ನಿಷೇಧದ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಸಮಿತಿಯೊಂದರ ವರದಿಗೆ ಮನ್ನಣೆ ನೀಡಿರುವ ಸರ್ಕಾರ ಬಿಡಿ ಸಿಗರೇಟ್ ಮಾರಾಟಕ್ಕೆ ಬ್ರೇಕ್ ಹಾಕಲು ಕರಡೊಂದನ್ನು ಸಿದ್ಧಪಡಿಸಿದೆ.[ತಂಬಾಕು, ಬಿಡಿಬಿಡಿ ಸಿಗರೇಟ್ ಮಾರಾಟ ನಿಷೇಧ]

ಸಂಪುಟ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ಒಪ್ಪಿಗೆ ಸಿಕ್ಕಿಲ್ಲ. ಆದರೆ ಕೇಂದ್ರ ಆರೋಗ್ಯ ಖಾತೆ ನಿಭಾಯಿಸಿದ್ದ ಹರ್ಷವರ್ಧನ್ ಈ ಬಗ್ಗೆ ಕಠಿಣ ನಿರ್ಧಾರ ತಾಳಬೇಕು ಎಂದು ಹೇಳಿದ್ದಾರೆ. ಅಲ್ಲದೇ ನಿಕೋಟಿನ್ ಅಂಶ ಇರುವ ಎಲ್ಲ ಪದಾರ್ಥಗಳನ್ನು ನಿಷೇಧ ಮಾಡಬೇಕು. ಮಕ್ಕಳ ಕೈಗೆ ತಂಬಾಕು ವಸ್ತುಗಳು ಸಿಗದಂತೆ ಮಾಡಲು ಇಂಥ ಕಠಿಣ ಕ್ರಮ ಅಗತ್ಯ ಎಂದು ಹೇಳಿದ್ದಾರೆ.[ಹೊಗೆ ಬಿಟ್ಟರೆ 20 ಸಾವಿರ ರೂಪಾಯಿ ದಂಡ!]
ಅಲ್ಲದೇ ತಂಬಾಕು ಸೇವನೆ ವಯೋಮಿತಿಯನ್ನು 18 ರಿಂದ 25 ವರ್ಷಕ್ಕೆ ಏರಿಸುವ ಬಗೆಗೂ ಚಿಂತನೆ ನಡೆಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದರೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣ ಹೆಚ್ಚಳ ಮಾಡುವುದಕ್ಕೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.[ವಿವಿಯಲ್ಲಿ ಧಮ್ ಹೊಡೆದ್ರೆ ಪರೀಕ್ಷೆ ಬರೆಯುವಂತಿಲ್ಲ]
ಆರು ವರ್ಷಗಳ ಹಿಂದೆಯೇ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದನ್ನು ನಿಷೇಧ ಮಾಡಲಾಗಿತ್ತು. ಶಿಕ್ಷಣ ಸಂಸ್ಥೆಗಳ ಬಳಿ ಮತ್ತು 18 ವರ್ಷ ಕೆಳಗಿನವರಿಗೆ ತಂಬಾಕು ಪದಾರ್ಥ ಮಾರುವುದನ್ನು ಅಪರಾಧ ಎಂದು ಪರಿಗಣಿಸಲು ಕಾನೂನು ಜಾರಿ ಮಾಡಲಾಗಿತ್ತು. ಆದರೂ ಕಟ್ಟು ನಿಟ್ಟಿನ ಕ್ರಮಗಳಿರದ ಕಾರಣ ಸಮರ್ಪಕ ಅನುಷ್ಠಾನ ಸಾಧ್ಯವಾಗಿಲ್ಲ.












Click it and Unblock the Notifications