ಎಲ್ಲಿ ಹೋಯಿತು ಬಿಜೆಪಿಯ ಉತ್ತರನ ಪೌರುಷ: ಉತ್ತರ ಭಾರತದಲ್ಲಿ ಸ್ಥಾನ ಕೈ ಚೆಲಲ್ಲು ಏನು ಕಾರಣ?
ಚುನಾವಣೆಗಳು ಆರಂಭಕ್ಕೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿ 400 ಗಡಿ ದಾಟುತ್ತೇವೆ ಎಂದು ಘಂಟಾ ಘೋಷವಾಗಿ ಹೇಳ್ತಾ ಇದ್ದರು. ಇದೇ ನಂಬರ್‌ಗಳನ್ನು ಎಕ್ಸಿಟ್ ಪೋಲ್‌ಗಳು ಸಹ ನೀಡಿದ್ದವು. ಆದರೆ ಫಲಿತಾಂಶವೇ ಬೇರೆಯದ್ದಾಗಿದೆ. ಫಲಿತಾಂಶ ಬರುತ್ತಿದ್ದಂತೆ ಕಮಲ ಕೆರೆಯಿಂದ ಹೊರಗೆ ಬಂದು ಡ್ಯಾನ್ಸ್ ಮಾಡುವ ಮೂಡ್‌ನಲ್ಲಿ ಇರಲಿಲ್ಲ. ಈಗ ಲೆಕ್ಕಾಚಾರವೇ ಬೇರೆಯದ್ದಾಗಿತ್ತು.
ಬಿಜೆಪಿ ತಾನು ಅಂದುಕೊಂಡದ್ದಕ್ಕಿಂತ ಕಡಿಮೆ ಸ್ಥಾನವನ್ನು ಗೆಲ್ಲಲು ಏನು ಕಾರಣ ಎಂದು ಹುಡುಕುತ್ತಾ ಹೋದರೆ ಹತ್ತು ಹಲುವ ಅಂಶಗಳು ಕಣ್ಣ ಮುಂದೆ ಬರುತ್ತವೆ. ಈ ಅಂಶಗಳು ನಿಜಕ್ಕೂ ಬಿಜೆಪಿ ಸೋಲಿನ ಆತ್ಮಾವಕಲೋಕನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬಿಜೆಪಿ ಚುನಾವಣಾ ಫಲಿತಾಂಶ ಬರುತ್ತಿದ್ದಂತೆ ಮೊದಲಿನ ಜೋಶ್ ಕಾಣಿಸಲೇ ಇಲ್ಲ. ನಾಯಕರು ಬೀದಿಗೆ ಬೀಳುವುದನ್ನು ಮರೆತು ಬಿಟ್ಟರು. ಇದಕ್ಕೆ ಕಾರಣ ಬಿಜೆಪಿ ಗೆದ್ದು ಸೋತಿದೆ.

ಬಿಜೆಪಿ ಅಂದುಕೊಂಡಷ್ಟು ಸೀಟು ಗೆಲ್ಲದೇ ಇರುವು ಹತಾಶೆ ನಿಜಕ್ಕೂ ಬಿಜೆಪಿಯನ್ನು ಕಾಡಲಿದೆ. ಇಷ್ಟು ದಿನ ಏಕ ಚಕ್ರಾಧಿಪತ್ಯ ಮೆರೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಕೊಂಚ ರಿಸ್ಕ್ ಇರುವುದು ಸುಳ್ಳು ಅಲ್ಲ. ಈಗ ಯಾವುದೇ ನಿರ್ಧಾರವನ್ನು ಥಟ್ಟನೆ ತೆಗೆದುಕೊಳ್ಳಲು ಆಗುವುದೇ ಇಲ್ಲ. ಅದನ್ನು ಬಿಡಿ, ಬಿಜೆಪಿ ಜಸ್ಟ್ ಮ್ಯಾಜಿಕ್ ನಂಬರ್ ಕ್ರಾಸ್ ಮಾಡಿದ್ದರೂ ಸಹ ಈಗಾಗಲೇ ಪ್ರಮಾಣ ವಚನದ ಡೇಟ್ ಸಹ ಹೊರ ಬೀಳುತ್ತಿದ್ದವು. ಇದಕ್ಕಾಗಿ ಬಿಜೆಪಿ ಸಕಲ ಸಿದ್ಧತೆಯನ್ನು ಸಹ ಮಾಡಿಕೊಂಡಿತ್ತು. ಆದರೆ ಉತ್ತರನ ಪೌರುಷನ ಕಥೆ ಆಗಿದೆ. ಬಿಜೆಪಿ ಈ ಫಲಿತಾಂಶಕ್ಕೆ ಕಾರಣ ಏನು ಎಂಬುದನ್ನು ಹುಡುಕುತ್ತಾ ಹೋದಾಗ ಕಂಡು ಬರುವ ಅಂಶಗಳು ಇವು.
ಉತ್ತರ ಕಡೆಗಣನೆ
ಉತ್ತರ ಭಾರತದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭುತ್ ಪೂರ್ವ ಜಯ ಸಾಧಿಸಿದ್ದ ಬಿಜೆಪಿ ಈ ಬಾರಿ ಹಾಫ್ ವೇ ಮಾರ್ಕ್‌ನ್ನು ಸಹ ರೀಚ್ ಆಗಲು ಸಾಧ್ಯವೇ ಆಗಲಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಯುಪಿಯುಲ್ಲಿ ತಮ್ಮದೇ ಸರ್ಕಾರ ಇದೆ ಎಂದು ಬಿಜೆಪಿ ಈ ರಾಜ್ಯವನ್ನು ಕಡೆಗಣಿಸಿದಂತೆ ಕಂಡು ಬಂದಿದೆ. ಅಲ್ಲದೆ ಮೋದಿ ಉತ್ತರ ಪ್ರದೇಶ ಕೇಂದ್ರಿ ಕೃತ ಪ್ರಚಾರ ನಡೆಸುವಲ್ಲಿ ವಿಫಲರಾದರು ಎಂದು ತೋರುತ್ತದೆ.
ಉತ್ತರ ಭಾರತದಲ್ಲಿ ಹೀನಾಯ ಹಿನ್ನಡೆಗೆ ಪಕ್ಷದ ನಾಯಕರ ನಡುವಳಿಕೆ ಸಹ ಕಾರಣ. 2019ರಲ್ಲಿ ಮಾಡಿದ್ದ ಗ್ರೌಂಡ್ ವರ್ಕ್‌ನ್ನು ಬಿಜೆಪಿ ಮಿಸ್ ಮಾಡಿತು ಎಂದು ತೋರುತ್ತದೆ. ಸಚಿವೆ ಸ್ಮೃತಿ ಇರಾನಿ ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ಸರ್ಕಾರ ಹಾಗೂ ಜನರ ನಡುವಿನ ಸಂಬಂಧವನ್ನು ತೋರಿಸುತ್ತದೆ.

ಗೆಲ್ಲುವೆವು ಎನ್ನುವ ಅತಿಯಾದ ಆತ್ಮವಿಶ್ವಾಸ
ಬಿಜೆಪಿ ಸರ್ಕಾರಕ್ಕೆ ಸತತ ಎರಡು ಬಾರಿ ಅಧಿಕಾರ ನಡೆಸಿದ ಆತ್ಮವಿಶ್ವಾಸ ಬಂದಂತಾಗಿತ್ತು. ಈ ವೇಳೆ ಮೋದಿ ಅವರನ್ನು ಹೊರತು ಪಡಿಸಿ ಉಳಿದ ಸಚಿವರು, ಜನರ ಸಂಪರ್ಕದಿಂದ ದೂರವಾದರು. ಪರಿಣಾಮ ಜನರು ಸಹ ತಕ್ಕ ಪಾಠವನ್ನು ಕಲಿಸುವಲ್ಲಿ ಸಫಲರಾಗಿದ್ದಾರೆ. ಯಾರು ಯುಪಿ ಗೆಲ್ಲುತ್ತಾರೋ ಅವರು ದೇಶ ಆಳುತ್ತಾರೆ ಎಂಬ ಮಾತನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಎಡವಿದೆ.
ಮಾಹಾರಾಷ್ಟ್ರ ಕೈ ಸುಟ್ಟುಕೊಂಡಿದ್ದು
ಬರೀ ಉತ್ತರ ಪ್ರದೇಶ ಅಷ್ಟೇ ಅಲ್ಲ, ಮಹಾರಾಷ್ಟ್ರ ಹಾಗೂ ರಾಜಸ್ಥಾನಗಳಲ್ಲೂ ಬಿಜೆಪಿ ಕಡಿಮೆ ಸೀಟ್‌ಗಳನ್ನು ಪಡೆಯಲು ಈ ಮೇಲಿನ ಅಂಶಗಳು ಕಾರಣವಾದಂತೆ ಕಾಣುತ್ತದೆ. ಮಾಹಾರಾಷ್ಟ್ರ ಹಾಗೂ ರಾಜಸ್ಥಾನದಲ್ಲಿ ಎಕ್ಸಿಟ್ ಪೋಲ್‌ಗಳು ನೀಡಿದ ಫಲಿತಾಂಶ ಹೊರ ಬೀಳಿಲಿಲ್ಲ. ಕಾಂಗ್ರೆಸ್ ಈ ಬಾರಿ ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ.
ವರ್ಕ್ ಔಟ್ ಆಗದ ಅಯೋಧ್ಯ, ಕಾಶಿ ಜಪ
ಇನ್ನು ತಾನು ಅಯೋಧ್ಯೆಯ ಶ್ರೀರಾಮನ ಮಂದಿರ ಕಟ್ಟಿದ್ದೇನೆ ಖಚಿತವಾಗಿ ಜನ ತನ್ನ ಕೈ ಹಿಡಯುತ್ತಾರೆ ಎಂಬ ಭಾವನೆಯಲ್ಲಿದ್ದ ಬಿಜೆಪಿಗೆ ಅಯೋಧ್ಯ ಹಾಗೂ ಕಾಶಿ ಕೈ ಹಿಡಿಯಲ್ಲಿಲ್ಲ. ಉತ್ತರದಲ್ಲಿ ಪಕ್ಷ ಹೀನಾಯ ಸ್ಥಿತಿಗೆ ಈ ಅಂಶಗಳು ಕಾರಣವಾಗಿವೆ.












Click it and Unblock the Notifications