• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿಗೆ ತಲೆನೋವು, ಪಾಸ್ವಾನ್ ರಿಂದ ಸೀಟು ಪಾಲಿಟಿಕ್ಸ್ ದಾಳ

|

ನವದೆಹಲಿ, ಡಿಸೆಂಬರ್ 21: ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ಎಲ್ ಜೆಪಿ) ತನ್ನ ಸೀಟು ಹಂಚಿಕೆ ದಾಳವನ್ನು ಉರುಳಿಸಿದೆ. ಕಳೆದ ಒಂದೆರಡು ದಿನಗಳಿಂದ ಪಾಸ್ವಾನ್ ಅವರ ಪುತ್ರ ಚಿರಾಗ್ ಅವರು ಈ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಎನ್ಡಿಎ ಮೈತ್ರಿ ಬಲಪಡಿಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಅರುಣ್ ಜೇಟ್ಲಿ ಅವರು ಮುಂದಾಗಿದ್ದು, ಶನಿವಾರದಂದು ಈ ಬಗ್ಗೆ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಯಿದೆ.

ಸುಮಾರು 12 ವರ್ಷಗಳ ಬಳಿಕ ಎನ್ಡಿಎ ಮೈತ್ರಿಕೂಟ ಸೇರಿದ ಎಲ್ ಜೆಪಿ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ ಜೆಪಿ 7 ಸ್ಥಾನಗಳಲ್ಲಿ ಸ್ಪರ್ಧಿಸಿ 6 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ರಾಮ್ ವಿಲಾಸ್ ಪಾಸ್ವಾನ್ ಹಾಗೂ ಚಿರಾಗ್ ಅವರು ಗೆಲುವು ಸಾಧಿಸಿದರು. 2015ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿ ಜತೆಗೆ 40ಸ್ಥಾನಗಳಲ್ಲಿ ಸ್ಪರ್ಧಿಸಿ, ಕೇವಲ 2 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿತ್ತು.

ಈಗ 2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ 40 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾಗಿದೆ. ಇದಲ್ಲದೆ, ಒಂದು ರಾಜ್ಯಸಭಾ ಸ್ಥಾನಕ್ಕೂ ಎಲ್ ಜೆಪಿ ಬೇಡಿಕೆ ಇಟ್ಟಿದೆ.

English summary
The demand for Rajya Sabha seat for Lok Janshakti Party chief Ram Vilas Paswan is the main hurdle that is disrupting the issue to get resolved. Both the parties are more or less agree on the fact that LJP will contest on six seats in Bihar on which the LJP has its sitting MPs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X