ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಯುಗಾರಂಭ...

|
Google Oneindia Kannada News

ನವದೆಹಲಿ, ಜೂನ್ 30: ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಜುಲೈ 1, 2017 ತೀರಾ ಮಹತ್ವದ ದಿನವಾಗಿ ಇತಿಹಾಸವಾಗಿ ಉಳಿಯಲಿದೆ. ಏಕೆಂದರೆ ಒಂದು ದೇಶ, ಒಂದು ತೆರಿಗೆ ಎಂಬ ನಿಯಮವು ಜಾರಿಗೆ ಬರಲಿದೆ. ಇದರ ಬಗ್ಗೆ ನಿರೀಕ್ಷೆ, ಅಪೇಕ್ಷೆ ಹಾಗೂ ಆತಂಕ ಇಡೀ ದೇಶದಾದ್ಯಂತ ಇದೆ.

ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?

ಅದು ದುಬಾರಿ ಆಗುತ್ತದೆ, ಇದು ಹೀಗೆ-ಅದು ಹಾಗೆ ಎಂಬ ಬಗ್ಗೆ ವಲಯದಲ್ಲೂ ಚರ್ಚೆ ಆಗುತ್ತಿದೆ. ಇದೇನೋ ಕೇಂದ್ರ ಸರಕಾರ ನಡೆಸುತ್ತಿರುವ ಭಾರೀ ಕಾರ್ಯಾಚರಣೆ ಎಂಬಂತೆ ಬಿಂಬಿತವಾಗುತ್ತಿದೆ. ಜಿಎಸ್ ಟಿ ಜಾರಿ ಮಾಡುವುದಕ್ಕೆ ಬೀಜಾಂಕುರ ಮಾಡಿದ್ದು ಕಾಂಗ್ರೆಸ್. ಈಗ ನಮಗೆ ರಾಷ್ಟ್ರಪತಿ ಆಗಿರುವ ಪ್ರಣವ್ ಮುಖರ್ಜಿ, ಯುಪಿಎ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದರು.

ಗೊಬ್ಬರದ ಮೇಲಿನ ಜಿಎಸ್ ಟಿ ಶೇ 12ರಿಂದ 5ಕ್ಕೆ ಇಳಿಕೆ, ರೈತರು ನಿರಾಳಗೊಬ್ಬರದ ಮೇಲಿನ ಜಿಎಸ್ ಟಿ ಶೇ 12ರಿಂದ 5ಕ್ಕೆ ಇಳಿಕೆ, ರೈತರು ನಿರಾಳ

LIVE updates of GST implemantation

ಆಗಲೇ ಜಿಎಸ್ ಟಿ ಕಣ್ಣು-ಬಾಯಿ-ಮೂಗು ಮೂಡಲು ಆರಂಭವಾಗಿದ್ದು. ಇಂದು ಪ್ರಣವ್ ಮುಖರ್ಜಿ ಅವರು ರಾಷ್ಟ್ರಪತಿಯಾಗಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ನೀರು ಹರಿದು ಬಿಜೆಪಿ ನೇತೃತ್ಚದ ಎನ್ ಡಿಎ ಸರಕಾರ ಅಧಿಕಾರದಲ್ಲಿದೆ. ಜಿಎಸ್ ಟಿ ಜಾರಿಯಾಗುವುದನ್ನು ಮುಖರ್ಜಿ ಅವರು ಕಣ್ಣೆದುರು ನೋಡುತ್ತಿದ್ದಾರೆ.

ಜೋಕ್ಸ್, ಮೀಮ್ಸ್ ಗಳಲ್ಲಿ GST ಅಸಲಿ ಅರ್ಥ ಬಹಿರಂಗಜೋಕ್ಸ್, ಮೀಮ್ಸ್ ಗಳಲ್ಲಿ GST ಅಸಲಿ ಅರ್ಥ ಬಹಿರಂಗ

ಈ ದಿನದ ವಿಶೇಷ ಕಾರ್ಯಕ್ರಮವು ಸಂಸತ್ ನಲ್ಲಿ ನಿಗದಿಯಾಗಿದ್ದು, ಅದರ ಕ್ಷಣಕ್ಷಣದ ಮಾಹಿತಿ ನಿಮ್ಮ ಮುಂದೆ ತೆರೆದುಕೊಂಡಿದೆ.

LIVE updates of GST implemantation

* ರಾಷ್ಟ್ರಪತಿ, ಪ್ರಧಾನಿ ಹಾಗೂ ಇತರರಿಂದ ಜಿಎಸ್ ಟಿಗೆ ಚಾಲನೆ

* ಜಿಎಸ್ ಟಿ ರೂಪುರೇಷೆ ರಚನೆಯಾಗುವಾಗ ಇದರಲ್ಲಿ ನಾನೂ ಕೆಲಸ ಮಾಡಿದ್ದೇನೆ: ಮುಖರ್ಜಿ

* ಜಿಎಸ್ ಟಿ ಯೋಜನೆ ಜಾರಿಯಿಂದ ವೈಯಕ್ತಿಕವಾಗಿಯೂ ಸಂತೋಷವಾಗಿದೆ: ಮುಖರ್ಜಿ

LIVE updates of GST implemantation

* ಇದು ಹದಿನೈದು ವರ್ಷಗಳ ಹಿಂದೆ ಆರಂಭವಾದ ಪ್ರಯಾಣ: ಪ್ರಣವ್ ಮುಖರ್ಜಿ

* ರಾಷ್ಟ್ರಪತಿಗಳ ಭಾಷಣ ಆರಂಭ

* ಜಿಎಸ್ ಟಿ ಬರೀ ತೆರಿಗೆ ಸುಧಾರಣೆ ಅಲ್ಲ, ಅದೊಂದು ಆರ್ಥಿಕ ಸುಧಾರಣೆ: ಮೋದಿ

ಜಿಎಸ್ ಟಿ ಎಂದರೆ 'ಗುಡ್ ಆ್ಯಂಡ್ ಸಿಂಪಲ್ ಟ್ಯಾಕ್ಸ್' : ಮೋದಿಜಿಎಸ್ ಟಿ ಎಂದರೆ 'ಗುಡ್ ಆ್ಯಂಡ್ ಸಿಂಪಲ್ ಟ್ಯಾಕ್ಸ್' : ಮೋದಿ

* ಜಿಎಸ್ ಟಿ ರೈಲ್ವೆಯಿದ್ದಂತೆ ಕೇಂದ್ರ ಹಾಗೂ ರಾಜ್ಯ ಎರಡೂ ಸೇರಿ ಮುನ್ನಡೆಸಬೇಕು: ಮೋದಿ

* ಜಿಎಸ್ ಟಿಯಿಂದ ರಫ್ತಿಗೂ ಅನುಕೂಲ: ಮೋದಿ

* ಪ್ರಾಮಾಣಿಕ ವ್ಯಾಪಾರಿಗಳು ತೆರಿಗೆ ವ್ಯವಸ್ಥೆಯಿಂದ ಪಡುತ್ತಿದ್ದ ಸಮಸ್ಯೆಗೆ ಜಿಎಸ್ ಟಿಯಿಂದ ಮುಕ್ತಿ: ಮೋದಿ

* ವ್ಯವಹಾರ ಜೀವನದ ಅವ್ಯವಸ್ಥೆಯಿಂದ ನಮಗೆ ಮುಕ್ತಿ ಸಿಗುತ್ತಿದೆ. ನಾವು ಮುನ್ನಡೆಯುತ್ತಿದ್ದೇವೆ: ಮೋದಿ

ಜಿಎಸ್ ಟಿ ಎಫೆಕ್ಟ್: ಬಿಗ್ ಬಜಾರ್ ಮಾಲ್ ನಲ್ಲಿ ಮಧ್ಯರಾತ್ರಿ ಶಾಪಿಂಗ್!ಜಿಎಸ್ ಟಿ ಎಫೆಕ್ಟ್: ಬಿಗ್ ಬಜಾರ್ ಮಾಲ್ ನಲ್ಲಿ ಮಧ್ಯರಾತ್ರಿ ಶಾಪಿಂಗ್!

* ಜಗತ್ತಿನಲ್ಲಿ ತಿಳಿದುಕೊಳ್ಳುವುದಕ್ಕೆ ಬಹಳ ಕಷ್ಟ ಅಂದರೆ ಅದು ಆದಾಯ ತೆರಿಗೆ ಎಂದಿದ್ದರು ಆಲ್ಬರ್ಟ್ ಐನ್ ಸ್ಟೀನ್: ಮೋದಿ

* ಜಿಎಸ್ ಟಿ ಮೂಲಕ ಭಾರತದ ಏಕೀಕರಣದ ಮತ್ತೊಂದು ಕೆಲಸ ಆಗುತ್ತಿದೆ: ಮೋದಿ

* ಜಿಎಸ್ ಟಿ ಯಶಸ್ಸು ಒಂದು ಪಕ್ಷದ ಯಶಸ್ಸಲ್ಲ. ಅಥವಾ ಒಂದು ಸರಕಾರದ ಯಶಸ್ಸಲ್ಲ್: ಮೋದಿ

* ಅತಿ ದೊಡ್ಡ ಪ್ರಕ್ರಿಯೆಯನ್ನು ಪೂರೈಸಿ, ಎಲ್ಲ ಆತಂಕ-ಸವಾಲುಗಳನ್ನು ಎದುರಿಸಿ ಮುನ್ನಡೆಯುತ್ತಿದ್ದೇವೆ: ಮೋದಿ

* ಜಿಎಸ್ ಟಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದ ಹೇಳ್ತೀನಿ: ಮೋದಿ

LIVE updates of GST implemantation

* ಪಂಡಿತ್ ನೆಹರು, ಅಂಬೇಡ್ಕರ್, ಆಚಾರ್ಯ ಕೃಪಲಾನಿ, ಸರ್ದಾರ್ ವಲ್ಲಭ ಭಾಯಿ ಪಟೇಲ್, ಸರೋಜಿನಿ ನಾಯ್ಡು, ಅಂಬೇಡ್ಕರ್ ಮತ್ತಿತರರನ್ನು ಸ್ಮರಿಸಿದ ಮೋದಿ

* ಕಳೆದ ಹಲವು ವರ್ಷಗಳಿಂದ, ಹಲವು ಮಹಾನುಭಾವರ ಮಾರ್ಗದರ್ಶನದಲ್ಲಿ ಜಿಎಸ್ ಟಿಯ ಪ್ರಕ್ರಿಯೆ ನಡೆದಿದೆ: ಮೋದಿ

* ದೇಶದ ಮುನ್ನಡೆಯನ್ನು ಈ ಮಧ್ಯರಾತ್ರಿ ನಾವು ನಿಶ್ಚಿತ ಮಾಡುತ್ತಿದ್ದೇವೆ: ಮೋದಿ

* ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭ

* ಜುಲೈ ಒಂದರಂದು ಜಿಎಸ್ ಟಿ ಜಾರಿಯ ಗುರಿ ತಲುಪಲು ಸಹಕರಿಸಿದ ಎಲ್ಲರಿಗೂ ಧನ್ಯವಾದ: ಜೇಟ್ಲಿ

* ಬಡವರಿಗೆ ಹೊರೆಯಾಗಬಾರದು, ಆದಾಯವೂ ಗಮನದಲ್ಲಿರಬೇಕು ಎಂಬ ಅಂಶಗಳು ನಮ್ಮ ಮನಸ್ಸಿನಲ್ಲಿತ್ತು: ಜೇಟ್ಲಿ

* ಎನ್ ಡಿಎ ಸರಕಾರದ ಮೊದಲನೇ ಅವಧಿಯಲ್ಲಿ ಜಿಎಸ್ ಟಿಯ ಪ್ರಸ್ತಾವ: ಜೇಟ್ಲಿ

LIVE updates of GST implemantation

* ಜಿಎಸ್ ಟಿ ಇಡೀ ಭಾರತದ ಯಶಸ್ಸು: ಜೇಟ್ಲಿ

* ನವಭಾರತದಲ್ಲಿ ಒಂದು ದೇಶ, ಒಂದು ತೆರಿಗೆ, ಒಂದು ಮಾರುಕಟ್ಟೆ: ಅರುಣ್ ಜೇಟ್ಲಿ

* ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಉಪಸ್ಥಿತಿ

* ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಂದ ಸ್ವಾಗತ ಆರಂಭ

* ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಉಪಸ್ಥಿತಿ

* ರಾಷ್ಟ್ರಗೀತೆ

* ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಮಂತ್ರಿ ನರೇಂದ್ರ ಮೋದಿ, ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತಿತರರು ಸಂಸತ್ ಗೆ ಆಗಮನ

* ದೀಪಗಳಿಂದ ಝಗಮಗಿಸುತ್ತಿರುವ ದೆಹಲಿಯಲ್ಲಿರುವ ಜಿಎಸ್ ಟಿ ಭವನ

LIVE updates of GST implemantation

* ಜಿಎಸ್ ಟಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಂಸತ್ ಗೆ ಆಗಮಿಸಿದ ಉದ್ಯಮಿ ರತನ್ ಟಾಟಾ

LIVE updates of GST implemantation

ಜಿಎಸ್ ಟಿ: ತೆರಿಗೆದಾರರ 10 ಪ್ರಶ್ನೆಗಳಿಗೆ ನಮ್ಮ ಉತ್ತರಜಿಎಸ್ ಟಿ: ತೆರಿಗೆದಾರರ 10 ಪ್ರಶ್ನೆಗಳಿಗೆ ನಮ್ಮ ಉತ್ತರ

* ಜಿಎಸ್ ಟಿಯ ಕೇಂದ್ರ ಬಿಂದು ಹಳ್ಳಿಗಳು, ಬಡವರು, ಕೃಷಿಕರು, ಕೂಲಿಕಾರರು. ಅವರ ಆರ್ಥಿಕ ಸ್ಥಿತಿ ಉತ್ತಮವಾಗಲು ಜಿಎಸ್ ಟಿ ಒಳ್ಳೆ ವೇದಿಕೆ: ಕೇಂದ್ರ ಸಚಿವ ಅನಂತ ಕುಮಾರ್

LIVE updates of GST implemantation

* ಕಾಂಗ್ರೆಸ್, ಆರ್ ಜೆಡಿ, ಎಡಪಕ್ಷಗಳು, ತೃಣಮೂಲ ಕಾಂಗ್ರೆಸ್, ಡಿಎಂಕೆಯಿಂದ ಜಿಎಸ್ ಟಿ ಜಾರಿ ಕಾರ್ಯಕ್ರಮಕ್ಕೆ ಬಹಿಷ್ಕಾರ. ಎನ್ ಸಿಪಿ ಮತ್ತು ಜೆಡಿಯು ಭಾಗಿ

* ಜಿಎಸ್ ಟಿ ಜಾರಿಯ ಕೆಲ ಗಂಟೆಗಳ ಮುಂಚೆ ದೇಶದಾದ್ಯಂತ ಇರುವ ನಾನಾ ಮಳಿಗೆಗಳಲ್ಲಿ ದಾಸ್ತಾನುಗಳ ಮಾರಾಟ. ಶೇ ನಲವತ್ತರವರೆಗೆ ರಿಯಾಯ್ತಿ. ಈ ಹಿಂದೆ ಇದ್ದ ಹನ್ನೆರಡಕ್ಕೂ ಹೆಚ್ಚು ತೆರಿಗೆಗಳು ಹೋಗಿ ಜಿಎಸ್ ಟಿ ಎಂಬ ಏಕ ರೂಪ ತೆರಿಗೆ ಜಾರಿಗೆ ಬರಲಿದೆ.

* @GST_GOI ಎಂಬ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಜಿಎಸ್ ಟಿ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲು ಆರಂಭಿಸಿದ ಸರಕಾರ. ಸಾವಿರಾರು ಮಂದಿಯಿಂದ ಹೊಸ ದರ ಮತ್ತಿತರ ವಿವರಗಳ ಬಗ್ಗೆ ಪ್ರಶ್ನೆ

* ಜಿಎಸ್ ಟಿ ಕೌನ್ಸಿಲ್ ನ ಮುಂದಿನ ಮೂರು ಸಭೆಗಳು ಆಗಸ್ಟ್ ನಿಂದ ಪ್ರತಿ ಮೊದಲನೇ ಶನಿವಾರದಂದು ನಡೆಯುತ್ತವೆ

* ಜಿಎಸ್ ಟಿ ಜಾರಿಯಿಂದ ಭಾರತ ಅಭಿವೃದ್ಧಿ ವೇಗ ಪಡೆಯುತ್ತದೆ. ಆರ್ಥಿಕತೆಗೆ ನೆರವಾಗುತ್ತದೆ. ಎಲ್ಲ ರಾಜ್ಯಗಳಿಗೂ ಅನುಕೂಲವಾಗುತ್ತದೆ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್

* ಜಿಎಸ್ ಟಿ ಜಾರಿ ವಿರುದ್ಧ ತೆಲಂಗಾಣ ಪ್ರತಿನಿಧಿಸುವ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಆನಂದ ಭಾಸ್ಕರ್ ರೋಪಲು ಸಂಸತ್ ನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ

LIVE updates of GST implemantation

* ಜಿಎಸ್ ಟಿ ವಿರೋಧಿಸಿ ತಮಿಳುನಾಡಿನ ಚಿತ್ರಮಂದಿರಗಳ ಮಾಲೀಕರು ಜುಲೈ ಮೂರರಿಂದ ಎಲ್ಲ ಪ್ರದರ್ಶನ ರದ್ದುಗೊಳಿಸಲು ನಿರ್ಧರಿಸಿದ್ದಾರೆ.

English summary
LIVE updates of GST implementation from central hall of parliament, New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X