• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ?

|

ನವದೆಹಲಿ, ಮೇ 05 : ದೇಶದ ಹಲವು ರಾಜ್ಯಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಖರೀದಿಗೆ ಬರುವವರು ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ. ಮದ್ಯ ತಯಾರಕರು ಆನ್‌ಲೈನ್‌ ಮೂಲಕ ಮಾರಾಟ ಮಾಡುವ ಆಲೋಚನೆ ಹೊಂದಿದ್ದಾರೆ.

ಮದ್ಯ ಮಾರಾಟ ಅಂಗಡಿಗಳ ಮುಂದೆ ಜನ ಸಂದಣಿ ನೋಡಿ ಈ ತೀರ್ಮಾನಕ್ಕೆ ಬರಲಾಗುತ್ತಿದೆ. ಅಂಗಡಿಗಳ ಮುಂದೆ ಜನರನ್ನು ನಿಯಂತ್ರಣ ಮಾಡುವುದು ಕಷ್ಟವಾಗುತ್ತಿದೆ. ಆದ್ದರಿಂದ, ಆನ್‌ಲೈನ್ ಮೂಲಕ ಮಾರಾಟ ಮಾಡುವ ವಿಚಾರ ಬಂದಿದೆ.

ಮೊದಲ ದಿನವೇ ದಾಖಲೆ ಮದ್ಯ ಮಾರಾಟ, ಸರ್ಕಾರಕ್ಕೆ ಆರ್ಥಿಕ ಶಕ್ತಿ ತುಂಬಿದ ಮದ್ಯ ವ್ಯಸನಿಗಳು

ಸುಮಾರು 40 ದಿನಗಳ ಲಾಕ್ ಡೌನ್ ಬಳಿಕ ಕೆಲವು ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಸೋಮವಾರದಿಂದ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ.

ಎಣ್ಣೆ ಸಿಕ್ಕಿದ್ದಕ್ಕೆ ದೇವರಿಗೂ ಮದ್ಯ ಸೇವೆ ಮಾಡಿದ ಕುಡುಕ

ದೆಹಲಿ, ಪಶ್ಚಿಮ ಬಂಗಾಳ, ರಾಜಸ್ಥಾನ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ಕಡೆ ಮದ್ಯದ ಅಂಗಡಿ ಬಾಗಿಲು ತೆರೆದ ಕೆಲವೇ ಕ್ಷಣಗಳಲ್ಲಿ ಜನರನ್ನು ನಿಯಂತ್ರಿಸಲು ಸಾಧ್ಯವಾಗದೇ ಮುಚ್ಚಲಾಗಿದೆ. ಸರ್ಕಾರ ಹಾಕಿರುವ ಷರತ್ತುಗಳನ್ನು ಜನರು ಉಲ್ಲಂಘಿಸಿ ನೂಕು ನುಗ್ಗಲು ಉಂಟಾಯಿತು.

ಎಲೆಕ್ಷನ್ ಟೈಮ್ ಲಾಬಿ: ಲಿಕ್ಕರ್, ಗಣಿ, ರಿಯಲ್ ಎಸ್ಟೇಟ್

ಸೋಮವಾರ ಮದ್ಯದ ಅಂಗಡಿ ಬಾಗಿಲು ತೆರೆದಾಗ ಎಲ್ಲಾ ಬಗೆಯ ಮದ್ಯಗಳು ಇರಲಿಲ್ಲ. ಲಾಕ್ ಡೌನ್ ಪರಿಣಾಮ ಲಾರಿಗಳ ಸಂಚಾರ ಬಂದ್ ಆಗಿದ್ದು, ಸ್ಟಾಕ್ ಇದ್ದದ್ದು ಮಾತ್ರ ಖಾಲಿ ಆಗಿದೆ ಎಂದು ಭಾರತೀಯ ಆಲ್ಕೋ ಹಾಲಿಕ್‌ ಬಿವರೇಜ್‌ ಕಂಪೆನಿಗಳು (ಸಿಐಎಬಿಸಿ) ಹೇಳಿದೆ.

ಅಂಗಡಿಗಳ ಮುಂದೆ ಜನ ದಟ್ಟಣೆ ನೋಡಿ ಮದ್ಯ ತಯಾರಿಕಾ ಕಂಪನಿಗಳು ಆನ್‌ಲೈನ್ ಮೂಲಕ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿವೆ. ಇಲ್ಲವೇ ಸ್ಥಳೀಯ ಆಡಳಿತ ಜನದಟ್ಟಣೆ ಕಡಿಮೆ ಮಾಡಲು ಸಹಕಾರ ನೀಡಬೇಕು ಎಂದು ಕೇಳಿವೆ.

ಸರ್ಕಾರ ಆನ್‌ಲೈನ್ ಮಾರಾಟಕ್ಕೆ ಅವಕಾಶ ನೀಡುವ ಸಾಧ್ಯತೆ ಕಡಿಮೆ. ಜನರು ಮದ್ಯದ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಪಾಡಿಕೊಂಡು ನಿಲ್ಲಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary
After heavy rush at liquor shops alcohol makers pitched for allowing online sales.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X