ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲವೆಡೆ ಕೊರೊನಾ ನಿರ್ಬಂಧ ಸಡಿಲಿಕೆ; ಅಪಾಯದ ಎಚ್ಚರಿಕೆ ಕೊಟ್ಟ WHO

|
Google Oneindia Kannada News

ನವದೆಹಲಿ, ಜೂನ್ 08: ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿರುವ ಕಾರಣ ಕೆಲವು ದೇಶಗಳು ನಿರ್ಬಂಧಗಳನ್ನು ಸಡಿಲಗೊಳಿಸುತ್ತಿವೆ. ಆದರೆ ಪ್ರಕರಣ ಇಳಿಕೆಯಾಗುತ್ತಿದೆ ಎಂದು ಅವಸರದಲ್ಲಿ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವ ಮುನ್ನ ಲಸಿಕೆ ಹಾಕದವರ ಪ್ರಮಾಣವನ್ನೂ ಗಮನಿಸಬೇಕಿದೆ. ಅದಕ್ಕಿಂತ ಮುನ್ನವೇ ನಿರ್ಬಂಧ ಸಡಿಲಿಸಿದರೆ ಅಪಾಯಕ್ಕೆ ಆಹ್ವಾನ ಕೊಟ್ಟಂತೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಡೆಲ್ಟಾ ಒಳಗೊಂಡಂತೆ ಹಲವು ಕೊರೊನಾ ರೂಪಾಂತರಗಳ ಹರಡುವಿಕೆ ಜಾಗತಿಕವಾಗಿದೆ. ಆದರೆ ಕೊರೊನಾ ಲಸಿಕೆಗಳನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ನೀಡಿಲ್ಲ ಎಂಬುದನ್ನು ಗಮನಿಸಬೇಕು. ಹೀಗೆ ನಿರ್ಬಂಧಗಳನ್ನು ಬೇಗನೆ ಸಡಿಲಿಸಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಟೆಡ್ರೋಡ್ ಅದನಾಂ ಗೆಬ್ರೆಯೇಸುಸ್ ಹೇಳಿದ್ದಾರೆ. ಮುಂದೆ ಓದಿ...

18-44 ವರ್ಷದ 3.04 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ 18-44 ವರ್ಷದ 3.04 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ

 ಲಸಿಕೆ ಅಸಮಾನತೆ ಮತ್ತೊಂದು ಸಮಸ್ಯೆ ಸೃಷ್ಟಿಸಿದೆ

ಲಸಿಕೆ ಅಸಮಾನತೆ ಮತ್ತೊಂದು ಸಮಸ್ಯೆ ಸೃಷ್ಟಿಸಿದೆ

ಹಲವು ದೇಶಗಳಲ್ಲಿ ಲಸಿಕೆ ಅಸಮಾನತೆ ಮತ್ತೊಂದು ಸಂಕಷ್ಟವನ್ನು ಹುಟ್ಟು ಹಾಕಿದೆ. ಹಲವು ದೇಶಗಳು ಇನ್ನೂ ಅತ್ಯಂತ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಹೀಗಾಗಿ ಇಂಥ ಸಮಯದಲ್ಲಿ ಕೊರೊನಾ ಪ್ರೇರಿತ ನಿರ್ಬಂಧಗಳನ್ನು ಎಚ್ಚರಿಕೆಯಿಂದ ಸಡಿಲಿಸಬೇಕು ಎಂದು ಆರೋಗ್ಯ ಸಂಸ್ಥೆ ನಿರ್ದೇಶಕರು ಸಲಹೆ ನೀಡಿದ್ದಾರೆ.

 ಹೆಚ್ಚಿನ ಆದಾಯದ ದೇಶಗಳು ಅಧಿಕ ಮಟ್ಟದಲ್ಲಿ ಲಸಿಕೆ ನೀಡುತ್ತಿವೆ

ಹೆಚ್ಚಿನ ಆದಾಯದ ದೇಶಗಳು ಅಧಿಕ ಮಟ್ಟದಲ್ಲಿ ಲಸಿಕೆ ನೀಡುತ್ತಿವೆ

ಕೊರೊನಾ ಲಸಿಕೆ ಹಾಕಲು ಆರಂಭಿಸಿ ಆರು ತಿಂಗಳು ಕಳೆದಿವೆ. ಹೆಚ್ಚಿನ ಆದಾಯದ ದೇಶಗಳು ವಿಶ್ವದ ಸುಮಾರು 44% ಡೋಸ್‌ಗಳನ್ನು ತಮ್ಮ ಜನರಿಗೆ ನೀಡಿವೆ. ಕಡಿಮೆ ಆದಾಯದ ದೇಶಗಳು ಕೇವಲ 0.4% ನಷ್ಟು ಲಸಿಕೆ ನೀಡಿವೆ. ಈ ಪರಿಸ್ಥಿತಿಯಲ್ಲಿ ಕೆಲವು ತಿಂಗಳುಗಳಿಂದ ಯಾವುದೇ ಬದಲಾವಣೆಯಾಗಿಲ್ಲ ಎಂಬುದೇ ಆತಂಕಕಾರಿ ವಿಷಯ ಎಂದು ಹೇಳಿದ್ದಾರೆ.

 ಅತಿ ಜಾಗರೂಕವಾಗಿ ನಿರ್ಬಂಧ ಸಡಿಲಿಸಲು ಸೂಚನೆ

ಅತಿ ಜಾಗರೂಕವಾಗಿ ನಿರ್ಬಂಧ ಸಡಿಲಿಸಲು ಸೂಚನೆ

ಹಲವು ದೇಶಗಳು ಇನ್ನೂ ಅಪಾಯಕಾರಿ ಸ್ಥಿತಿಯಲ್ಲಿವೆ. ಕೊರೊನಾ ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿದ ದೇಶಗಳು ನಿರ್ಬಂಧಗಳನ್ನು ಸಡಿಲಿಸಲು ಆರಂಭಿಸಿವೆ. ಆದರೆ ಈ ಸಡಿಲಿಕೆಯನ್ನು ಅತಿ ಜಾಗರೂಕವಾಗಿ ಮಾಡಬೇಕು. ಲಸಿಕೆ ಪಡೆಯದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

 ಭಾರತದಲ್ಲಿ ಲಸಿಕೆ ಪ್ರಮಾಣ

ಭಾರತದಲ್ಲಿ ಲಸಿಕೆ ಪ್ರಮಾಣ

ದೇಶದಲ್ಲಿ ಒಟ್ಟಾರೆ ಕೋವಿಡ್-19 ಲಸಿಕೆ ನೀಡಿಕೆ ವ್ಯಾಪ್ತಿ ಜೂನ್ 7ರವರೆಗೆ 23.59 (23,59,39,165) ಕೋಟಿ ದಾಟಿದೆ. ಜೂನ್ 07ರಂದು 18 ರಿಂದ 44 ವರ್ಷದೊಳಗಿನ 16,07,531 ಫಲಾನುಭವಿಗಳಿಗೆ ಮೊದಲ ಡೋಸ್ ಮತ್ತು ಅದೇ ವಯೋಮಾನದ 68,661 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಒಟ್ಟಾರೆ 3ನೇ ಹಂತದ ಕೋವಿಡ್ ಲಸಿಕಾ ಅಭಿಯಾನ ಆರಂಭವಾದ ನಂತರ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 3,02,45,100 ಮಂದಿಗೆ ಮೊದಲ ಡೋಸ್ ಮತ್ತು 2,37,107 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಬಿಹಾರ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 18ರಿಂದ 44 ವರ್ಷ ವಯೋಮಾನದ ಸುಮಾರು 1ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ ಮೊದಲನೇ ಡೋಸ್ ಲಸಿಕೆ ಹಾಕಲಾಗಿದೆ.

English summary
Lifting COVID restrictions too quickly could be disastrous for those who are not vaccinated warns world health organisation,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X