• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಜಾ ಸುದ್ದಿ ತುಣುಕು : ಅಶ್ಲೀಲ ಸಂದೇಶ, ಕಾಂಗ್ರೆಸ್ ಶಾಸಕಿ ದೂರು

By Prasad
|
Google Oneindia Kannada News

ಮುಂಬೈ, ಫೆಬ್ರವರಿ 07 : ಮಧ್ಯಪ್ರದೇಶದ ಶಾಜಾಪುರದ ಬಳಿ ಭೋಪಾಲ್-ಉಜ್ಜೈನ್ ಪ್ಯಾಸೆಂಜರ್ ರೈಲಿನಲ್ಲಿ ಮಂಗಳವಾರ ಸ್ಫೋಟ ಸಂಭವಿಸಿದ್ದು, 6ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಗಾಯಾಳುಗಳನ್ನು ಕಾಲಾಪಿಪಾಲ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮ್ಮ ಮೊಬೈಲಿಗೆ ಅಪರಿಚಿತ ವ್ಯಕ್ತಿಗಳು ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದಾರೆಂದು ಮುಂಬೈನ ಕಾಂಗ್ರೆಸ್ ಶಾಸಕಿ ವರ್ಷಾ ಗಾಯಕ್ವಾಡ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Latest Kannada News from all over India and abroad

ವೈನಾಡು (ಕೇರಳ) : ಅನಾಥಾಶ್ರಮದಲ್ಲಿ 6 ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು 5 ಜನರನ್ನು ಬಂಧಿಸಿದ್ದು, ಅವರ ವಿರುದ್ಧ ಕೇಸನ್ನು ದಾಖಲಿಸಿದ್ದಾರೆ.

ಬೆಂಗಳೂರು : ಮ್ಯಾನ್ ಹೋಲ್ ಸ್ವಚ್ಛ ಮಾಡುವಾಗ ಮೂವರು ಕಾರ್ಮಿಕರು ಉಸಿರುಗಟ್ಟಿ ಮರಣ ಹೊಂದಿದ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ. ಮೃತರ ಕುಟುಂಬಕ್ಕೆ ಸರಕಾರ 10 ಲಕ್ಷ ರುಪಾಯಿ ಪರಿಹಾರ ಘೋಷಿಸಿದೆ. [ಮ್ಯಾನ್ ಹೋಲ್ ದುರಂತಕ್ಕೆ 3 ಬಲಿ]

ಚೆನ್ನೈ : ಶ್ರೀಲಂಕಾದ ನೌಕಾದಳದ ಗುಂಡಿಗೆ ತಮಿಳುನಾಡಿನ ಮೀನುಗಾರ ಬಲಿಯಾಗಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀಲಂಕಾದ ಕೃತ್ಯವನ್ನು ವಿರೋಧಿಸಿ ವ್ಯಕ್ತಿಯೊಬ್ಬ ರಾಮೇಶ್ವರದಲ್ಲಿ ಟೆಲಿಫೋನ್ ಟವರ್ ಏರಿ ಪ್ರತಿಭಟನೆ ನಡೆಸಿದ. ಮೃತನ ಕುಟುಂಬಕ್ಕೆ ತಮಿಳುನಾಡು ಸರಕಾರ 5 ಲಕ್ಷ ರುಪಾಯಿ ಪರಿಹಾರ ಘೋಷಿಸಿದೆ.

English summary
Latest Kannada News from all over India and abroad dated 7th March 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X