ತಾತ್ಕಾಲಿಕ ಜಾಮೀನಿನ ಅವಧಿ ಅಂತ್ಯ: ಲಾಲೂ ಮತ್ತೆ ಜೈಲಿಗೆ

ರಾಂಚಿ, ಆಗಸ್ಟ್ 30: ಅನಾರೋಗ್ಯದ ಕಾರಣ ತಾತ್ಕಾಲಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಮೇವು ಹಗರಣದ ಪ್ರಮುಖ ಆರೋಪಿ ಲಾಲೂ ಪ್ರಸಾದ್ ಮತ್ತೆ ಜೈಲು ಸೇರಿದ್ದಾರೆ.

ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದ ನಾಲ್ಕು ಪ್ರಕರಣಗಳಲ್ಲಿ ದೋಷಿಯಾಗಿರುವ ಲಾಲೂ ಲಾಲು ಪ್ರಸಾದ್ ಅವರಿಗೆ ನಾಲ್ಕು ಪ್ರಕರಣಗಳಿಂದ ಒಟ್ಟು 20.5 ವರ್ಷ ಜೈಲು ಶಿಕ್ಷೆ ಪ್ರಕಟವಾಗಿದೆ.

ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರಿಗೆ ಮೇ 11 ರಂದು ನಾಲ್ಕಯ ವಾರಗಳ ತಾತ್ಕಾಲಿಕ ಜಾಮೀನು ನೀಡಲಾಗಿತ್ತು. ಆದರೆ ಆ ಕಾಲಾವಧಿಯ ನಂತರವೂ ಅವರ ಆರೋಗ್ಯ ಸುಧಾರಿಸದ ನಿಟ್ಟಿನಲ್ಲಿ ಜಾಮೀನಿನ ಅವಧಿಯನ್ನು ವಿಸ್ತರಿಸಲಾಗಿತ್ತು.

Lalu Prasad surrenders Ranchi Highcourt after his provisional bail ends

ಆದರೆ ತಾತ್ಕಾಲಿಕ ಜಾಮೀನಿನ ಅವಧಿ ಇಂದು ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ರಾಂಚಿ ಹೈಕೋರ್ಟ್ ಅವರಿಗೆ ಶರಣಾಗಲು ಹೇಳಿತ್ತು.

ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ರಾಂಚಿಯ ರಿಮ್ಸ್ ಮತ್ತು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+