ಆರೆಸ್ಸೆಸ್ ಗಣವೇಷ, ಚಡ್ಡಿ ಬದಲು ಪ್ಯಾಂಟ್, ರಾಬ್ಡಿ ಕಾರಣ: ಲಾಲೂ

Posted By:
Subscribe to Oneindia Kannada

ಪಾಟ್ನ, ಅಕ್ಟೋಬರ್ 13: ಕಳೆದ 9 ದಶಕಗಳಿಂದ ಆರೆಸ್ಸೆಸ್ ಕಾರ್ಯಕರ್ತರು ಖಾಕಿ ಚಡ್ಡಿಗಳನ್ನು ತಮ್ಮ ಗಣ ವೇಷವಾಗಿ ಧರಿಸುತ್ತಾ ಬಂದಿದ್ದು ತಿಳಿದಿರಬಹುದು. ಈಗ ಚಡ್ಡಿ ಬದಲಿಗೆ ಕಡು ಕಂದು ಬಣ್ಣದ ಪ್ಯಾಂಟ್ ಗಳನ್ನು ವಿಜಯದಶಮಿ ದಿನದಿಂದ ಧರಿಸಲು ಆರಂಭಿಸಿದ್ದಾರೆ. ಈ ಬದಲಾವಣೆಗೆ ಆರ್ ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರ ಪತ್ನಿ ಕಾರಣವಂತೆ.

ಆರೆಸ್ಸೆಸ್ ಡ್ರೆಸ್ ಕೋಡ್ ಬದಲಾವಣೆಯಾಗಲು ನನ್ನ ಪತ್ನಿ ರಾಬ್ಡಿ ದೇವಿ ಕಾರಣ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಅವರು ಮತ್ತೊಮ್ಮೆ ಹೇಳಿದ್ದಾರೆ. [ಮೋಹನ್ ಭಾಗವತ್ ವಿಜಯದಶಮಿ ಭಾಷಣ]

Lalu Prasad credits wife Rabri Devi for RSS dropping half-pants

ಈ ಮುಂಚೆ ಮಾರ್ಚ್ ತಿಂಗಳಲ್ಲಿ ಆರೆಸ್ಸೆಸ್ ಡ್ರೆಸ್ ಕೋಡ್ ಬದಲಾವಣೆ ಬಗ್ಗೆ ಸುದ್ದಿ ಬಂದಾಗಲೇ ಈ ಡೈಲಾಗ್ ಹೊಡೆದಿದ್ದರು. ಈಗ ಮತ್ತೊಮ್ಮೆ ವಿಜಯದಶಮಿಯ ಆರೆಸ್ಸೆಸ್ ಪಥ ಸಂಚಲನ ನೋಡಿ ಡೈಲಾಗ್ ರಿಪೀಟ್ ಮಾಡಿದ್ದಾರೆ.[ಶಿಸ್ತಿನ ಚಡ್ಡಿಯಿಂದ ಪ್ಯಾಂಟಿಗೆ ಬದಲಾಯಿತು RSS ಗಣವೇಷ]
Lalu Prasad credits wife Rabri Devi for RSS dropping half-pants

ನಾವು ಪ್ಯಾಂಟ್ ಧರಿಸುವಂತೆ ಆರೆಸ್ಸೆಸ್ಸಿಗೆ ಈ ಮುಂಚೆ ಹೇಳಿದ್ದೆವು. ಅವರಿಗೆ (ಆರೆಸ್ಸೆಸ್ ಮಂದಿಗೆ) ನಾಚಿಕೆಯಿಲ್ಲ, ಬುದ್ಧಿಯಿಲ್ಲವೆಂದು ನನ್ನ ಪತ್ನಿ ರಾಬ್ರಿ ಹೇಳಿದ್ದಳು. ಸಂಘಟನೆಯ ಹಿರಿಯರು ಕೂಡಾ ನಾಚಿಕೆಯಿಲ್ಲದೆ ಅರ್ಧ ಚಡ್ಡಿ ಧರಿಸಿ ಅತ್ತಿತ್ತ ಹೋಗುತ್ತಾರೆ ಎಂದೂ ಆಕೆ ಹೇಳಿದ್ದಳು. ರಾಬ್ಡಿ ಹೇಳಿಕೆ ನಂತರ ಈಗ ಪ್ಯಾಂಟಿಗೆ ಬದಲಾಗಿದೆ ಎಂದು ಲಾಲೂ ಟ್ವೀಟ್ ಮಾಡಿದ್ದಾರೆ.

ರಾಜಸ್ಥಾನದ ಜೈಪುರ ಬಳಿಯ ನಾಗೌರ್ ನಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿಗಳ ನೀತಿ ನಿರ್ಧಾರಕ ಸಭೆಯಲ್ಲಿ (ಮಾ 13) ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಯಿತು. ಹೊಸ ಡ್ರೆಸ್ ಕೋಡ್ ಇದೇ ವಿಜಯದಶಮಿಯ ದಿನದಿಂದ ಜಾರಿಗೆ ಬರಲಿದೆ. [ಹೆಚ್ಚಿನ ಮಾಹಿತಿಗೆ ಇಲ್ಲಿ ಓದಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
RJD chief Lalu Prasad on Wednesday credited his wife and former Bihar Chief Minister Rabri Devi for the change in the RSS's dress code from khaki shorts to trousers.
Please Wait while comments are loading...