ಕದಂಕಕ್ಕೆ ಉರುಳಿದ ಲಾರಿ, 12 ಮಂದಿ ಕಾರ್ಮಿಕರು ಬಲಿ
ಕುಪ್ಪಂ(ಆಂಧ್ರಪ್ರದೇಶ), ಜೂನ್ 17: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಬಳಿ ಮಾವಿನಹಣ್ಣು ತುಂಬಿದ್ದ ಲಾರಿಯೊಂದು ಕಂದಕಕ್ಕೆ ಉರುಳಿದೆ. ಶನಿವಾರ ತಡರಾತ್ರಿ ನಡೆದ ಈ ದುರ್ಘಟನೆಯಲ್ಲಿ 12 ಕಾರ್ಮಿಕರು ಮೃತಪಟ್ಟಿದ್ದು, 27ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.
ಮೃತರು ತಮಿಳುನಾಡಿನ ವಾಣಿಯಾಂಬಡಿ ಮೂಲದವರೆಂದು ಗುರುತಿಸಲಾಗಿದೆ. ಮೃತರ ಪೈಕಿ ನಾಲ್ವರು ಮಹಿಳೆಯರಿದ್ದಾರೆ. ಚಾಲಕನ ಅಜಾಗರೂಕತೆಯಿಂದ ಅತಿವೇಗವಾಗಿ ಲಾರಿ ಚಲಿಸಿದ್ದರಿಂದ, ನಿಯಂತ್ರಣ ತಪ್ಪಿದೆ ಎಂದು ತಿಳಿದು ಬಂದಿದೆ.

ಪೆದ್ದವಂಕ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಡೆದ ಈ ದುರ್ಘಟನಾ ಸ್ಥಳಕ್ಕೆ ಕುಪ್ಪಂ ಪೊಲೀಸರು ಭೇಟಿ ನೀಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.












Click it and Unblock the Notifications