KSRTC: ಮಾಸಿಕ ಗುರಿ ಆಧಾರಿತ ವೇತನ ನಿಯಮ ಜಾರಿಗೆ ನಿರ್ಧಾರ, ವಿರೋಧ

ಕಾರ್ಮಿಕ ಸಂಘಟನೆಗಳ ವಿರೋಧದ ನಡುವೆಯೂ ತಿಂಗಳ ಗುರಿ ಆಧಾರದಲ್ಲಿ ವೇತನ ನೀಡುವ ಹಳೆಯ ನಿರ್ಧಾರ ಜಾರಿಗೆ ತರಲು KSRTC ನಿರ್ಧರಿಸಿದೆ. ಗುರಿ ತಲುಪದಿದ್ದರೆ ನಿಗಮದ ಡಿಪೋ ಅಧಿಕಾರಿಗಳು ದುಷ್ಪರಿಣಾಮ ಎದುರಿಸಲಿದ್ದಾರೆ.

ತಿರುವನಂತಪುರಂ, ಮಾರ್ಚ್ 06: ಕಾರ್ಮಿಕ ಸಂಘಟನೆಗಳ ವಿರೋಧದ ನಡುವೆಯೂ ತಿಂಗಳ ಗುರಿ ಆಧಾರದಲ್ಲಿ ವೇತನವನ್ನು ನೀಡುವ ಹಳೆಯ ನಿರ್ಧಾರವನ್ನು ಜಾರಿಗೆ ತರಲು KSRTC ನಿರ್ಧರಿಸಿದೆ. ಈ ನಿರ್ಧಾರದಂತೆ ಗುರಿ ತಲುಪದಿದ್ದರೆ ನಿಗಮದ ಡಿಪೋ ಅಧಿಕಾರಿಗಳು ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಾರಿಗೆ ಸಚಿವರು ತಿಳಿಸಿದ್ದಾರೆ.

ಹೌದು, ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಆಡಳಿತ ಮಂಡಳಿ ಹಳೆದ ನಿಯಮ ಜಾರಿಗೆ ಮುಂದಾಗಿದೆ. ಮೊದಲ ಹಂತದಲ್ಲಿ, ಆದಾಯದ ಗುರಿಯನ್ನು ಪೂರೈಸುವ ಜವಾಬ್ದಾರಿಯು ವೈಯಕ್ತಿಕ ಉದ್ಯೋಗಿಗಳ ಮೇಲೆ ಇರದೇ, ಡಿಪೋಗಳ ಮೇಲೆ ಇರುತ್ತದೆ. ಗುರಿ ತಲುಪುವ ಜವಾಬ್ದಾರಿಯನ್ನು ಚಾರ್ಜ್‌ಮನ್, ಇನ್ಸ್‌ಪೆಕ್ಟರ್, ಜಿಲ್ಲಾ ಸಾರಿಗೆ ಅಧಿಕಾರಿಗಳು (ಡಿಟಿಒಗಳು) ಮತ್ತು ಸಹಾಯಕ ಸಾರಿಗೆ ಅಧಿಕಾರಿಗಳು (ಎಟಿಒಗಳು) ನಡುವೆ ಹಂಚಲಾಗುತ್ತದೆ ಎಂದು ಸಾರಿಗೆ ಸಚಿವ ಆಂಟನಿ ರಾಜು ತಿಳಿಸಿದ್ದಾರೆ. ಡಿಪೋ ಮಟ್ಟದಲ್ಲಿ ಗುರಿ ತಲುಪಲು ಸಾಧ್ಯವಾಗದಿದ್ದರೆ, ಹೊಣೆ ಹೊತ್ತವರ ಮೇಲೆ ಅದು ಪರಿಣಾಮ ಬೀರುತ್ತದೆ ಎಂದರು.

KSRTC Decided To Old System Implement Of Target Based Payment And Monthly Goals

ಕೆಎಸ್‌ಆರ್‌ಟಿಸಿ ನಿಗಮವು ಸಾಮಾನ್ಯ ವರ್ಗದಿಂದ ಸೂಪರ್‌ ಕ್ಲಾಸ್‌ ವರ್ಗದ ಬಸ್‌ಗಳು ವರೆಗೆ ಆದಾಯದ ಗುರಿ ಹೊಂದಿವೆ. ನೌಕರರು ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರಿಗೆ ಇದೇ ತಿಂಗಳ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಗುರಿ ತಲುಪುದು ಹೇಗೆ, ಗುರಿ ಆಧಾರಿತ ಸಂಬಳ ಬಗ್ಗೆ ತರಬೇತಿ ನೀಡಲಾಗುವುದು ಎಂದು KSRTC ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಿಜು ಪ್ರಭಾಕರ್ ಮಾಹಿತಿ ನೀಡಿದರು.

215-265 ಕೋಟಿ ರೂ. ಆದಾಯದ ಗುರಿ

KRSTC ಸದ್ಯದ ಆದಾಯ ಮಾಸಿಕ 200 ಕೋಟಿ ರೂಪಾಯಿ ಇದೆ. ಈ ಆದಾಯವನ್ನು 265 ರೂ.ಗೆ ಹೆಚ್ಚಿಸಿ ಹೊಸ ಗುರಿ ನಿಗದಿಪಡಿಸಲಾಗಿದೆ. ಮಳೆಗಾಲ ಮತ್ತು ರಜೆಯ ಕಾರಣ ಕಡಿಮೆ ಪ್ರಯಾಣಿಕರಿರುವ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ತಿಂಗಳಿಗೆ 215 ಕೋಟಿ ರೂ. ತಲುಪುವಂತೆ ಗುರಿ ನಿಗದಿ ಮಾಡಲಾಗಿದೆ.

KSRTC Decided To Old System Implement Of Target Based Payment And Monthly Goals

ಈ ಗುರಿಯನ್ನು ಡಿಪೋಗಳ ಮಧ್ಯದಲ್ಲಿ ವಿಂಗಡಣೆ ಮಾಡಲಾಗಿದೆ. ತಿಂಗಳಿಗೆ ಕೇವಲ 28 ದಿನಗಳು ಇರುವುದರಿಂದ ಫೆಬ್ರವರಿ ತಿಂಗಳ ಆದಾಯ 178 ಕೋಟಿ ರೂ.ಗೆ ಟಾರ್ಗೆಟ್‌ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಟಿಕೆಟ್ ತಪಾಸಣೆ ಚುರುಕುಗೊಳಿಸಲು ಸೂಚನೆ

ಕೆಎಸ್‌ಆರ್‌ಟಿಸಿ ಡಿಪೋದ ಜವಾಬ್ದಾರಿ ನಿರ್ವಹಿಸುತ್ತಿರುವ ಮುಖ್ಯ ಅಧಿಕಾರಿಗಳು (ಡಿಟಿಒ, ಎಟಿಒ) ಮಾಸಿಕ 10 ದಿನಗಳ ಕಾಲ ಬಸ್‌ಗಳ ತಪಾಸಣೆ ನಡೆಸಬೇಕು. ಕನಿಷ್ಠವೆಂದರೂ ಮಾಸಿಕ 20 ಬಸ್‌ ಪರಿಶೀಲಿಸಬೇಕು. ಬಸ್ ಚೆಕ್ಕರ್‌ಗಳು ನಡೆಸುವ ನಿಯಮಿತ ಟಿಕೆಟ್ ತಪಾಸಣೆಗೆ ಇದು ಹೆಚ್ಚುವರಿ ಆಗಲಿದೆ ಎನ್ನಲಾಗಿದೆ. ಜೊತೆಗೆ ಸ್ವಿಫ್ಟ್ ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣದಂತಹ ಅಪರಾಧಗಳು ಕಂಡು ಬಂದಲ್ಲಿ ನಿರ್ವಾಹಕರಿಗೆ ಟಿಕೆಟ್ ದರದ 10 ಪಟ್ಟು ದಂಡ ವಿಧಿಸಬೇಕು. ತಪಾಸಣೆ ಸ್ಥಳದಲ್ಲೇ ಅಧಿಕಾರಿಗಳು ದಂಡದ ಮೊತ್ತದ 25ರಷ್ಟು ನಿರ್ವಾಹಕರಿಂದ ಪಡೆಯುತ್ತಾರೆ. ಕಡಿಮೆ ಶುಲ್ಕ ವಿಧಿಸಿದ ಸಾಮಾನು ಸರಂಜಾಮುಗಳಿಗೆ ಅಥವಾ ಯಾವುದೇ ಶುಲ್ಕವನ್ನು ಸಂಗ್ರಹಿಸದಿದ್ದಲ್ಲಿ ದಂಡವನ್ನು ವಿಧಿಸಲಾಗುತ್ತದೆ.

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಫೆಬ್ರವರಿ ತಿಂಗಳ ವೇತನ ಎರಡು ಕಂತುಗಳಲ್ಲಿ ನೀಡಲಾಗುವುದು. ಮೊದಲ ಕಂತಿನ ವಿತರಣೆ ಶನಿವಾರ ತಡವಾಗಿ ಆರಂಭವಾಗಿದ್ದು, ಇಂದು (ಮಾರ್ಚ್ 5) ಪೂರ್ಣಗೊಳ್ಳಲಿದೆ. ರಾಜ್ಯ ಹಣಕಾಸು ಇಲಾಖೆ ಭಾನುವಾರ ನಿನ್ನೆ ಕೆಎಸ್ ಆರ್ ಟಿಸಿಗೆ 30 ಕೋಟಿ ರೂ. ಹಂಗಾಮಿ ನೌಕರರು ಸೇರಿದಂತೆ ಎಲ್ಲ ನೌಕರರಿಗೆ ಅರ್ಧದಷ್ಟು ವೇತನ ನೀಡಲುKSRTC 39 ಕೋಟಿ ರೂ. ವೇತನವನ್ನು ಕಂತುಗಳಲ್ಲಿ ಪಾವತಿಸುವುದಾಗಿ ಹೇಳಿದೆ. ಆದರೆ ಇದಕ್ಕೆ ಕಾರ್ಮಿಕ ಯೂನಿಯನ್‌ಗಳಿಂದ ವಿರೋಧ ಕೇಳಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+