ಕೊಲ್ಹಾಪುರದಲ್ಲಿ ನದಿಗೆ ಉರುಳಿದ ಬಸ್: 13 ಜನ ದುರ್ಮರಣ
ಕೊಲ್ಹಾಪುರ, ಜನವರಿ 27: 16 ಜನ ಪ್ರಯಾಣಿಕರನ್ನು ಹೊತ್ತಿದ್ದ ಮಿನಿ ಬಸ್ ವೊಂದು ನದಿಗೆ ಉರುಳಿದ ಪರಿಣಾಮ 13 ಜನ ಮೃತರಾದ ದಾರುಣ ಘಟನೆ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಜ.26 ರ ರಾತ್ರಿ ಮಹಾರಾಷ್ಟ್ರದ ಕೊಲ್ಹಾಪುರದ ಪಂಚಗಂಗಾ ನದಿಗೆ ಬಸ್ಸು ಉರುಳಿದ ಪರಿಣಾಮ ಈ ಘಟನೆ ಸಂಭವಿಸಿದೆ.
ಬಸ್ಸು ರತ್ನಗಿರಿಯಿಂದ ಕೊಲ್ಹಾಪುರಕ್ಕೆ ತೆರಳುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಮೃತರಾದ ಎಲ್ಲಾ ಪ್ರಯಾಣಿಕರು ಪುಣೆ ಮೂಲದವರು ಎಂಬುದು ತಿಳಿದುಬಂದಿದೆ.

ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications