• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಗೆಪಾಟಲಿಗೀಡಾದ ಕೇಂದ್ರ ಸಚಿವರ ಕೇರಳ ಪ್ರವಾಹದ ಟ್ವೀಟ್

By Mahesh
|

ಬೆಂಗಳೂರು, ಆಗಸ್ಟ್ 23: ಕೇಂದ್ರ ಸಚಿವ ಕೆ ಅಲ್ಫೋನ್ಸ್ ಅವರು ಕೇರಳ ಪ್ರವಾಹದ ಬಗ್ಗೆ ನಿರಂತರವಾಗಿ ಮಾಹಿತಿ ನೀಡುತ್ತಾ ಬಂದಿದ್ದಾರೆ. ಆದರೆ, ಇತ್ತೀಚಿನ ಅವರ ಟ್ವೀಟೊಂದು ನಗೆಪಾಟಲಿಗೀಡಾಗಿದೆ. ಕೇರಳದ ಪ್ರವಾಹ ಪೀಡಿತರು ಇರುವ ಪುನರ್ವಸತಿ ಕೇಂದ್ರದಲ್ಲಿ ಮಲಗಿ ನಿದ್ದೆ ಮಾಡುವ ಚಿತ್ರ ವೈರಲ್ ಆಗುತ್ತಿದೆ.

'ನಾನು ಚಂಗನಚ್ಚೇರಿಯ ಪುನರ್ವಸತಿ ಕೇಂದ್ರದಲ್ಲಿ ನಿನ್ನೆ ರಾತ್ರಿ ನಿದ್ದೆ ಮಾಡಿದೆ. ನಾಳೆಯ ಬಗ್ಗೆ ಅನೇಕರಿಗೆ ನಾಳೆಯ ಬಗ್ಗೆ ಅನಿಶ್ಚಿತತೆಯಿರುತ್ತದೆ' ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು. ಜತೆಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಟ್ಯಾಗ್ ಮಾಡಿದ್ದರು.

ಆದರೆ, ಸಚಿವರ ಉದ್ದೇಶವನ್ನು ತಮ್ಮ ಮನಬಂದಂತೆ ಬಳಸಿಕೊಂಡ ಕೆಲವರು ಅಲ್ಫೋನ್ಸ್ ಅವರನ್ನು ಗೇಲಿ ಮಾಡಿ #Kannanthanamsleepchallenge ಎಂದು ಅವರ ಹೆಸರಿನಲ್ಲೇ ಸವಾಲು ಹಾಕಿ ತಾವು ಮಲಗಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದು ನನ್ನ ಸಿಬ್ಬಂದಿ ಹಾಕಿದ ಚಿತ್ರ ಎಂದು ಸಚಿವರು ಸ್ಪಷ್ಟನೆ ನೀಡಿದರೂ ಗೇಲಿ ಮಾಡುವುದು ನಿಂತಿಲ್ಲ. ಈ ರೀತಿ ಚಿತ್ರ ಹಾಕಿ ಪ್ರಚಾರ ಪಡೆಯುವುದು ಬೇಕಿಲ್ಲ. ರಾಜಕೀಯ ಗಿಮಿಕ್ ಗಳನ್ನು ಗುರುತಿಸದ್ದಷ್ಟು ದಡ್ಡರಲ್ಲ ನಾವು, ಕೇಂದ್ರ ಸರ್ಕಾರಕ್ಕೆ ಇಂಥ ಗಿಮಿಕ್ ಬೇಡ ಎಂದು ಟ್ವೀಟ್ ಮಾಡಲಾಗಿದೆ.

#Kannanthanamsleepchallenge

#Kannanthanamsleepchallenge

ಕೇರಳದ ಪ್ರವಾಹ ಪೀಡಿತರು ಇರುವ ಪುನರ್ವಸತಿ ಕೇಂದ್ರದಲ್ಲಿ ಮಲಗಿ ನಿದ್ದೆ ಮಾಡುವ ಚಿತ್ರ ವೈರಲ್ ಆಗುತ್ತಿದೆ. #Kannanthanamsleepchallenge ಎಂದು ಅವರ ಹೆಸರಿನಲ್ಲೇ ಸವಾಲು ಹಾಕಿ ತಾವು ಮಲಗಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದು ನನ್ನ ಸಿಬ್ಬಂದಿ ಹಾಕಿದ ಚಿತ್ರ ಎಂದು ಸಚಿವರು ಸ್ಪಷ್ಟನೆ ನೀಡಿದರೂ ಗೇಲಿ ಮಾಡುವುದು ನಿಂತಿಲ್ಲ.

ಗಮನಿಸಿ, ನಾನು ನಿದ್ದೆ ಮಾಡುತ್ತಿದ್ದೇನೆ

ಗಮನಿಸಿ, ನಾನು ನಿದ್ದೆ ಮಾಡುತ್ತಿದ್ದೇನೆ ನಾನೇ ಫೋಟೊ ಹಾಕಿದ್ದೇನೆ, ಮಲಗಿಕೊಂಡೆ ಅಪ್ಲೋಡ್ ಮಾಡಿದ್ದೇನೆ ಎಂದು ಗೇಲಿ ಮಾಡಿದ ಸಾರಾ.

ಚರ್ಚೆಗೆ ಕಾರಣವಾದ ಸಚಿವರ ಟ್ವೀಟ್

ಕೇಂದ್ರ ಪ್ರವಾಸೋದ್ಯಮ ಸಚಿವರ ಟ್ವೀಟ್ ಚರ್ಚೆಗೆ ಕಾರಣವಾಗಿದ್ದು, ಕೆಲವರು ತಮಾಷೆ ಮಾಡಿದ್ದರೆ, ಮತ್ತೆ ಕೆಲವರು ಇಂಥ ಗಿಮಿಕ್ ಬೇಡ, ರಕ್ಷಣಾ ಕಾರ್ಯ, ಪುನರ್ವಸತಿ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದಿದ್ದಾರೆ.

ಪ್ರವಾಹ ಪರಿಸ್ಥಿತಿ ಅವಲೋಕಿಸಿದ ಮೋದಿ

ಕೇರಳದ ಪ್ರವಾಹ ಪರಿಸ್ಥಿತಿ ಅವಲೋಕಿಸಿದ ಪ್ರಧಾನಿ ಮೋದಿಗೆ ಕಂಡ ದೃಶ್ಯ ಹೀಗಿದೆ ಎಂದು ಅಲ್ಫೋನ್ ಮಲಗಿರುವ ಚಿತ್ರ ಹಾಕಲಾಗಿದೆ.

ನಾನಾ ರೀತಿ ವ್ಯಾಖ್ಯಾನಗಳು ಬರುತ್ತಿವೆ

ಸಚಿವರ ನಿದ್ದೆ ಟ್ವೀಟ್ ಗೆ ನಾನಾ ರೀತಿ ವ್ಯಾಖ್ಯಾನಗಳು ಬರುತ್ತಿವೆ. ರಾತ್ರೋರಾತ್ರಿ ಯಾರಿಗೋ ಮೆಸೇಜ್ ಮಾಡುವಾಗ ಸಿಕ್ಕಿಬಿದ್ದರೆ ಹೀಗೆ ಮಲಗುವುದು.

ಈಗ ನಾನು ಗಂಟೆಗಟ್ಟಲೇ ನಿದ್ರಿಸುತ್ತೇನೆ

ಸಚಿವರ ನಿದ್ದೆ ಚಾಲೆಂಜ್ ಸ್ವೀಕರಿಸಿದ ಬಳಿಕ ಈಗ ನಾನು ಗಂಟೆಗಟ್ಟಲೇ ನಿದ್ರಿಸುತ್ತೇನೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union minister Alphons Kannanthanam, who has been regularly sharing details about the devastating floods in Kerala on social media, today became a butt of jokes after posting pictures of himself sleeping at a relief camp in the southern state

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more