'ಮೋದಿ ನಪುಂಸಕ: ಸಲ್ಮಾನ್ ಹೇಳಿಕೆಗೆ ಖಂಡನೆ'
ಫಾರುಕಾಬಾದ್,ಉ.ಪ್ರ. ಫೆ.26: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು 'ಬಾವಿಯೊಳಗಿನ ಕಪ್ಪೆ' ಎಂದು ಕರೆದಿದ್ದ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಈಗ ಮತ್ತೊಮ್ಮೆ ಬಾಯಿ ಚಪಲ ತೀರಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಒಬ್ಬ ನಪುಂಸಕ ವ್ಯಕ್ತಿ ಎಂದಿದ್ದಾರೆ. ಆದರೆ, ಸಲ್ಮಾನ್ ಹೇಳಿಕೆಗೆ ಬಿಜೆಪಿಯಿಂದ ತಣ್ಣನೆಯ ಪ್ರತಿಕ್ರಿಯೆ ಬಂದಿದೆ. ಸಲ್ಮಾನ್ ಅವರ ಬಗ್ಗೆ ಮರುಕ ಪಡುತ್ತೇವೆ ಎಂದಷ್ಟೇ ಪ್ರತಿ ಹೇಳಿಕೆ ಸಿಕ್ಕಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಮಾತ್ರ ಸಲ್ಮಾನ್ ಹೇಳಿಕೆಗೆ ಪರ ವಿರೋಧ ಪ್ರತಿಕ್ರಿಯೆಗಳ ಮಹಾಪೂರ ಹರಿದು ಬಂದಿದೆ.
ಫಾರುಕಾಬಾದ್ ಚುನಾವಣಾ ಭಾಷಣ ಮಾಡುವ ವೇಳೆ 2002ರ ಗುಜರಾತ್ ಗೋಧ್ರಾ ಹತ್ಯಾಕಾಂಡ ಬಗ್ಗೆ ಮಾತನಾಡಿದ ಸಲ್ಮಾನ್ ಖುರ್ಷಿದ್, ಗಲಭೆಗಳನ್ನು ನಿಯಂತ್ರಿಸುವಲ್ಲಿ ನರೇಂದ್ರ ಮೋದಿಯ ವೈಫಲ್ಯವಾಗಿದ್ದರು. ಗಲಭೆ ನಿಯಂತ್ರಿಸಲಾಗದ ಮೋದಿ ಒಬ್ಬ ಕೈಲಾಗದ ಅಥವಾ ನಪುಂಸಕ ವ್ಯಕ್ತಿ ಎಂದು ಮೂದಲಿಸಿದರು.
"ಕೆಲ ಜನರು ಬಂದು, ಪ್ರಹಾರ ಮಾಡಿದರು ಮತ್ತು ಹೊರಟುಹೋದರು. ರಕ್ಷಣೆ ಮಾಡಲು ನಿಮಗೆ ಸಾಧ್ಯವಾಗಲಿಲ್ಲ. ನೀವೊಬ್ಬ ಬಲಶಾಲಿಯೇ?" ಎಂದು ಮೋದಿಯನ್ನ ಖುರ್ಷಿದ್ ಪ್ರಶ್ನಿಸಿದ್ದಾರೆ. "ನೀವು ಜನರನ್ನ ಕೊಂದಿದ್ದೀರೆಂದು ನಾವು ಆರೋಪಿಸುತ್ತಿಲ್ಲ. ನೀವು ನಪುಂಸಕರಿದ್ದೀರಿ ಎಂಬುದು ನಮ್ಮ ಆರೋಪ. ನಿಮಗೆ ಹಂತಕರನ್ನ ತಡೆಯಲು ಸಾಧ್ಯವಾಗಲಿಲ್ಲ" ಎಂದು ಸಲ್ಮಾನ್ ಟೀಕಿಸಿದ್ದಾರೆ.
ಬಿಜೆಪಿ ಖಂಡನೆ ಸಲ್ಮಾನ್ ಖುರ್ಷಿದ್ ಅವರ ಈ ಹೇಳಿಕೆಯನ್ನ ತೀರಾ ಅಸಭ್ಯ. ಲೋಕಸಭೆ ಚುನಾವಣೆಯಲ್ಲಿ ಸೋಲು ಮೈಮೇಲೆ ಎರಗುವ ಸಂಭವ ಹೆಚ್ಚಾಗಿರುವುದರಿಂದ ಹತಾಶೆಯಲ್ಲಿ ಕಾಂಗ್ರೆಸ್ ಮುಖಂಡರು ಇಂಥ ನೀಚ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಮುಖಂಡರು ಪ್ರತಿಕ್ರಿಯಿಸಿದ್ದಾರೆ. [ಎಲೆಕ್ಟ್ರಾನಿಕ್ ಮಾಧ್ಯಮ ಹೊಸಕಿಹಾಕುತ್ತೇನೆ]

ಸಲ್ಮಾನ್ ಖುರ್ಷಿದ್ ಅವರ ಈ ಹೇಳಿಕೆಗೆ ಖಂಡನೆ
ಸಲ್ಮಾನ್ ಖುರ್ಷಿದ್ ಅವರ ಈ ಹೇಳಿಕೆಯನ್ನ ತೀರಾ ಅಸಭ್ಯ ಎಂದು ಬಿಜೆಪಿ ಖಂಡಿಸಿದೆ. ಲೋಕಸಭೆ ಚುನಾವಣೆಯಲ್ಲಿ ಸೋಲು ಮೈಮೇಲೆ ಎರಗುವ ಸಂಭವ ಹೆಚ್ಚಾಗಿರುವುದರಿಂದ ಹತಾಶೆಯಲ್ಲಿ ಕಾಂಗ್ರೆಸ್ ಮುಖಂಡರು ಇಂಥ ನೀಚ ಹೇಳಿಕೆ ನೀಡಿದ್ದಾನ್ನನ್ನ ತಾನು ಸುಶಿಕ್ಷಿತ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ತಲೆಕೆಟ್ಟವನಂತೆ ಇಂಥ ಹೇಳಿಕೆ ನೀಡಿರುವುದು ದುರದೃಷ್ಟಕರ ಎಂದು ಭಾರತೀಯ ಜನತಾ ಪಕ್ಷದ ನಾಯಕರು ಖೇದ ವ್ಯಕ್ತಪಡಿಸಿದ್ದಾರೆ.

ನಪುಂಸಕ ಮಾನದಂಡವಾದರೆ ಕೇಜ್ರಿವಾಲ್ ಕಥೆ?
ನಪುಂಸಕ ಮಾನದಂಡವಾದರೆ ಕೇಜ್ರಿವಾಲ್ ಪ್ರಧಾನಿ ಮಂತ್ರಿ ಪಟ್ಟಕ್ಕೆ ಮೊದಲ ಅಭ್ಯರ್ಥಿ
|
ಕಾಂಗ್ರೆಸ್ ಕಚೇರಿಗಳನ್ನು ಬಂದ್ ಮಾಡಿ ಆಸ್ಪತ್ರೆ
ಕಾಂಗ್ರೆಸ್ ಕಚೇರಿಗಳನ್ನು ಬಂದ್ ಮಾಡಿ ಆಸ್ಪತ್ರೆ ತೆರೆಯುವುದು ಒಳ್ಳೆಯದು ಸಲ್ಮಾನ್ ರಂಥ ಡಾಕ್ಟರ್ ಗಳು ಸಿಗುತ್ತಾರೆ
|
ಸಲ್ಮಾನ್ ಅವರು ಏನು ತಪ್ಪು ಹೇಳಿಲ್ಲ,
ಸಲ್ಮಾನ್ ಅವರ ಹೇಳಿಕೆಯನ್ನು ತಿರುಚಲಾಗಿದೆ. ಇದು ಮಾಧ್ಯಮಗಳ ಕೆಲಸ.
|
ಸಲ್ಮಾನ್ ಯಾವಾಗ ತಿವಾರಿ ಕ್ಲಾಸ್ ಗೆ ಸೇರಿದ್ರು
ಸಲ್ಮಾನ್ ಯಾವಾಗ ಎನ್ ಡಿ ತಿವಾರಿ ಪುರುಷತ್ವ ಪರೀಕ್ಷೆ ಕ್ಲಾಸ್ ಗೆ ಸೇರಿದ್ರು
|
ಸಲ್ಮಾನ್ ಖುರ್ಷಿದ್ ಅವರಿಗೆ ಪಾಪ ಕನ್ ಫ್ಯೂಸ್
ಸಲ್ಮಾನ್ ಖುರ್ಷಿದ್ ಅವರಿಗೆ ಪಾಪ ಕನ್ ಫ್ಯೂಸ್ ಆಗಿದೆ.
|
ಮಾನಸಿಕ ಅಸ್ವಸ್ಥರನ್ನು ಏನು ಮಾಡಬೇಕು
ಸಲ್ಮಾನ್ ಖುರ್ಷಿದ್ ಅವರಂಥ ಮಾನಸಿಕ ಅಸ್ವಸ್ಥರನ್ನು ಏನು ಮಾಡಬೇಕು
|
ಇಂಗ್ಲೀಷ್ ಗೊತ್ತಿದ್ದರೆ ಸಂಸ್ಕಾರ ಬರುತ್ತಾ?
ಸಲ್ಮಾನ್ ಖುರ್ಷಿದ್ ಅವರೇ ಇಂಗ್ಲೀಷ್ ಗೊತ್ತಿದ್ದರೆ ಸಂಸ್ಕಾರ ಬರುತ್ತಾ? ನಂಗ್ಯಾಕೋ ಡೌಟು
-
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್












Click it and Unblock the Notifications