Droupadi Murmu Speech Highlights: 77ನೇ ಸ್ವಾತಂತ್ರ್ಯೋತ್ಸವ, ದ್ರೌಪದಿ ಮುರ್ಮು ಭಾಷಣದ ಮುಖ್ಯಾಂಶಗಳು
ನವದೆಹಲಿ, ಆಗಸ್ಟ್ 14: ಪ್ರತಿಯೊಬ್ಬ ಭಾರತೀಯನು ಜಾತಿ, ಧರ್ಮ, ಭಾಷೆಯಂತಹ ಅನೇಕ ಗುರುತುಗಳನ್ನು ಹೊಂದಿದ್ದಾನೆ. ಆದರೆ ಭಾರತೀಯ ಪ್ರಜೆ ಎಂಬ ಗುರುತು ಅದೆಲ್ಲವುಗಳಿಗಿಂತಲೂ ಹೆಚ್ಚಿನ ಸ್ಥಾನಮಾನವಾಗಿದೆ ಎಂದು ರಾಷ್ಟ್ರಪತಿ ದೌಪದಿ ಮುರ್ಮು ಹೇಳಿದರು.
ಮಂಗಳವಾರ ಆಗಸ್ಟ್ 15ರಂದು 77ನೇ ಸ್ವಾತಂತ್ರ್ಯೋತ್ಸವದ ಆಚರಣೆ ನಡೆಯಲಿದ್ದು, ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಇದಕ್ಕು ಮುನ್ನಾ ಸೋಮವಾರ ಸಂಜೆ ಸ್ವಾತಂತ್ರ್ಯೋತ್ಸವ ಮತ್ತು ದೇಶವನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾತನಾಡಿದರು.

ಭಾಷಣ ಆರಂಭಕ್ಕೂ ಮುನ್ನ ಅವರು, ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಮಾತಂಗಿನಿ ಹಜ್ರಾ, ಕನಕಲತಾ ಬರುವಾ ಮತ್ತಿತರರನ್ನು ಅವರು ಸ್ಮರಿಸಿ ಗೌರವ ಸಲ್ಲಿಸಿದರು. ದೇಶದ ಜನರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು.
ಪ್ರತಿಯೊಬ್ಬ ಭಾರತೀಯನು ಸಮಾನ ನಾಗರಿಕ, ಪ್ರತಿಯೊಬ್ಬರಿಗೂ ಈ ನೆಲದಲ್ಲಿ ಸಮಾನ ಅವಕಾಶ, ಹಕ್ಕುಗಳು ಮತ್ತು ಕರ್ತವ್ಯಗಳಿವೆ. ಈ ದಿನ ನಮಗೆಲ್ಲರಿಗೂ ವೈಭವದ ಮತ್ತು ಮಂಗಳಕರ ಸಂದರ್ಭವಾಗಿದೆ. ಹಬ್ಬದ ಸಂಭ್ರಮ ಕಂಡು ಸಂತಸವಾಗಿದೆ.
ಈ ಸ್ವಾತಂತ್ರ್ಯದ ಹಬ್ಬವನ್ನು ಆಚರಿಸಲು ಮಕ್ಕಳು, ಯುವಕರು ಮತ್ತು ಹಿರಿಯರು ಸೇರಿದಂತೆ ಎಲ್ಲರೂ ನಗರಗಳು ಮತ್ತು ಹಳ್ಳಿಗಳಲ್ಲಿ, ಎಲ್ಲೆಡೆ ಹೇಗೆ ಉತ್ಸಾಹದಿಂದ ತಯಾರಿ ನಡೆಸುತ್ತಿದ್ದಾರೆ ಎಂಬುದನ್ನು ನಾವು ನೋಡಬಹುದು. ಆಜಾದಿ ಕಾ ಅಮೃತ್ ಮಹೋತ್ಸವವನ್ನು ಜನರು ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
G20 ಅಧ್ಯಕ್ಷತೆ ವಹಿಸಿದ ಭಾರತ ವಿಶ್ವದಾದ್ಯಂತ ನೀರ್ಣಾಯಕ ಪಾತ್ರ
ಭಾರತ ದೇಶವು G-20 ಸಭೆಯ ಅಧ್ಯಕ್ಷ ಸ್ಥಾನ ವಹಿಸುವ ಮೂಲಕ ಪ್ರಪಂಚದಾದ್ಯಂತ ಅಭಿವೃದ್ಧಿ ಮತ್ತು ಮಾನವೀಯ ಗುರಿಗಳನ್ನು ಉತ್ತೇಜಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ಇಂದು ಭಾರತ ವಿಶ್ವ ವೇದಿಕೆಯಲ್ಲಿ ತನ್ನ ಸರಿಯಾದ ಸ್ಥಾನವನ್ನು ಮರಳಿ ಪಡೆದಿರುವುದನ್ನು ಗಮನಿಸಬಹುದು. ಅಂತಾರಾಷ್ಟ್ರೀಯ ಕ್ರಮದಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಂಡಿದೆ ಎಂದು ರಾಷ್ಟ್ರಪತಿಗಳು ಬಣ್ಣಿಸಿದರು.
ಭಾರತ ಅಂತಾರಾಷ್ಟ್ರೀಯ ವೇದಿಕೆಗಳ ನಾಯಕತ್ವವನ್ನು ವಹಿಸಿಕೊಂಡಿದೆ. G-20 ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು ಪ್ರತಿನಿಧಿಸುವುದರಿಂದ, ಜಾಗತಿಕ ಭಾಷಣವನ್ನು ಸರಿಯಾದ ದಿಕ್ಕಿನಲ್ಲಿ ರೂಪಿಸಲು ಸಹಾಯ ಮಾಡಲು ಭಾರತಕ್ಕೆ ಒಂದು ಅದ್ಭುತ ಅವಕಾಶ ಸಿಕ್ಕಂತಾಗಿದೆ.
ಜಿ 20ಯ ಜವಾಭ್ದಾರಿ ಸ್ಥಾನ ವಹಿಸಿದ್ದರಿಂದ ಭಾರತವು ವ್ಯಾಪಾರ ಮತ್ತು ಹಣಕಾಸಿನಲ್ಲಿ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸಮಾನ ಪ್ರಗತಿಯತ್ತ ಸಾಗುತ್ತಿದೆ. ವ್ಯಾಪಾರ ಮತ್ತು ಹಣಕಾಸುಗಳ ಹೊರತಾಗಿ, ಮಾನವ ಅಭಿವೃದ್ಧಿಯ ವಿಷಯಗಳು ಮೇಲೆ ದೇಶ ಗಮನ ಹರಿಸಿದೆ. ಜಾಗತಿಕ ಸಮಸ್ಯೆಗಳೊಂದಿಗೆ ವ್ಯವಹರಿಸುವಲ್ಲಿ ಸಹ ಭಾರತದ ನಾಯಕತ್ವವವನ್ನು ಈಗಾಗಲೇ ಸದಸ್ಯ ರಾಷ್ಟ್ರಗಳು ಸಮರ್ಥಿಸಿಕೊಳ್ಳಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಂಸ್ಕೃತಿ ಜಗತ್ತನ್ನು ಪ್ರಕೃತಿಯಿಂದ ದೂರವಾಗುತ್ತಿದೆ: ಮುರ್ಮು
ದುರಾಸೆಯಿಂದಾಗಿ ನಾವು ಸಂಸ್ಕೃತಿಯು ಜಗತ್ತನ್ನು ಪ್ರಕೃತಿಯಿಂದ ದೂರವಿಡಲಾಗುತ್ತಿದೆ. ಹಾಗಾಗಬಾರದು, ನಾವು ನಮ್ಮ ಸಾಂಸ್ಕೃತಿಯ ಬೇರುಗಳಿಗೆ ಹಿಂತಿರುಗಬೇಕು ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ ಎಂದು ರಾಷ್ಟ್ರಪತಿಗಳ ತಿಳಿಸಿದರು.
ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿ: ರಾಷ್ಟ್ರಪತಿ
ಭಾರತದ ದೇಶದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ವಿಶೇಷ ಗಮನ ನೀಡಲಾಗುತ್ತಿದೆ ಎಂಬುದು ಅತ್ಯಂತ ಸಂತಸದ ಸಂಗತಿಯಾಗಿದೆ. ಆರ್ಥಿಕ ಸಬಲೀಕರಣವು ಸಹಕುಟುಂಬ ಮತ್ತು ಸಮಾಜದಲ್ಲಿ ಮಹಿಳೆಯರ ಸ್ಥಾನವನ್ನು ಬಲಪಡಿಸುತ್ತದೆ ಎಂದರು.

ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲು ನಾನು ಎಲ್ಲಾ ಸಹ ನಾಗರಿಕರನ್ನು ಒತ್ತಾಯಿಸುತ್ತೇನೆ. ನಾನು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಧೈರ್ಯದಿಂದ ಸವಾಲುಗಳನ್ನು ಎದುರಿಸಿ ಜೀವನದಲ್ಲಿ ಮುನ್ನಡೆಯಬೇಕು. ಮಹಿಳೆಯರ ಅಭಿವೃದ್ಧಿ ನಮ್ಮ ಸ್ವಾತಂತ್ರ್ಯ ಹೋರಾಟದ ಆದರ್ಶಗಳಲ್ಲಿ ಒಂದಾಗಿದೆ ಎಂದು ಅವರು ಸಲಹೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಬದಲಾವಣೆ
ಶಿಕ್ಷಣವು ಸಾಮಾಜಿಕ ಸಬಲೀಕರಣದ ಅತ್ಯುತ್ತಮ ಸಾಧನವಾಗಿದೆ. ಭಾರತ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿಯು (NEP) ಬದಲಾವಣೆ ತರಲು ಪ್ರಾರಂಭಿಸಿದೆ. ಈ ನೀತಿಯು ಈಗಷ್ಟೇ ಅಲ್ಲದೇ ಭವ್ಯ ಭಾರತದ ಭವಿಷ್ಯದಲ್ಲಿಯೂ ಅನೇಕ ಹೊಸ ಪರಿವರ್ತನೆಗಳನ್ನು ತರಲಿದೆ ಎಂದು ಅವರು ತಿಳಿಸಿದರು.
ಪ್ರಾಚೀನದಿಂದ ಭಾರತ ಪ್ರಜಾಪ್ರಭುತ್ವದ ತಾಯಿ: ದ್ರೌಪದಿ ಮುರ್ಮು
ಬ್ರೀಟಿಷರ ಆಳ್ವಿಕ ಕೊನೆಗೊಂಡ ಬಳಿಕ 1947 ರಲ್ಲಿ ಭಾರತವು ಹೊಸ ಉದಯಕ್ಕೆ ತೆರೆದುಕೊಂಡಿತು. ನಾವು ವಿದೇಶಿ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಮಾತ್ರವಲ್ಲದೆ ನಮ್ಮ ಹಣೆಬರಹವನ್ನು ಪುನಃ ಬರೆಯುವ ಸ್ವಾತಂತ್ರ್ಯವನ್ನೂ ಗೆದ್ದಿದ್ದೇವೆ. ಭಾರತ ಪ್ರಜಾಪ್ರಭುತ್ವದ ತಾಯಿ, ಪ್ರಾಚೀನ ಕಾಲದಿಂದಲೂ ನಾವು ತಳಮಟ್ಟದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಹೊಂದಿದ್ದೇವೆ ಎಂದು ಅವರು ಅವರು ತಿಳಿಸಿದರು.
ಸರ್ಕಾರ, ಆರ್‌ಬಿಐ ಹಣದುಬ್ಬರ ಸಂಕಷ್ಟ ನಿರ್ವಹಣೆಯಲ್ಲಿ ಯಶಸ್ವಿ
ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಆತಂಕಕ್ಕೆ ಕಾರಣವಾಗಿತ್ತು. ಆದರೆ ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಆರ್‌ಬಿಐ ಇದನ್ನು ಯಶಸ್ವಿಯಾಗಿ ನಿಯಂತ್ರಿಸಿವೆ ಎಂದು ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು.
G-20 ಗೆ ಸಂಬಂಧಿಸಿದ ಘಟನೆಗಳ ಬಗ್ಗೆ ದೇಶದ ಜನರು/ನಾಗರಿಕರು ಉತ್ಸಾಹದಿಂದ ಗಮನಿಸುತ್ತಿದ್ದಾರೆ. ಈ ಪ್ರಜ್ಞೆ ಸಬಲೀಕರಣದದೊಂದಿಗೆ ಮುಂದುವರಿದಿದ್ದೆ ಆದಲ್ಲಿ ಭಾರತ ಎಲ್ಲಾ ರಂಗಗಳಲ್ಲಿ ಮಹತ್ತರವಾದ ದಾಪುಗಾಲು ಹಾಕಲಿದೆ.
ಭಾರತದ ಆರ್ಥಿಕತೆಯು ಪ್ರಕ್ಷುಬ್ಧ ಸಮಯದಲ್ಲಿ ಚೇತರಿಸಿಕೊಳ್ಳುವುದು ಮಾತ್ರವಲ್ಲದೆ ಇತರರಿಗೆ ಭರವಸೆ ಹುಟ್ಟಿಸಿದೆ. ಕೋವಿಡ್ ಸಾಂಕ್ರಾಮಿಕ ರೋಗವು ಅಂತಾರರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕತೆ ಮೇಲೆ ಪರಿಣಾಮ ಬೀರಿದರೂ ಸಹ ಭಾರತದ ಆರ್ಥಿಕತೆ ಸದೃಢವಾಗುತ್ತಿದೆ ಎಂದು ತಿಳಿಸಿದ ರಾಷ್ಟ್ರಪತಿಗಳು, ದೇಶದ ಜನರಿಗೆ ಮತ್ತೊಮ್ಮೆ ಸ್ವಾತಂತ್ರ್ಯೋತ್ಸವದ ಶುಭ ಕೋರಿ ಭಾಷಣ ಮುಗಿಸಿದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications