Sabarimala Ayyappaswamy: ಸೆ.13ರಂದು ತೆರೆಯಲಿದೆ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯ
ದಕ್ಷಿಣ ಭಾರತದಲ್ಲಿ ಪೂಜಿಸುವ ಜನಪ್ರಿಯ ಹಿಂದೂ ದೇವರು ಅಯ್ಯಪ್ಪಸ್ವಾಮಿಯ ದೇವಾಲಯ ಸೆಪ್ಟೆಂಬರ್ 13ರಂದು ತೆರೆಯಲಿದೆ. ಕೇರಳ ರಾಜ್ಯದಲ್ಲಿನ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯವು ಅತ್ಯಂತ ಪ್ರಶಿದ್ಧ ದೇವಾಲಯವಾಗಿದೆ. ಪ್ರಪಂಚದಾದ್ಯಂತದ ಜನರು ಅಯ್ಯಪ್ಪ ಸ್ವಾಮಿಯನ್ನು ಭೇಟಿ ಮಾಡಲು ಬರುತ್ತಾರೆ.
ಓಣಂ ಹಬ್ಬದ ಹಿನ್ನೆಲೆಯಲ್ಲಿ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಾಲಯವನ್ನು ಸೆಪ್ಟೆಂಬರ್ 13ರಂದು ತೆರೆಯಲಾಗುತ್ತಿದೆ. ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲನ್ನು ತೆರೆಯಲಾಗುತ್ತದೆ. ಸೆಪ್ಟೆಂಬರ್ 17ರಿಂದ ಐದು ದಿನಗಳ ಮಾಸಿಕ ಪೂಜೆ ನಡೆಯಲಿದೆ. ಸೆಪ್ಟೆಂಬರ್ 21ರಂದು ರಾತ್ರಿ 10 ಗಂಟೆಗೆ ದೇವಾಲಯವನ್ನು ಮುಚ್ಚಲಾಗುತ್ತದೆ.

ಸದಾಚಾರ ಮತ್ತು ಬ್ರಹ್ಮಚರ್ಯದ ದೇವನಾದ ಅಯ್ಯಪ್ಪ ಸ್ವಾಮಿಯನ್ನು ಮಣಿಕಂಠ, ಧರ್ಮಶಾಸ್ತಾ ಎಂದು ಕರೆಯಲಾಗುತ್ತದೆ. ಅಯ್ಯಪ್ಪನನ್ನು ಅಯ್ಯಪ್ಪ, ಸಾಸ್ತಾವು, ಹರಿಹರಸುತ, ಮಣಿಕಂಠ, ಶಾಸ್ತಾ ಮತ್ತು ಶಬರಿನಾಥ ಎಂದೂ ಕರೆಯಲಾಗುತ್ತದೆ.
ಕಾಡಿನಲ್ಲಿ ಅಯ್ಯಪ್ಪ
ಪುರಾಣಗಳ ಪ್ರಕಾರ ಮೋಹಿನಿ ಮತ್ತು ಶಿವನ ಸಂಯೋಗದಿಂದ ಶಾಸ್ತಾವು ಜನಿಸಿದರು. ದಕ್ಷಿಣ ಭಾರತದಲ್ಲಿ ಅಯ್ಯಪ್ಪ ಸ್ವಾಮಿಯ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ಶಬರಿಮಲೆಯೂ ಒಂದು. ಇದನ್ನು ದಕ್ಷಿಣದ ತೀರ್ಥಯಾತ್ರಾ ಕೇಂದ್ರ ಎಂದೂ ಕರೆಯುತ್ತಾರೆ. ರಾಜ ರಾಜಶೇಖರನಿಗೆ ಪಂಪಾ ನದಿಯ ದಡದಲ್ಲಿ ಅಯ್ಯಪ್ಪ ಸ್ವಾಮಿ ಮಗುವಿನ ರೂಪದಲ್ಲಿ ಸಿಗುತ್ತಾನೆ. ಅಯ್ಯಪ್ಪನು 12 ವರ್ಷಗಳ ಕಾಲ ರಾಜನ ಆಶ್ರಯದಲ್ಲಿ ಬೆಳೆದನು.
ಒಮ್ಮೆ ಸ್ವಾಮಿ ಅಯ್ಯಪ್ಪನು ತನ್ನ ತಾಯಿಗೆ ಸಿಂಹಿಣಿಯ ಹಾಲು ತರಲು ಕಾಡಿಗೆ ಹೋಗುತ್ತಾನೆ. ಅಲ್ಲಿ ಅಯ್ಯಪ್ಪನು ರಾಕ್ಷಸಿ ಮಹಿಷಿಯ ಸಂಹಾರವನ್ನು ಮಾಡುತ್ತಾನೆ. ಮತ್ತು ತನ್ನ ತಾಯಿಗಾಗಿ ಹುಲಿಯನ್ನೇ ತನ್ನ ವಾಹನವಾಗಿ ಮಾಡಿಕೊಂಡು ಅರಮನೆಗೆ ಬಂದು ತನ್ನ ತಾಯಿಯನ್ನು ರಕ್ಷಿಸುತ್ತಾನೆ. ಇದಾದ ನಂತರ ಸ್ವಾಮಿ ಅಯ್ಯಪ್ಪನು ಧ್ಯಾನಸ್ಥ ಸ್ಥಿತಿಗೆ ಹೋಗಲು ಬಯಸುತ್ತಾನೆ. ತನ್ನೆಲ್ಲಾ ಅರಮನೆಯ ಭೋಗವನ್ನು ತೊರೆದು ಕಾಡಿಗೆ ಹೊರಡುತ್ತಾನೆ ಎಂದು ಪುರಾಣಗಳು ಹೇಳುತ್ತವೆ.

ಅಯ್ಯಪ್ಪನು ತನ್ನ ಜೀವನದ ಗುರಿಯನ್ನು ಸಾಧಿಸಿದ ನಂತರ ಶಬರಿಮಲೆಯಲ್ಲಿ ದೈವಿಕ ಜ್ಞಾನವನ್ನು ಪಡೆದರು. ಶಬರಿಮಲೆಯಲ್ಲಿ ಅಯ್ಯಪ್ಪನ ಪೂಜೆಗಾಗಿ ಪರಶುರಾಮರು ಅಯ್ಯಪ್ಪನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ ಎಂಬ ನಂಬಿಕೆಯೂ ಇದೆ. ಮಕರ ಸಂಕ್ರಾಂತಿಯ ದಿನದಂದು ಇಲ್ಲಿ ಕಾಣುವ ದೇವ ಜ್ಯೋತಿ ಅಂದರೆ ಮಕರ ಜ್ಯೋತಿಯನ್ನು ನೋಡಲು ದೂರದೂರುಗಳಿಂದ ಕೋಟ್ಯಾಂತರ ಭಕ್ತರು ಬರುತ್ತಾರೆ.
ಮಲಯಾಳಂನಲ್ಲಿ 'ಶಬರಿ' ಎಂದರೆ ಪರ್ವತ. ಶಬರಿ ಪವರ್ತದಲ್ಲಿ ದಟ್ಟವಾದ ಕಾಡುಗಳಿವೆ. ಈ ದೇವಾಲಯವು ಅರಣ್ಯದಿಂದ ಸುತ್ತುವರಿದ 18 ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಈ ಸ್ಥಳವು ಸಹ್ಯಾದ್ರಿ ಶ್ರೇಣಿಗಳಿಂದ ಸುತ್ತುವರಿದ ಪಥನಾತಿಟಾ ಜಿಲ್ಲೆಯಲ್ಲಿದೆ. ಪಂಪಾದಿಂದ ಶಬರಿಮಲೆಗೆ ಕಾಲ್ನಡಿಗೆಯಲ್ಲಿ ಸಾಗಬೇಕು.
ಅಯ್ಯಪ್ಪನ ದರ್ಶನ
ಅಯ್ಯಪ್ಪನ ದರ್ಶನವನ್ನು ಪಡೆಯಲು, ಭಕ್ತರು ಮೊದಲು 41 ದಿನಗಳ ಕಾಲ 'ಮಂಡಲಂ' ಎಂಬ 41 ದಿನಗಳ ಉಪವಾಸ ಆಚರಣೆಯನ್ನು ಆಚರಿಸಬೇಕು. ಶಬರಿಮಲೆಗೆ ನೀವು ವರ್ಷಕ್ಕೆ ಮೂರು ಬಾರಿ ಭೇಟಿ ನೀಡಬಹುದು. ವಿಷು ಅಂದರೆ ಏಪ್ರಿಲ್ ತಿಂಗಳ ಮಧ್ಯದಲ್ಲಿ, ಮಂಡಲಪೂಜೆ ಅಂದರೆ ಮಾರ್ಗಶೀರ್ಷದಲ್ಲಿ ಮತ್ತು ಮಕರವಿಳುಕ್ಕು ಅಂದರೆ ಮಕರ ಸಂಕ್ರಾಂತಿಯಲ್ಲಿ.
ನಂಬಿಕೆಗಳ ಪ್ರಕಾರ ಭಕ್ತರು ತುಳಸಿ ಅಥವಾ ರುದ್ರಾಕ್ಷ ಮಾಲೆಹಗಳನ್ನು ಧರಿಸಿ ಉಪವಾಸದ ನಂತರ ಇಲ್ಲಿಗೆ ಬಂದರೆ, ಅವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಯಾಕೆಂದರೆ ಅಯ್ಯಪ್ಪನಿಗೆ ತುಳಸಿ ಮತ್ತು ರುದ್ರಾಕ್ಷಿ ಮಾಲೆಗಳು ಅತ್ಯಂತ ಪ್ರಿಯವೆಂದು ಹೇಳಲಾಗುತ್ತದೆ.












Click it and Unblock the Notifications