ಭಾರೀ ಮಳೆ: ಮುನ್ನಾರ್ ಬಳಿ ರೆಸಾರ್ಟ್ ನಲ್ಲಿ ಸಿಲುಕಿಕೊಂಡ 60 ಪ್ರವಾಸಿಗರು
ಮುನ್ನಾರ್, ಆಗಸ್ಟ್ 10: ಕೇರಳದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮುನ್ನಾರ್ ನ ರೆಸಾರ್ಟ್ ವೊಂದರಲ್ಲಿ 60 ಕ್ಕೂ ಹೆಚ್ಚು ಪ್ರವಾಸರು ಸಿಲುಕಿಕೊಂಡಿದ್ದಾರೆ.
ಈ ರೆಸಾರ್ಟ್ ನ ಎಲ್ಲ ರಸ್ತೆಗಳೂ ಮಳೆ ಮತ್ತು ಭೂಕುಸಿತದಿಂದಾಗಿ ನಾಶವಾಗಿದ್ದು, ಅಲ್ಲಿಂದ ಹೊರಬರಲು ಸಾಧ್ಯವಾಗದೆ ಪ್ರವಾಸಿಗರು ಒದ್ದಾಡುತ್ತಿದ್ದಾರೆ. ರೆಸಾರ್ಟ್ನಲ್ಲಿ ಸಿಕ್ಕಿಕೊಂಡ ಸುಮಾರು 20 ಕ್ಕೂ ಹೆಚ್ಚು ಪ್ರವಾಸಿಗರು ವಿದೇಶಿಯರು ಎಂಬ ಮಾಹಿತಿ ಲಭ್ಯವಾಗಿದೆ.
ಕೇರಳಕ್ಕೆ ಪ್ರವಾಸಕ್ಕೆ ಹೋಗುವ ಪ್ರವಾಸಿಗರು ಕೆಲ ದಿನಗಳ ಕಾಲ ತಮ್ಮ ಪ್ರವಾಸವನ್ನು ಮುಂದೂಡಿ ಎಂದು ಅಮೆರಿಕ ಸಹ ತನ್ನ ನಾಗರಿಕರಿಗೆ ಸೂಚನೆ ನೀಡಿದೆ.

ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇದುವರೆಗೆ 26 ಜನ ಮೃತರಾಗಿದ್ದು, ನೂರಾರು ಜನ ಗಾಯಗೊಂಡಿದ್ದಾರೆ. 10,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.
ಪ್ರವಾಹ ಸ್ಥಿತಿ ಉಲ್ಬಣಿಸಿದ ಕಾರಣ ಇಲ್ಲಿನ ಪ್ರಸಿದ್ಧ ಇಡುಕಿ ಜಲಾಶಯದ ಎಲ್ಲಾ ಐದು ಬಾಗಿಲುಗಳನ್ನು ತೆರೆಯಲಾಗಿದೆ.












Click it and Unblock the Notifications