Get Updates
Get notified of breaking news, exclusive insights, and must-see stories!

ಕಾಂಗ್ರೆಸ್‌ & ಬಿಜೆಪಿ ‘ದೆಹಲಿ ಮಾದರಿ’ ಕಾಪಿ ಮಾಡಿವೆ: ಕೇಜ್ರಿವಾಲ್ ಪಕ್ಷ!

ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ವಿಚಾರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಕಚ್ಚಾಟ ಜೋರಾಗಿ ಇರುವಾಗಲೇ, ಕೇಜ್ರಿವಾಲ್ ಪಕ್ಷ ಕೂಡ ಅಖಾಡಕ್ಕೆ ಎಂಟ್ರಿಯಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಆಮ್ ಆದ್ಮಿ ಪಕ್ಷ, ನಮ್ಮ ಯೋಜನಗಳನ್ನ ಇವರಿಬ್ಬರು ಕಾಪಿ ಮಾಡ್ತಿದ್ದಾರೆ ಅಂತಾ ಕಂಪ್ಲೇಂಟ್ ಹೇಳಿದೆ. ಹಾಗಾದ್ರೆ ಹೀಗೆ ಹೇಳಿದ್ದು ಯಾರು? ಅವರ ದೂರು ಏನು? ಇಲ್ಲಿ ತಿಳಿಯಿರಿ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಭರ್ಜರಿ ಗೆಲುವನ್ನು ಸಾಧಿಸಲು 5 ಗ್ಯಾರಂಟಿ ಯೋಜನೆಗಳ ಪ್ರಭಾವ ದೊಡ್ಡದಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಬೇರೆ ಬೇರೆ ರಾಜ್ಯಗಳ ಚುನಾವಣೆಯಲ್ಲೂ ಇದೇ ಗ್ಯಾರಂಟಿ ಅಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆಸಿದೆ. ಆದರೆ ಈ ಸಂದರ್ಭದಲ್ಲೇ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಗಂಭೀರ ಆರೋಪ ಮಾಡಿದೆ. ಅದೇನೆಂದರೆ ಕಾಂಗ್ರೆಸ್ ಮತ್ತು ಬಿಜೆಪಿ 'ದೆಹಲಿ ಮಾದರಿ' ಕಾಪಿ ಮಾಡಿವೆ ಎನ್ನುತ್ತಿದೆ. ಇದು ಮಧ್ಯಪ್ರದೇಶ ಚುನಾವಣೆಯಲ್ಲಿ ಸಂಚಲನ ಸೃಷ್ಟಿಸಿದೆ (AAP Freebies).

Kejriwal party leader alleged

ಕೇಜ್ರಿವಾಲ್ ಕಾಪಿ ಮಾಡಿದ ಬಿಜೆಪಿ-ಕಾಂಗ್ರೆಸ್?

ಹೌದು, ಕರ್ನಾಟಕ ಚುನಾವಣೆ ಬಳಿಕ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸನ್ನದ್ಧವಾಗುತ್ತಿದೆ. ಕನ್ನಡಿಗರ ಮತ ಗೆದ್ದಂತೆ, ಮಧ್ಯಪ್ರದೇಶದ ಜನರ ಮತ ಪಡೆಯಲು ಕಾಂಗ್ರೆಸ್ ನಾಯಕರು ಯತ್ನಿಸುತ್ತಿದ್ದಾರೆ. ಹೀಗಾಗಿ ಇಲ್ಲೂ ಗ್ಯಾರಂಟಿ ವಾರ್‌ಗೆ ಕಾಂಗ್ರೆಸ್ & ಬಿಜೆಪಿ ಸಜ್ಜಾಗಿರುವ ಸಂದರ್ಭದಲ್ಲೇ ಕೇಜ್ರಿವಾಲ್ ಪಕ್ಷದ ನಾಯಕರು ಅಖಾಡಕ್ಕೆ ಪ್ರವೇಶ ಮಾಡಿದ್ದಾರೆ. ಮಧ್ಯಪ್ರದೇಶ ಚುನಾವಣೆ ಗೆಲ್ಲಲು ನಮ್ಮ ಪಕ್ಷದ ಜನಪ್ರಿಯ ಯೋಜನೆಗಳನ್ನ ಘೋಷಿಸುವ ಮೂಲಕ ಕಾಂಗ್ರೆಸ್‌-ಬಿಜೆಪಿ 'ದೆಹಲಿ ಮಾದರಿ' ಕಾಪಿ ಮಾಡಿವೆ ಎಂದಿದೆ ಆಪ್. ಆಮ್‌ ಆದ್ಮಿ ಪಕ್ಷದ ಮಧ್ಯಪ್ರದೇಶ ಅಧ್ಯಕ್ಷೆ ರಾಣಿ ಅಗರ್‌ವಾಲ್‌ ಹೀಗೆ ಆರೋಪಿಸಿದ್ದಾರೆ.

ಆಪ್ ಆರೋಪ ಮಾಡಿದ್ದು ಏಕೆ

ಅಷ್ಟಕ್ಕು ಈಗ ಮಧ್ಯಪ್ರದೇಶ ಬಿಜೆಪಿ ಸರ್ಕಾರ 'ಮುಖ್ಯಮಂತ್ರಿ ಲಾಡಲೀ ಬಹನ್ ಯೋಜನೆ' ಜಾರಿಗೆ ತರುವ ಭರವಸೆ ನೀಡಿದೆ. ಈ ಯೋಜನೆಯ ಅಡಿ ಮಧ್ಯಪ್ರದೇಶದ ಸುಮಾರು 1.25 ಕೋಟಿ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳಿಗೆ ₹1,000 ವರ್ಗಾಯಿಸುವ ಭರವಸೆ ನೀಡಲಾಗಿದೆ. ಮತ್ತೊಂದ್ಕಡೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷ, ಮಹಿಳೆಯರಿಗೆ ₹1,500 ನೀಡುವುದಾಗಿ ಹೇಳಿದೆ. ಇದರ ಜೊತೆ ಗ್ಯಾಸ್‌ ಬೆಲೆ ಕಟ್ ಮಾಡುವ ಭರವಸೆ ಕೂಡ ನೀಡಿದೆ. ಹಾಗೇ 100 ಯುನಿಟ್‌ ಉಚಿತ ವಿದ್ಯುತ್‌ ಆಶ್ವಾಸನೆ ನೀಡಿದೆ. ಈ ಕಾರಣಕ್ಕೆ ಈಗ ಆಮ್ ಆದ್ಮಿ ಪಕ್ಷದ ನಾಯಕರು ರೊಚ್ಚಿಗೆದ್ದು, ವಾಗ್ದಾಳಿ ನಡೆಸಿದ್ದಾರೆ.

Kejriwal party leader alleged

2018ರಲ್ಲಿ ಎಎಪಿಗೆ ಭೀಕರ ಸೋಲು

ಆಪ್ ಮಧ್ಯಪ್ರದೇಶ ಘಟಕದ ಅಧ್ಯಕ್ಷೆ ರಾಣಿ ಅಗರ್‌ವಾಲ್‌ ಮಾತನಾಡಿ, 'ಚುನಾವಣೆಯಲ್ಲಿ ಗೆಲ್ಲುವ ಕಾರಣಕ್ಕೆ ಕಾಂಗ್ರೆಸ್ & ಬಿಜೆಪಿ ಕಲ್ಯಾಣ ಯೋಜನೆಗಳನ್ನ ಘೋಷಿಸಿ ಮತದಾರರಲ್ಲಿ ಗೊಂದಲ ಸೃಷ್ಟಿಸಿವೆ. ಯೋಜನೆ ಘೋಷಿಸಿರುವುದು ಒಂದು ಗಿಮಿಕ್‌ ಅಷ್ಟೇ. ಕೇಜ್ರಿವಾಲ್‌ ಅವರ ದೆಹಲಿ ಮಾದರಿಯ ಹಾಗೆ ಯೋಜನೆ ಜಾರಿಗೆ ತರಲು ಅವೆರಡು ಪಕ್ಷಗಳಿಗೆ ಸಾಧ್ಯವಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ. ಹಾಗೇ 'ನಾವು ಬಿಜೆಪಿ, ಕಾಂಗ್ರೆಸ್‌ ಅವರಂತೆ ಸುಳ್ಳು ಭರವಸೆ ನೀಡುವುದಿಲ್ಲ. ಸ್ಥಳೀಯ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ಚುನಾವಣೆ ಎದುರಿಸುತ್ತೇವೆ.' ಎಂದಿದ್ದಾರೆ. ಅಂದಹಾಗೆ 2018ರ ಮಧ್ಯಪ್ರದೇಶ ಚುನಾವಣೆಯಲ್ಲಿ ಎಎಪಿ 208 ಕ್ಷೇತ್ರಗಳಲ್ಲಿ ಸ್ಟರ್ಧಿಸಿ 207 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿತ್ತು.

ಹೀಗೆ 5 ಗ್ಯಾರಂಟಿಗಳ ವಾರ್ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಹೊರ ರಾಜ್ಯಗಳ ಚುನಾವಣೆಯಲ್ಲೂ ಪರೋಕ್ಷವಾಗಿ ಗ್ಯಾರಂಟಿ ಜಗಳದ ರೀತಿಯೇ ಫೈಟ್ ಶುರು ಆಗಿದೆ. ಅದರಲ್ಲೂ ಈ ಬಾರಿ ಮಧ್ಯಪ್ರದೇಶ ಚುನಾವಣೆ ಗೆಲ್ಲಲೇಬೇಕು ಅನ್ನೋ ಛಲದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಖತ್ ಫೈಟ್ ಕೊಡುತ್ತಿವೆ. ಮತದಾರರ ಮನ ಒಲಿಸಿ, ಗೆಲುವಿಗೆ ಬಲೆ ಬೀಸಿದ್ದಾರೆ. ಆದರೆ ಮತದಾರನ ಮನಸ್ಸು ಯಾರ ಕಡೆಗೋ ಗೊತ್ತಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+