ಮೋದಿ ಹಂತಕ, ರಾಹುಲ್ ಹೆಡ್ಡ: ವಿವಾದದಲ್ಲಿ ಕೇಜ್ರಿವಾಲ್
ನವದೆಹಲಿ, ಜ 29: ಸದಾ ಸುದ್ದಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಮಗುದೊಮ್ಮೆ ವಿವಾದವನ್ನು ಮೈಮೇಲೆ ಎಳೆದು ಕೊಂಡಿದ್ದಾರೆ. ಬಾಲಿವುಡ್ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಕಳುಹಿಸಿದ ಟ್ವೀಟ್ ಸಂದೇಶವನ್ನು ರಿಟ್ವೀಟ್ ಮಾಡುವ ಮೂಲಕ ಅರವಿಂದ್ ಕೇಜ್ರಿವಾಲ್ ವಿವಾದಕ್ಕೆ ಸಿಲುಕಿದ್ದಾರೆ.
ರಾಹುಲ್ ಗಾಂಧಿ ಜೊತೆ ಟೈಮ್ಸ್ ನೌ ವಾಹಿನಿಯ ಅರ್ನಬ್ ಗೋಸ್ವಾಮಿ ನಡೆಸುತ್ತಿದ್ದ ಸಂದರ್ಶನದ ವೇಳೆ ವಿಶಾಲ್ ದದ್ಲಾನಿ, ಒಬ್ಬ ನರಹಂತಕ (ಮೋದಿ) ಇನ್ನೊಬ್ಬ ಬುದ್ದಿಗೇಡಿ (ರಾಹುಲ್), ಈ ಇಬ್ಬರ ಮಧ್ಯೆ ಭಾರತ ದೇಶ ಕಥೆ ಏನಾಗ ಬೇಡ ಎಂದು ಟ್ವೀಟ್ ಮಾಡಿದ್ದರು. (ಬಿಜೆಪಿ ಮೋದಿಯ ಭೀತಿ ನಿಮ್ಮನ್ನು ಆವರಿಸಿದೆಯಾ)
ವಿಶಾಲ್ ಟ್ವೀಟ್ ಸಂದೇಶವನ್ನು ಅರವಿಂದ್ ಕೇಜ್ರಿವಾಲ್ ತನ್ನ ಅಕೌಂಟಿನಿಂದ ರಿಟ್ವೀಟ್ ಮಾಡಿ ವಿಶಾಲ್ ಸಂದೇಶಕ್ಕೆ ತನ್ನ ಸಹಮತ ವ್ಯಕ್ತ ಪಡಿಸಿದ್ದರು. ಮುಖ್ಯಮಂತ್ರಿ ಸ್ಥಾನದಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ನಡೆದು ಕೊಳ್ಳುತ್ತಿರುವ ರೀತಿ ಇದಲ್ಲ ಎಂದು ಬಿಜೆಪಿ ತಕ್ಷಣ ಪ್ರತಿಕ್ರಿಯಿಸಿದೆ.
ಯಾವುದಾದರೂ ಸಂದೇಶವನ್ನು ರಿಟ್ವೀಟ್ ಮಾಡಿದರೆ ಅದಕ್ಕೆ ತನ್ನ ಸಹಮತವಿದೆ ಎಂದರ್ಥ ಎನ್ನುವ ಕನಿಷ್ಠ ಜ್ಞಾನ ಕೇಜ್ರಿವಾಲ್ ಅವರಿಗೆ ಇಲ್ಲದಾಯಿತೇ ಎಂದು ಬಿಜೆಪಿ ಬೇಸರ ವ್ಯಕ್ತ ಪಡಿಸಿದೆ.
ವಿಶಾಲ್ ದದ್ಲಾನಿ ಹಿಂದಿ, ತೆಲುಗು ಮತ್ತು ಮರಾಠಿ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಪುನೀತ್ ರಾಜಕುಮಾರ್ ಅಭಿನಯದ 'ನಿನ್ನಿಂದಲೇ' ಚಿತ್ರದ ಒಂದು ಹಾಡನ್ನು ವಿಶಾಲ್ ದದ್ಲಾನಿ ಹಾಡಿದ್ದರು (ಪುನೀತ್ ಅಭಿನಯದ 'ನಿನ್ನಿಂದಲೇ' ಧ್ವನಿಸುರುಳಿ ವಿಮರ್ಶೆ)
ದದ್ಲಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಬಗ್ಗೆ ಅನೇಕ ಮೊನಚಾದ ಟ್ವೀಟ್ ಮಾಡಿದ್ದಾರೆ.
|
ವಿಶಾಲ್ ದದ್ಲಾನಿ ಟ್ವೀಟ್
ಒಬ್ಬ ನರಹಂತಕ, ಇನ್ನೊಬ್ಬ ಮೂರ್ಖ. ಈ ಇಬ್ಬರ ಮಧ್ಯೆ ಭಾರತದ ಭವಿಷ್ಯ ಏನಾಗ ಬೇಡ ಎಂದು ಸೋಮವಾರ (ಜ 27) ವಿಶಾಲ್ ದದ್ಲಾನಿ ಟ್ವೀಟ್ ಮಾಡಿದ್ದರು. ವಿಶಾಲ್ ದದ್ಲಾನಿ ಟ್ವೀಟ್ ಅಕೌಂಟಿಗೆ 485,000 ಜನ ಹಿಂಬಾಲಕರಿದ್ದಾರೆ.

ನಾನು ಯಾರನ್ನೂ ಹೆಸರಿಸುವುದಿಲ್ಲ
ನನ್ನ ಟ್ವೀಟ್ ಸಂದೇಶದಲ್ಲಿ ಯಾರನ್ನೂ ಹೆಸರಿಸುವುದಿಲ್ಲ. ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆಂದು ನಿಮಗೆಲ್ಲಾ ತಿಳಿದಿದೆ. ಯಾರಿಗೆ ಮತ ಹಾಕಬೇಕೆಂದು ಹೇಳುವುದಿಲ್ಲ, ಅದು ನಿಮ್ಮ ಆಯ್ಕೆ ಎಂದು ದದ್ಲಾನಿ ಟ್ವೀಟ್ ಮಾಡಿದ್ದಾರೆ.

ಮೋದಿ ಪ್ರಧಾನಿಯಾಗಬಾರದು
ಮೋದಿ ಪ್ರಧಾನಿಯಾಗಬಾರದು, ಅವರ ಟ್ರ್ಯಾಕ್ ರೆಕಾರ್ಡ ನನಗೆ ಇಷ್ಟವಾಗುವುದಿಲ್ಲ. ಆದರೆ ನೀವು ಅವರ ಪರವಾಗಿ ಮತ ಚಲಾಯಿಸಿದರೆ ಅಭಿವೃದ್ದಿ ಕೆಲಸ ಮಾಡಿಸಿ. ಪ್ರಧಾನಿಯಾದವನು ಜಾತಿ ಹೆಸರಿನಲ್ಲಿ ದೇಶ ವಿಭಜಿಸಬಾರದು ಎಂದು ದದ್ಲಾನಿ ಟ್ವೀಟ್ ಮಾಡಿದ್ದಾರೆ.
|
ಗುಜರಾತ್ ಅಭಿವೃದ್ದಿ ಆಗಿದೆಯೇ?
ಗುಜರಾತ್ ರಾಜ್ಯವನ್ನು ದೇಶದಲ್ಲೇ ಅಭಿವೃದ್ದಿಯಾದ ಮೊದಲ ದೇಶವೆನ್ನುವವರು ಆ ರಾಜ್ಯದ ಮೇಲಿರುವ 1.45 ಲಕ್ಷ ಕೋಟಿ ಸಾಲದ ಬಗ್ಗೆ ಏನನ್ನುತ್ತಾರೆ. ಅಹಮದಾಬಾದಿನ ಜುಹಾಪುರಕ್ಕೆ ಭೇಟಿ ನೀಡಿ ಮೋದಿ ಅಭಿವೃದ್ದಿ ಬಗ್ಗೆ ತಿಳಿಯುತ್ತೆ.

ನನಗೆ ಬೆದರಿಕೆ ಇದೆ
ರಾಹುಲ್ ಮತ್ತು ಮೋದಿ ಬಗ್ಗೆ ಟ್ವೀಟ್ ಮಾಡಿದ ಮೇಲೆ ನನಗೆ ಬೆದರಿಕೆ ಇದೆ. ನಾನು ಇದಕ್ಕೆ ಜಗ್ಗುವುದಿಲ್ಲ, ನಾನು ಕಳುಹಿಸಿದ ಟ್ವೀಟ್ ಸಂದೇಶ ಅದು ನನ್ನ ಅಭಿಪ್ರಾಯ.












Click it and Unblock the Notifications