ಕೆಸಿಆರ್ ಶೀಘ್ರದಲ್ಲೇ ವಿಆರ್‌ಎಸ್ ತೆಗೆದುಕೊಳ್ಳುತ್ತಾರೆ: ಜೆಪಿ ನಡ್ಡಾ
ಹೈದರಾಬಾದ್, ಡಿಸೆಂಬರ್ 16: ಟಿಆರ್‌ಎಸ್ ಬಿಆರ್‌ಎಸ್ ಆಗಿದ್ದು, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಶೀಘ್ರದಲ್ಲೇ ವಿಆರ್‌ಎಸ್ (ಸ್ವಯಂ ನಿವೃತ್ತಿ) ತೆಗೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ವ್ಯಂಗ್ಯವಾಡಿದ್ದಾರೆ.
ಮುಂದಿನ ವರ್ಷ ತೆಲಂಗಾಣ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ಎಲ್ಲಾ ವರ್ಗದ ಜನರಿಗೆ ಮನವಿ ಮಾಡಿದರು. ತೆಲಂಗಾಣ ಸಿಎಂ ಮತ್ತು ಈಗ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮುಖ್ಯಸ್ಥ ಕೆಸಿಆರ್ ಅವರು ಹೊಸದಿಲ್ಲಿಯಲ್ಲಿ ಪಕ್ಷದ ಕೇಂದ್ರ ಕಚೇರಿಯನ್ನು ಉದ್ಘಾಟಿಸಿದ ಒಂದು ದಿನದ ನಂತರ ನಡ್ಡಾ ಅವರು ಟೀಕೆ ಮಾಡಿದ್ದಾರೆ. ನವದೆಹಲಿಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಜೆಡಿ (ಎಸ್) ನಾಯಕ ಎಚ್ ಡಿ ಕುಮಾರಸ್ವಾಮಿ ಅವರಂತಹ ನಾಯಕರು ಉಪಸ್ಥಿತರಿದ್ದರು.
ಕೆಸಿಆರ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಸಾಮರ್ಥ್ಯ ಬಿಜೆಪಿಗೆ ಮಾತ್ರ ಇದೆ. ಭ್ರಷ್ಟಾಚಾರ, ಕುಟುಂಬ ಆಡಳಿತದ ವಿರುದ್ಧ ಯಾರೇ ಇರಲಿ, ನಮ್ಮೊಂದಿಗೆ ಕೈಜೋಡಿಸುವುವವರನ್ನು ನಾವು ಸ್ವಾಗತಿಸುತ್ತೇವೆ ಎಂದು ನಡ್ಡಾ ಹೇಳಿದ್ದಾರೆ. ನಡ್ಡಾ ಅವರು ಗುರುವಾರ ಕರೀಂ ನಗರದಲ್ಲಿ ರಾಜ್ಯ ಘಟಕದ ಮುಖ್ಯಸ್ಥ ಬಂಡಿ ಸಂಜಯ್ ಅವರ ಐದನೇ ಹಂತದ ಪ್ರಜಾ ಸಂಗ್ರಾಮ ಪಾದಯಾತ್ರೆಯ ಸಮಾರೋಪಕ್ಕೆ ಉತ್ತರ ತೆಲಂಗಾಣ ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಯಾತ್ರೆಯಲ್ಲಿ ಭಾಗವಹಿಸಿದ್ದರು.

ಕೆಸಿಆರ್ ಅವರು ತೆಲಂಗಾಣದಂತಹ ಶ್ರೀಮಂತ, ಆದಾಯ ತರುವ ರಾಜ್ಯವನ್ನು ಬಡ ಮತ್ತು ಸಾಲದ ಹೊರೆಯಾದ ರಾಜ್ಯವಾಗಿ ಪರಿವರ್ತಿಸಿದ್ದಾರೆ. ಆದರೆ ಅವರ ಕುಟುಂಬವು ಭ್ರಷ್ಟ ವಿಧಾನಗಳಿಂದ ಅಪಾರ ಸಂಪತ್ತನ್ನು ಸಂಗ್ರಹಿಸಿದೆ ಎಂದು ಆರೋಪಿಸಿದರು. ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಶಾಸಕಿ ಕೆ. ಕವಿತಾ ಅವರ ಹೇಳಿಕೆಯನ್ನು ಸಿಬಿಐ ದಾಖಲಿಸಿದ ಕೆಲವು ದಿನಗಳ ನಂತರ ನಡ್ಡಾ ಅವರು ಕೇಂದ್ರ ಏಜೆನ್ಸಿಗಳು ತಮ್ಮ ಮಗಳು ಕವಿತಾ ಅವರನ್ನು ತನಿಖೆ ಮಾಡುತ್ತಿವೆ ಎಂದು ಕೆಸಿಆರ್ ಕೋಪಗೊಳ್ಳಬಹುದು. ಆದರೆ ಈ ಕಾರಣವನ್ನು ಜನರು ತಿಳಿದುಕೊಳ್ಳಬೇಕು ಎಂದು ಹೇಳಿದರು.
ತೆಲಂಗಾಣದ ಅಸ್ಥಿತ್ವಕ್ಕಾಗಿ ಜನರು ಟಿಆರ್‌ಎಸ್‌ಗೆ ಎರಡು ಬಾರಿ ಮತ ಹಾಕಿದ್ದಾರೆ. ಅದನ್ನು ಈಗ ತೆಗೆದು ಹಾಕಲಾಗಿದೆ. ಇದು ಒಬ್ಬರ ಸ್ವಂತ ತಾಯಿಗೆ ದ್ರೋಹ ಬಗೆದಂತಿದೆ. ಈ ಬದಲಾವಣೆಯು ರಾಜ್ಯ ಮತ್ತು ಅದರ ಸಾರ್ವಜನಿಕರಿಗೆ ಒಳ್ಳೆಯ ದಿನಗಳ ಆರಂಭವನ್ನು ಸೂಚಿಸುತ್ತದೆ ಎಂದು ಬಂಡಿ ಸಂಜಯ್ ಹೇಳಿದರು.

3016 ಮಾಸಿಕ ಭತ್ಯೆಯ ಭರವಸೆಯೊಂದಿಗೆ ಕೆಸಿಆರ್ ಅವರು ಬಡವರು, ವಸತಿ ರಹಿತರು, ನಿವೇಶನ ರಹಿತರಿಗೆ ಭೂಮಿ, 2 ಬಿಎಚ್‌ಕೆ ಮನೆ ಮತ್ತು ನಿರುದ್ಯೋಗಿ ಯುವಕರಿಗೆ ಸುಳ್ಳು ಭರವಸೆ ನೀಡಿ ವಂಚಿಸಿದ್ದಾರೆ ಎಂದು ನಡ್ಡಾ ಆರೋಪಿಸಿದರು.












Click it and Unblock the Notifications