ತಿರುಪತಿಯಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ

ತಿರುಮಲ, ನ.19: ಕಾರ್ತಿಕ ಮಾಸ ಶಿವ ಹಾಗೂ ವಿಷ್ಣು ಆರಾಧಕರಿಗೆ ಪೂಜನೀಯವಾಗಿದೆ. ಸೋಮವಾರಗಳಂದು ಶಿವನನ್ನು ವಿಶೇಷ ರೀತಿಯಲ್ಲಿ ಪೂಜಿಸಲಾಗುತ್ತದೆ. ರಾಹುಕಾಲದಲ್ಲಿ ಶಿವನನ್ನು ಪೂಜಿಸಿದರೆ, ವಿಶೇಷವಾದ ಪುಣ್ಯ ಬರುವುದು ಎಂಬ ನಂಬಿಕೆಯಿದೆ. ಜತೆಗೆ ಎಲ್ಲೆಡೆ ಲಕ್ಷದೀಪೋತ್ಸವ, ತೆಪ್ಪೋತ್ಸವಗಳು ಸಂಭ್ರಮದಿಂದ ನಡೆಯುತ್ತದೆ.

ತಿರುಮಲ ತಿರುಪತಿ ದೇವಸ್ಥಾನದಲ್ಲೂ ಕೂಡಾ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಕಾರ್ಯಕ್ರಮ ವಿಶೇಷವಾಗಿ ಆಚರಿಸಲಾಗುತ್ತದೆ. ಪ್ರದೋಷ ಪೂಜೆ ಜತೆ ದೀಪೋತ್ಸವ ಈ ತಿಂಗಳ ವಿಶೇಷವಾಗಿದೆ. ತಿರುಪತಿಯ ದೀಪೋತ್ಸವದ ಚಿತ್ರಗಳು ಇಲ್ಲಿವೆ ನೋಡಿ

ಉಳಿದಂತೆ, ಕಾರ್ತಿಕ ಮಾಸದಲ್ಲಿ 5 ನೇ ಸೋಮವಾರ ಬಂದರೆ, ತಲಕಾಡಿನಲ್ಲಿ ಪಂಚಲಿಂಗ ದರ್ಶನವಾಗುವುದು. ಕಾರ್ತಿಕ ಮಾಸದಲ್ಲಿ ಶಿವನನ್ನು ಪೂಜಿಸಿ, ದಾನ, ಧರ್ಮ ದೀಪಾರ್ಚನೆ ಉಪಪಾಸ ವ್ರತಗಳು ಮಾಡಿದರೆ ಜನ್ಮಜನ್ಮಾಂತರದ ಪಾಪಗಳು ಪರಿಹಾರವಾಗುವುದು ಎಂದು ಶಿವಪುರಾಣದಲ್ಲಿ ಇದೆ. ಕಾರ್ತಿಕ ಮಾಸದ ಅಮಾವಾಸ್ಯೆ ದಿನ ಶಿವ ಮತ್ತು ವಿಷ್ಣು ದೇವಾಲಯದಲ್ಲಿ ಲಕ್ಷ ದೀಪೋತ್ಸವ ನಡೆಯುತ್ತದೆ.

ಈ ತಿಂಗಳು ಜ್ಞಾನಾರಾಧನೆಗೂ ಮತ್ತು ಮಂತ್ರಾ ದೀಕ್ಷಾ ಸ್ವೀಕಾರಕ್ಕೂ ಪ್ರಶಸ್ತವಾದದ್ದು. ಈ ಮಾಸದಲ್ಲಿ ನಾರಾಯಣನು ತನ್ನ ನಿದ್ರಾ ಮುದ್ರೆಯನ್ನು ಬಿಟ್ಟು ಎಚ್ಚರಿಕೆಹೊಂದುವ ಮುದ್ರೆಯನ್ನು ಭಕ್ತರಿಗೆ ತೋರಿಸುವನು ಎಂಬ ಪ್ರತೀತಿ ಇದೆ. ಬಲಿಪಾಡ್ಯಮಿ- ಗರುಡ ಪಂಚಮಿ ಯಾಜ್ಞ ವಲ್ಕ್ಯ ಜಯಂತಿ- ಉತ್ಥಾನ ದ್ವಾದಶಿ- ಚಂದ್ರ ಜಯಂತಿ- ಪಂಚಲಿಂಗ ದರ್ಶನ, ಲಕ್ಷ ದೀಪೋತ್ಸವ ಎಲ್ಲಕ್ಕೂ ಕಾರ್ತಿಕ ಮಾಸ ಪ್ರಸಿದ್ದಿ.

ಕಾರ್ತಿಕ ಮಾಸವು ಬಹಳ ಶ್ರೇಷ್ಠ ಮಾಸವಾಗಿದೆ. ಈ ತಿಂಗಳನ್ನು ಶಿವನ ಮಾಸ ಎಂದೂ ಕರೆಯುತ್ತಾರೆ. ಈ ಮಾಸದಲ್ಲಿ ಪ್ರತಿಯೊಂದು ದಿನವೂ ವಿಶೇಷದಿಂದ ಕೂಡಿದೆ. ಈ ಮಾಸದಲ್ಲಿ ಶಿವನನ್ನು ಅವನ ಬೇರೆ ಬೇರೆ ನಾಮಗಳಿಂದ ಸಾಂಕೇತಕವಾಗಿ ಆರಾಧಿಸುತ್ತಾರೆ.

ದೇಗುಲದ ಚಿತ್ರ

ದೇಗುಲದ ಚಿತ್ರ

ತಿರುಪತಿ ತಿರುಮಲ ದೇಗುಲದ ಒಳಾಂಗಣ ಚಿತ್ರ

ದೀಪದ ಸಾಲು

ದೀಪದ ಸಾಲು

ತಿರುಪತಿ ತಿರುಮಲ ದೇಗುಲದ ಅರ್ಚಕರು, ಆಡಳಿತವರ್ಗದವರು ದೀಪಗಳೊಡನೆ

ದೀಪದ ಸಾಲು

ದೀಪದ ಸಾಲು

ತಿರುಪತಿ ತಿರುಮಲ ದೇಗುಲದ ಅರ್ಚಕರು, ಆಡಳಿತವರ್ಗದವರು ದೀಪಗಳೊಡನೆ

ದೇಗುಲದ ಒಳಾಂಗಣ

ದೇಗುಲದ ಒಳಾಂಗಣ

ತಿರುಪತಿ ತಿರುಮಲ ದೇಗುಲದ ಒಳಾಂಗಣ ಚಿತ್ರ

ದೀಪದಿಂದ ದೀಪ

ದೀಪದಿಂದ ದೀಪ

ದೀಪದಿಂದ ದೀಪ ಹಚ್ಚುತ್ತಿರುವ ಟಿಟಿಡಿ ಆಡಳಿತ ಮಂಡಳಿಯವರು

ದೇವರಿಗೆ ವಿಶೇಷ ಪೂಜೆ

ದೇವರಿಗೆ ವಿಶೇಷ ಪೂಜೆ

ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ತಿರುಪತಿಯ ಅಷ್ಟೂ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ

ಲಿಂಗರೂಪಿ ಶಿವ

ಲಿಂಗರೂಪಿ ಶಿವ

ಲಿಂಗರೂಪಿ ಪರಮಶಿವನಿಗೆ ದೀಪದ ಅಲಂಕಾರ

ಭಕ್ತರಿಂದ ಸೇವೆ

ಭಕ್ತರಿಂದ ಸೇವೆ

ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ತಿರುಪತಿಯಲ್ಲಿ ಭಕ್ತರಿಂದ ಸೇವೆ

ಸಿಬ್ಬಂದಿಗಳಿಂದ ದೀಪ ಸೇವೆ

ಸಿಬ್ಬಂದಿಗಳಿಂದ ದೀಪ ಸೇವೆ

ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ತಿರುಪತಿಯಲ್ಲಿ ಸಿಬ್ಬಂದಿಗಳಿಂದ ದೀಪ ಸೇವೆ

ದೀಪ ಸೇವೆ

ದೀಪ ಸೇವೆ

ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ತಿರುಪತಿಯಲ್ಲಿ ದೇಗುಲದ ಹೊರಗೆ ದೀಪಗಳೊಡನೆ

ಪವಿತ್ರಸ್ನಾನ

ಪವಿತ್ರಸ್ನಾನ

ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ತಿರುಪತಿಯಲ್ಲಿ ಹುಣ್ಣಿಮೆ ಹಾಗೂ ಸೋಮವಾರ ದಿನಗಳಂದು ಪವಿತ್ರ ಸ್ನಾನ ಕೈಗೊಂಡಿರುವ ಭಕ್ತಾದಿಗಳು

 ಪವಿತ್ರ ಸ್ನಾನ

ಪವಿತ್ರ ಸ್ನಾನ

ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ತಿರುಪತಿಯಲ್ಲಿ ಹುಣ್ಣಿಮೆ ಹಾಗೂ ಸೋಮವಾರ ದಿನಗಳಂದು ಪವಿತ್ರ ಸ್ನಾನ ಕೈಗೊಂಡಿರುವ ಭಕ್ತಾದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+