Train: ದಸರಾ-ದೀಪಾವಳಿ ಪ್ರಯಾಣಿಕರಿಗೆ ಗುಡ್‌ನ್ಯೂಸ್! ಬೆಂಗಳೂರಿನ ವಿಶೇಷ ರೈಲುಗಳ ಸೇವೆ ನವೆಂಬರ್‌ವರೆಗೆ ವಿಸ್ತರಣೆ

ಬೆಂಗಳೂರು: ದಸರಾ, ದೀಪಾವಳಿ ಮತ್ತು ಛತ್ ಪೂಜೆ ಸೇರಿದಂತೆ ಮುಂಬರುವ ಹಬ್ಬಗಳ ಸಾಲಿನಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ವಿಶೇಷ ರೈಲುಗಳ ಅವಧಿಯ ವಿಸ್ತರಣೆ ಮಾಡಲಾಗಿದೆ. ಜೊತೆಗೆ ವಿವಿಧ ನಿಲ್ದಾಣಗಳಲ್ಲಿ ಹೆಚ್ಚುವರಿ ನಿಲುಗಡೆ ನೀಡಲಾಗುತ್ತಿದೆ. ಯಾವೆಲ್ಲ ರೈಲುಗಳ ನಿಲುಗಡೆ, ಸೇವೆಯಲ್ಲಿ ಬದಲಾವಣೆ ಆಗಿದೆ ಎಂಬ ಮಾಹಿತಿ ಇಲ್ಲಿದೆ.

ದಕ್ಷಿಣ ಕರಾವಳಿ ರೈಲ್ವೆಯು ವಿಶಾಖಪಟ್ಟಣಂ-ಎಸ್‌ಎಂವಿಟಿ ಬೆಂಗಳೂರು-ವಿಶಾಖಪಟ್ಟಣಂ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲುಗಳ (08581/08582) ಸೇವೆಯನ್ನು ವಿಸ್ತರಿಸಿದೆ. ಈ ರೈಲುಗಳು ಪ್ರಸ್ತುತ ಇರುವ ನಿಲುಗಡೆಗಳು, ವೇಳಾಪಟ್ಟಿ ಮತ್ತು ಬೋಗಿಗಳ ಸಂಯೋಜನೆಯೊಂದಿಗೆ ಮುಂದುವರಿಯಲಿವೆ.

Karnataka Trains

ಈ ರೈಲುಗಳ ಸೇವೆ ವಿಸ್ತರಣೆ

* ಪ್ರತಿ ಶುಕ್ರವಾರ ವಿಶಾಖಪಟ್ಟಣಂನಿಂದ ಹೊರಡುವ ವಿಶಾಖಪಟ್ಟಣಂ-ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (08581) ಈ ಮೊದಲು ಸೆಪ್ಟಂಬರ್ 25 ರವರೆಗೆ ಸಂಚರಿಸಲು ತಿಳಿಸಲಾಗಿತ್ತು. ಈಗ ಅದನ್ನು ಅಕ್ಟೋಬರ್ 02 ರಿಂದ ನವೆಂಬರ್ 27ರವರೆಗೆ ವಿಸ್ತರಿಸಲಾಗಿದೆ.

* ಪ್ರತಿ ಶನಿವಾರ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಡುವ ಎಸ್‌ಎಂವಿಟಿ ಬೆಂಗಳೂರು-ವಿಶಾಖಪಟ್ಟಣಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (08582) ಹಿಂದೆ ಸೆಪ್ಟಂಬರ್ 26ರವರೆಗೆ ಸಂಚರಿಸಲು ತಿಳಿಸಲಾಗಿತ್ತು. ಈಗ ಅದನ್ನು ಅಕ್ಟೋಬರ್ 03 ರಿಂದ ನವೆಂಬರ್ 28 ರವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ವಿಶೇಷ ರೈಲುಗಳು ಪ್ರತಿ ದಿಕ್ಕಿನಲ್ಲಿ ಒಂಬತ್ತು ಸಂಚಾರ ಸೇವೆ ಒದಗಿಸಲಿವೆ.

ನಾಗಲಾವಿ ಹಾಲ್ಟ್ ನಿಲ್ದಾಣ ತಾತ್ಕಾಲಿಕ ನಿಲುಗಡೆ

ಸೆಪ್ಟಂಬರ್ 22 ರಿಂದ 24ರವರೆಗೆ ನಡೆಯಲಿರುವ ದರ್ಗಾ ಶರೀಫ್ ಉರ್ಸ್ ಉತ್ಸವಕ್ಕೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ, ನಾಗಲಾವಿ ಹಾಲ್ಟ್ ನಿಲ್ದಾಣದಲ್ಲಿ ವಿವಿಧ ರೈಲುಗಳಿಗೆ ತಾತ್ಕಾಲಿಕ ನಿಲುಗಡೆ ಮಾಡಲಾಗುತ್ತಿದೆ. ಈ ಅವಧಿಯಲ್ಲಿ ತಮ್ಮ ಪ್ರಾರಂಭಿಕ ನಿಲ್ದಾಣಗಳಿಂದ ಪ್ರಯಾಣ ಆರಂಭಿಸುವ ರೈಲುಗಳ ನಿಲುಗಡೆ ಸೆಪ್ಟಂಬರ್ 22 ರಿಂದ ಸೆಪ್ಟಂಬರ್ 24ರವರೆಗೆ ಜಾರಿಯಲ್ಲಿರುತ್ತವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

* ಎಸ್ಎಸ್‌ಎಸ್ ಹುಬ್ಬಳ್ಳಿ-ಮಿರಜ್ ಡೈಲಿ ಎಕ್ಸ್‌ಪ್ರೆಸ್ ರೈಲು (17332) ನಾಗಲಾವಿ ಹಾಲ್ಟ್‌ಗೆ ನಿಲ್ದಾಣಕ್ಕೆ ಮಧ್ಯಾಹ್ನ12:30 ಗಂಟೆಗೆ ಆಗಮಿಸಿ 12:31 ಗಂಟೆಗೆ ನಿರ್ಗಮಿಸಲಿದೆ.

* ಬೆಳಗಾವಿ-ಮೈಸೂರು ವಿಶ್ವಮಾನವ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (20675) ನಾಗಲಾವಿ ಹಾಲ್ಟ್‌ಗೆ 08:47 ಗಂಟೆಗೆ ಆಗಮಿಸಿ 08:48 ಗಂಟೆಗೆ ನಿರ್ಗಮಿಸಲಿದೆ.

* ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (20676) ನಾಗಲಾವಿ ಹಾಲ್ಟ್‌‌ಗೆ 18:09 ಗಂಟೆಗೆ ಆಗಮಿಸಿ 18:10 ಗಂಟೆಗೆ ನಿರ್ಗಮಿಸಲಿದೆ.

* ಮಿರಜ್-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲು (17331) ನಾಗಲಾವಿ ಹಾಲ್ಟ್‌ಗೆ 11:57 ಗಂಟೆಗೆ ಆಗಮಿಸಿ, 11:58 ಗಂಟೆಗೆ ನಿರ್ಗಮಿಸಲಿದೆ.

ರಾಣಿ ನಿಲ್ದಾಣದಲ್ಲಿ ರೈಲುಗಳ ನಿಲುಗಡೆ

* ರಾಣಿ ನಿಲ್ದಾಣದಲ್ಲಿ ಜೋಧಪುರ-ಕೆಎಸ್‌ಆರ್ ಬೆಂಗಳೂರು-ಜೋಧಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳ (16533/16534) ಪ್ರಾಯೋಗಿಕ ನಿಲುಗಡೆ ನೀಡಲಾಗುತ್ತದೆ. ಮುಂದಿನ ಆದೇಶದವರೆಗೆ ಈ ನಿಲುಗಡೆ ಮುಂದುವರಿಯಲಿದೆ.

ಕುಪ್ಪಂನಲ್ಲಿ ರೈಲುಗಳ ಹೆಚ್ಚುವರಿ ನಿಲುಗಡೆಗೆ ಆದೇಶ

ರೈಲ್ವೆ ಮಂಡಳಿಯು ಮುಂದಿನ ಆದೇಶದವರೆಗೆ ಜಾರಿಗೆ ಬರುವಂತೆ ಕುಪ್ಪಂ ರೈಲ್ವೆ ನಿಲ್ದಾಣದಲ್ಲಿ ವಾಸ್ಕೋ ಡ ಗಾಮ-ವೇಲಂಕಣ್ಣಿ-ವಾಸ್ಕೋ ಡ ಗಾಮ ಸಾಪ್ತಾಹಿಕ ಎಕ್ಸ್'ಪ್ರೆಸ್ ರೈಲು (17315/17316) ಮತ್ತು ದಾದರ್-ಪುದುಚೇರಿ-ದಾದರ್ ತ್ರೈ-ಸಾಪ್ತಾಹಿಕ ಎಕ್ಸ್'ಪ್ರೆಸ್ ರೈಲು (11005/11006) ಹೆಚ್ಚುವರಿ ನಿಲುಗಡೆಯನ್ನು ನೀಡಲಿದೆ.

* ವಾಸ್ಕೋ ಡ ಗಾಮ-ವೇಲಂಕಣ್ಣಿ ಸಾಪ್ತಾಹಿಕ ಎಕ್ಸ್'ಪ್ರೆಸ್ ರೈಲು (17315) ಸೆಪ್ಟೆಂಬರ್ 21ರಿಂದ ವಾಸ್ಕೋ ಡ ಗಾಮಾದಿಂದ ಆರಂಭವಾಗುವ ಪ್ರಯಾಣದಿಂದ ಜಾರಿಗೆ ಬರುವಂತೆ ಕುಪ್ಪಂ ನಿಲ್ದಾಣಕ್ಕೆ 00:33 ಗಂಟೆಗೆ ಆಗಮಿಸಿ, 00:35 ಗಂಟೆಗೆ ನಿರ್ಗಮಿಸಲಿದೆ.

* ವೇಲಂಕಣ್ಣಿ-ವಾಸ್ಕೋ ಡ ಗಾಮ ಸಾಪ್ತಾಹಿಕ ಎಕ್ಸ್'ಪ್ರೆಸ್ ರೈಲು (17316) ಸೆಪ್ಟೆಂಬರ್ 22 ರಿಂದ ವೇಲಂಕಣ್ಣಿಯಿಂದ ಆರಂಭವಾಗುವ ಪ್ರಯಾಣದಿಂದ ಜಾರಿಗೆ ಬರುವಂತೆ, ಕುಪ್ಪಂ ನಿಲ್ದಾಣಕ್ಕೆ 09:33 ಗಂಟೆಗೆ ಆಗಮಿಸಿ, 09:35 ಗಂಟೆಗೆ ನಿರ್ಗಮಿಸಲಿದೆ.

* ದಾದರ್-ಪುದುಚೇರಿ ತ್ರಿ-ಸಾಪ್ತಾಹಿಕ ಎಕ್ಸ್'ಪ್ರೆಸ್ ರೈಲು (11005) ಸೆಪ್ಟಂಬರ್ 20ರಿಂದ ಜಾರಿಗೆ ಬರುವಂತೆ ಕುಪ್ಪಂ ನಿಲ್ದಾಣದಲ್ಲಿ 22:45 ಗಂಟೆಗೆ ಆಗಮಿಸಿ, 22:47 ಗಂಟೆಗೆ ನಿರ್ಗಮಿಸಲಿದೆ.

* ಪುದುಚೇರಿ-ದಾದರ್ ತ್ರಿ-ಸಾಪ್ತಾಹಿಕ ಎಕ್ಸ್'ಪ್ರೆಸ್ ರೈಲು (11006) ಸೆಪ್ಟಂಬರ್ 22 ರಿಂದ ಪುದುಚೇರಿಯಿಂದ ಆರಂಭವಾಗುವ ಪ್ರಯಾಣದಿಂದ ಜಾರಿಗೆ ಬರುವಂತೆ ಕುಪ್ಪಂ ನಿಲ್ದಾಣದಲ್ಲಿ 03:28 ಗಂಟೆಗೆ ಆಗಮಿಸಿ, 03:30 ಗಂಟೆಗೆ ನಿರ್ಗಮಿಸಲಿದೆ ಎಂದು ರೈಲ್ವೆ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+