ದೆಹಲಿಯಿಂದ ಕದ್ದ ಜೆಪಿ ನಡ್ಡಾ ಅವರ ಪತ್ನಿಯ ಕಾರು ಬನಾರಸ್‌ನಲ್ಲಿ ಪತ್ತೆ

ದೆಹಲಿ ಏಪ್ರಿಲ್ 7: ದೆಹಲಿಯಿಂದ ಕದ್ದ ಜೆಪಿ ನಡ್ಡಾ ಅವರ ಪತ್ನಿಯ ಕಾರು ಬನಾರಸ್‌ನಲ್ಲಿ ಪತ್ತೆಯಾಗಿದೆ. ಜೆಪಿ ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರ ಫಾರ್ಚುನರ್ ಕಾರನ್ನು ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿ ಮಾರ್ಚ್ 19 ರಂದು ಕಳವು ಮಾಡಲಾಗಿತ್ತು.

ಎಸ್‌ಯುವಿ ಕಾರು ಚಾಲಕ ಸರ್ವೀಸ್ ಮಾಡಿಸಿ ನಂತರ ಗೋವಿಂದಪುರಿಯಲ್ಲಿರುವ ತನ್ನ ನಿವಾಸದಲ್ಲಿ ಊಟಕ್ಕೆ ಹೋಗಿದ್ದರು. ಆಗ ಅದನ್ನು ಕಳ್ಳತನ ಮಾಡಲಾಗಿತ್ತು. ಬಳಿಕ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನಕ್ಕಾಗಿ ಹುಡುಕಾಟ ಆರಂಭಿಸಿದ್ದರು.

JP Nadda s wife s car stolen from Delhi found in Banaras

ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಪತ್ನಿ ಅವರ ಕಾರನ್ನು ವಾರಣಾಸಿಯಿಂದ ವಶಪಡಿಸಿಕೊಳ್ಳಲಾಗಿದೆ. ದೆಹಲಿ ಪೊಲೀಸ್ ಅಧಿಕಾರಿಗಳ ಪ್ರಕಾರ, ಕಳ್ಳತನದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಜೆಪಿ ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರ ಫಾರ್ಚೂನರ್ ಕಾರನ್ನು ಮಾರ್ಚ್ 19 ರಂದು ದೆಹಲಿಯ ಗೋವಿಂದಪುರಿ ಪ್ರದೇಶದಿಂದ ಕಳವು ಮಾಡಲಾಗಿತ್ತು. ಎಸ್‌ಯುವಿ ಚಾಲಕ ಸರ್ವೀಸ್‌ ಮಾಡಿಸಿ ಗೋವಿಂದಪುರಿಯಲ್ಲಿರುವ ತನ್ನ ನಿವಾಸಕ್ಕೆ ಊಟಕ್ಕೆ ತೆರಳಿದ್ದ ವೇಳೆ ಕಾರು ಕಳ್ಳತನವಾಗಿತ್ತು. ಬಳಿಕ ಪೊಲೀಸರನ್ನು ಸಂಪರ್ಕಿಸಿ ಚಾಲಕ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನಕ್ಕಾಗಿ ಹುಡುಕಾಟ ಆರಂಭಿಸಿದ್ದರು.

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಎಸ್ಯುವಿ ಕೊನೆಯದಾಗಿ ಗುರುಗ್ರಾಮ್ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ. ಅದು ಹಿಮಾಚಲ ಪ್ರದೇಶದ ನಂಬರ್ ಪ್ಲೇಟ್ ಅನ್ನು ಹೊಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದೇವೆ. ವಿಚಾರಣೆ ವೇಳೆ ಆರೋಪಿಗಳು ಆನ್ ಡಿಮ್ಯಾಂಡ್ ಎಸ್ ಯುವಿ ಕಾರನ್ನು ಕದ್ದು ನಾಗಾಲ್ಯಾಂಡ್ ಗೆ ಕೊಂಡೊಯ್ಯಲು ಮುಂದಾಗಿದ್ದರು ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+