Get Updates
Get notified of breaking news, exclusive insights, and must-see stories!

ಸಲ್ಯೂಟ್ ಇಂಡಿಯಾ ಅಭಿಯಾನ; ಗಿನ್ನಿಸ್ ದಾಖಲೆ ಬರೆದ ಜೋಶ್ ಆಪ್

ನವದೆಹಲಿ, ಸೆಪ್ಟೆಂಬರ್ 25: ಭಾರತದಲ್ಲಿ ಅತ್ಯಂತ ವೇಗವಾಗಿ ಜನಪ್ರಿಯತೆ ಗಳಿಸಿಕೊಂಡ ಕಿರುವಿಡಿಯೋ ಆಪ್ 'ಜೋಶ್' ಗಿನ್ನಿಸ್ ದಾಖಲೆ ಬರೆಯುವ ಮೂಲಕ ಇತಿಹಾಸ ಸೃಷ್ಟಿಸಿದೆ.

Josh App Creates Guinness World Record For Its Salute India Campaign For 75th Independence Day

ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್‌ 10ರಿಂದ 15, 2021ರ ನಡುವೆ ಜೋಶ್ ಆಯೋಜಿಸಿದ್ದ #SaluteIndia ಅಭಿಯಾನದ ಮೂಲಕ ಈ ಸಾಧನೆ ಸಾಧ್ಯವಾಗಿದೆ.

ಭಾರತದ ರಾಷ್ಟ್ರಗೀತೆಗೆ ಜನರು ಸಲ್ಯೂಟ್ ಮಾಡುತ್ತಿರುವ ಅತಿ ದೊಡ್ಡ ಆನ್‌ಲೈನ್ ವಿಡಿಯೋ ಸೃಷ್ಟಿಸುವ ಮೂಲಕ ವಿಶ್ವ ದಾಖಲೆಯನ್ನು ಜೋಶ್ ಬರೆದಿದೆ. ದೇಶದಲ್ಲಿ ಬಾಲ ಕಾರ್ಮಿಕ ಪದ್ಧತಿ, ಭ್ರಷ್ಟಾಚಾರ, ತಾರತಮ್ಯ ಹಾಗೂ ವರದಕ್ಷಿಣೆಯಂಥ ಸಾಮಾಜಿಕ ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶವಾಗಿ ಜನರಿಗೆ ಈ ಸಲ್ಯೂಟ್ ಇಂಡಿಯಾ ಅಭಿಯಾನದ ಮೂಲಕ ಕರೆ ನೀಡಲಾಗಿತ್ತು.

Josh App Creates Guinness World Record For Its Salute India Campaign For 75th Independence Day

ಈ ಅಭಿಯಾನದಲ್ಲಿ ಭಾಗವಹಿಸುವವರು ಜೋಶ್ ಆಪ್‌ನಲ್ಲಿ ಲಭ್ಯವಿರುವ ಹಲವು ಫಿಲ್ಟರ್‌ಗಳನ್ನು ಬಳಸಿಕೊಂಡು ಕನಿಷ್ಠ ಐದು ಸೆಕೆಂಡುಗಳ ವಿಡಿಯೋ ಮಾಡುವಂತೆ ಹೇಳಲಾಗಿತ್ತು. ರಾಷ್ಟ್ರ ಗೀತೆಯ ಹಿನ್ನೆಲೆಯೊಂದಿಗೆ ಈ ಮೇಲೆ ಹೇಳಿದ ವಿಷಯಗಳ ಕುರಿತು ತಮ್ಮ ನಿಲುವನ್ನು ವ್ಯಕ್ತಪಡಿಸುವಂತೆ ಈ ಅಭಿಯಾನದಲ್ಲಿ ಭಾಗವಹಿಸವವರಿಗೆ ತಿಳಿಸಲಾಗಿತ್ತು.

ಈ ಅಭಿಯಾನ ಬೃಹತ್ ಯಶಸ್ಸನ್ನು ಕಂಡಿದ್ದು, ಒಟ್ಟಾರೆ 29,529 ವಿಡಿಯೋಗಳು ಸಲ್ಲಿಕೆಯಾಗಿವೆ. ಈ ಸಂಖ್ಯೆ ಹಿಂದಿನ ದಾಖಲೆಯನ್ನು ಮುರಿದಿದೆ. ಫೆಬ್ರವರಿ 4, 2021ರಲ್ಲಿ ಉತ್ತರ ಪ್ರದೇಶ ಸರ್ಕಾರ ಹಾಗೂ ಜಿಲ್ಲಾಡಳಿತದ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಇಲಾಖೆ 23,529 ವಿಡಿಯೋ ತುಣುಕುಗಳ ಸೃಷ್ಟಿ ಮೂಲಕ ದಾಖಲೆ ಸೃಷ್ಟಿಸಿತ್ತು. ಇದೀಗ 29,529 ವಿಡಿಯೋಗಳ ಮೂಲಕ ಹೊಸ ದಾಖಲೆಯನ್ನು ಜೋಶ್ ಬರೆದಿದೆ.

ಜನರು ಸಲ್ಯೂಟ್ ಮಾಡುತ್ತಿರುವ ಅತಿ ದೊಡ್ಡ ಆನ್‌ಲೈನ್ ವಿಡಿಯೋ ಎಂಬ ವಿಶ್ವ ದಾಖಲೆ ಬರೆದಿರುವುದಕ್ಕೆ ನಮಗೆ ಗೌರವ ಹಾಗೂ ಸಂತೋಷವೆನಿಸುತ್ತಿದೆ. ಗಿನ್ನಿಸ್ ವಿಶ್ವ ದಾಖಲೆಯಿಂದ ಪ್ರಮಾಣಪತ್ರವನ್ನು ಪಡೆಯುವುದು ಹೆಮ್ಮೆಯ ವಿಷಯವೆನಿಸಿದೆ. ನಮ್ಮ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ದುಷ್ಟ ಪದ್ಧತಿಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ನಮ್ಮ ಸಾಮರ್ಥ್ಯ ಹಾಗೂ ಬದ್ಧತೆಗೆ ಇದು ಸಾಕ್ಷಿಯಾಗಿದೆ. ವಿಡಿಯೋ ಮಾಡಿದವರಿಗೆ, ನಮ್ಮ ಆಲೋಚನೆಯನ್ನು ವಾಸ್ತವಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ನಮ್ಮ ಆಪ್ ಬಳಕೆದಾರರಿಗೆ ಹಾಗೂ ಈ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲರಿಗೂ ನಾವು ಕೃತಜ್ಞರಾಗಿದ್ದೇವೆ ಎಂದು ಜೋಶ್ ಎಕೊಸಿಸ್ಟಂ ಮುಖ್ಯಸ್ಥ ಸುಂದರ್ ವೆಂಕಟ್ ರಾಮನ್ ಸಂತಸ ವ್ಯಕ್ತಪಡಿಸಿದ್ದಾರೆ.

ನಮ್ಮ ವೇದಿಕೆ ಸೃಷ್ಟಿಯಾಗಿದ್ದು ಭಾರತದಲ್ಲಿ, ಇರುವುದು ಕೂಡ ಭಾರತಕ್ಕಾಗಿ. ಇದು ಭಾರತೀಯ ನೆಟಿಜನ್‌ಗಳ ನಾಡಿಮಿಡಿತವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ವಿಡಿಯೋ ವೇದಿಕೆ, ಜನರು ಹಾಗೂ ಸಂಕಲ್ಪ ಎಂಬ ಮೂರು ಮುಖ್ಯ ಧ್ಯೇಯಗಳ ಮೇಲೆ ನಾವು ಕಾರ್ಯನಿರ್ವಹಿಸುತ್ತಿದ್ದು, ಇವೆಲ್ಲವೂ ಒಟ್ಟಾಗಿ ಸಾಧನೆಗೆ ನೆರವಾಗಿವೆ. ರಾಷ್ಟ್ರಕ್ಕಾಗಿ ಸಾವಿರಾರು ಭಾರತೀಯರು ಒಟ್ಟಾಗಿ ತಮ್ಮ ದೇಶಪ್ರೇಮ ಮೆರೆದಿರುವುದನ್ನು ನೋಡಲು ಹೆಮ್ಮೆಯೆನಿಸುತ್ತದೆ. ಎಂದು ಸಂಸ್ಥಾಪಕ ವೀರೇಂದರ್ ಗುಪ್ತಾ ಹಾಗೂ ಸಹ ಸಂಸ್ಥಾಪಕ ಉಮಾಂಗ್ ಬೇಡಿ ಹೇಳಿದ್ದಾರೆ.

ವಿಶ್ವ ದರ್ಜೆಯ ಮಟ್ಟದಲ್ಲಿ ಸ್ಥಳೀಯವಾಗಿ ಅಭಿವೃದ್ಧಿ ಹೊಂದಿದ, ಉನ್ನತ ಗುಣಮಟ್ಟದ ಹಾಗೂ ಅಧೀಕೃತ ವಿಡಿಯೋಗಳಿಗೆ ಮಾತ್ರ ವೇದಿಕೆಯಲ್ಲಿ ಅವಕಾಶ ನೀಡಿ, ಬೃಹತ್ ಬಳಕೆದಾರರನ್ನು ಒಳಗೊಳ್ಳುವ ವಿಷಯಗಳನ್ನು ನೀಡುತ್ತಿರುವ, ವೈಯಕ್ತೀಕರಣಕ್ಕೆ ಅವಕಾಶವಾಗಿರು Ai/ML ಸ್ಟಾಕ್ ಮೂಲಕ ಈ ವೇದಿಕೆಯು ಅತ್ಯಾಧುನಿಕ ತಂತ್ರಜ್ಞಾನ ಮುನ್ನೆಲೆಯಲ್ಲಿರುವ ಇಂಥ ಸಂದರ್ಭದಲ್ಲಿ ಹಲವು ಅವಕಾಶಗಳನ್ನು ಒದಗಿಸಿಕೊಟ್ಟಿದೆ. ನಮ್ಮ ತಂಡಕ್ಕೆ ಒಂದು ಕನಸಿನಂತೆ ಆರಂಭವಾದದ್ದು ಈಗ ದೊಡ್ಡ ಸಾಧನೆಯಾಗಿದೆ. ನಮಗೆ ನೆರವಾದ ಬಳಕೆದಾರರಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ತಿಳಿಸಿದ್ದಾರೆ.

'ಭಾರತದ ರಾಷ್ಟ್ರಗೀತೆಗೆ ಜನರು ಸಲ್ಯೂಟ್ ಮಾಡುತ್ತಿರುವ ಅತಿ ದೊಡ್ಡ ಆನ್‌ಲೈನ್ ವಿಡಿಯೋ' ಎಂಬ ಗಿನ್ನಿಸ್ ವಿಶ್ವ ದಾಖಲೆಗೆ ಜೋಶ್ ಆಪ್ ಸೇರಿರುವುದನ್ನು ಘೋಷಿಸಲು ನಮಗೆ ಸಂತಸವೆನಿಸುತ್ತಿದೆ. 29,529 ವಿಡಿಯೋಗಳನ್ನು ಸೃಷ್ಟಿಸಿದ ಹಾಗೂ ಇದಕ್ಕೆ ಕೊಡುಗೆ ನೀಡಿದ ಪ್ರತಿಯೊಬ್ಬರಿಗೂ ನಮ್ಮ ಅಭಿನಂದನೆಗಳು. ಭಾರತದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭ ದೇಶದ ಎಲ್ಲೆಡೆಯಿಂದ ಜನರನ್ನು ಡಿಜಿಟಲ್ ಆಗಿ ಒಗ್ಗೂಡಿಸಿದ ಜೋಶ್ ಆಪ್‌ಗೆ ಸಂದ ಗೌರವವಿದು' ಎಂದು ಗಿನ್ನಿಸ್ ವಿಶ್ವ ದಾಖಲೆಯ EMEA APAC ನೀಲ್ ಫೋಸ್ಟರ್ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+