Jharkhand Election 2024: ಹೇಮಂತ್ ಸೊರೆನ್ ಹೇಳಿಕೆಯಿಂದ ಕೆರಳಿದ ಬಿಜೆಪಿ
ಜಾರ್ಖಂಡ್ ವಿಧಾನಸಭೆ ಚುನಾವಣೆಯ ದಿನಾಂಕ ಶೀಘ್ರದಲ್ಲೇ ಘೋಷಣೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಪ್ರಬಲ ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪಗಳು ಶುರುವಾಗಿದೆ. ಈ ಬಾರಿ ಶತಾಯಗತಾಯ ಜಯ ಸಾಧಿಸಲು ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಹಿರಿಯ ನಾಯಕರಿಂದ ರ್‍ಯಾಲಿ ಮತ್ತು ರೋಡ್ ಶೋ ನಡೆಸಲಾಗುತ್ತಿದೆ. ಈ ನಡುವೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಇಲಿಗಳು ಎಂದು ಬಣ್ಣಿಸಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ಕೊಟ್ಟಿದೆ.
ಜಾರ್ಖಂಡ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷಗಳ ಪ್ರಚಾರ ರಂಗೇರಿದೆ. ಈ ನಡುವೆ ಸಿಎಂ ಹೇಮಂತ್ ಸೊರೆನ್ ಹೇಳಿಕೆಗೆ ಭಾರತೀಯ ಜನತಾ ಪಕ್ಷ ತಿರುಗೇಟು ನೀಡಿದೆ. ಸಾಹಿಬ್‌ಗಂಜ್‌ನಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ರಾಷ್ಟ್ರೀಯವಾದಿಗಳನ್ನು ಮತ್ತು ಜನರಿಂದ ಆಯ್ಕೆಯಾದ ಜನರನ್ನು ಇಲಿಗಳು ಎಂದು ಕರೆಯುತ್ತಾರೆ.

ಆರ್‌ಎಸ್‌ಎಸ್ ಜಾರ್ಖಂಡ್ ಮೇಲೆ ಇಲಿಗಳಂತೆ ದಾಳಿ ಮಾಡಿ ನಾಶಪಡಿಸುತ್ತಿದೆ ಎಂದು ಹೇಳಿದರು. ಈ ಶಕ್ತಿಗಳು ಮೂಳೆ ಮತ್ತು ಮದ್ಯದೊಂದಿಗೆ ನಮ್ಮ ಹಳ್ಳಿಗಳನ್ನು ಆಕ್ರಮಿಸುತ್ತಿವೆ. ಇದನ್ನು ನೀವುಗಳು ಹಿಮ್ಮೆಟ್ಟಿಸಬೇಕು ಎಂದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಸಂತಾಲ್ ಪರಗಣಕ್ಕೆ ನುಗ್ಗಿ ಭೂಮಿಯನ್ನು ಆಕ್ರಮಿಸಿಕೊಂಡಿರುವ ಬಾಂಗ್ಲಾದೇಶಿ ಒಳನುಗ್ಗುವವರ ಬಗ್ಗೆ ಹೇಮಂತ್ ಸೊರೆನ್ ಅವರ್ಯಾಕೆ ಏನನ್ನೂ ಹೇಳುವುದಿಲ್ಲ, ಏಕೆಂದರೆ ಅದು ಅವರ ಮತ ಬ್ಯಾಂಕ್ ಎಂದು ಬಿಜೆಪಿ ವಕ್ತಾರ ಶಹಜದ್ ಪೂನ್ವಾಲಾ ಟಾಂಗ್ ಕೊಟ್ಟಿದ್ದಾರೆ.
ಆದರೆ ಬಿಜೆಪಿಯು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುವ ಮೂಲಕ ಚುನಾವಣೆಗೆ ಮುನ್ನ ಕೋಮುಗಲಭೆ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಆರೋಪಿಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಗುರಿಯಾಗಿಸಿಕೊಂಡು ಹೇಮಂತ್ ಸೊರೆನ್ ಈ ಹೇಳಿಕೆ ನೀಡಿದ್ದಾರೆ.
ಹೇಮಂತ್ ಸೊರೆನ್ ಅವರು ಜಾರ್ಖಂಡ್‌ನಲ್ಲಿ ಜನಸಂಖ್ಯಾ ಬದಲಾವಣೆಯ ಬಿಜೆಪಿಯ ಆರೋಪಗಳನ್ನು ತಿರಸ್ಕರಿಸಿದರು. ಕಮಲ ನಾಯಕರು ನೆರೆಯ ರಾಜ್ಯವಾದ ಪಶ್ಚಿಮ ಬಂಗಾಳದ ಜನಸಂಖ್ಯಾ ಡೇಟಾವನ್ನು ನೋಡಬೇಕು ಎಂದು ಸಲಹೆ ನೀಡಿದರು. ಆಗ ಕ್ಷೀಣಿಸುತ್ತಿರುವ ಜನಸಂಖ್ಯೆ ಮತ್ತು ಬಾಂಗ್ಲಾದೇಶಿ ನುಸುಳುಕೋರರ ಬಗ್ಗೆ ಮಾತನಾಡಲಿ ಎಂದು ಹೇಮಂತ್ ಸೊರೆನ್ ಸಲಹೆ ನೀಡಿದರು.
ಕೇಂದ್ರದಿಂದ ದತ್ತಾಂಶವನ್ನು ತೆಗೆದುಕೊಂಡು ಯಾವ ಜಿಲ್ಲೆಯಲ್ಲಿ ಮತ್ತು ಯಾವ ರಾಜ್ಯದಲ್ಲಿ ನುಸುಳುಕೋರರ ಸಂಖ್ಯೆ ಬದಲಾಗಿದೆ ಎಂಬುದನ್ನು ನೋಡಲು ನಾನು ಅವರನ್ನು ಕೇಳಲು ಬಯಸುತ್ತೇನೆ ಎಂದು ಸೊರೆನ್ ಕಿಡಿ ಕಾರಿದರು.












Click it and Unblock the Notifications