Exit Polls 2024 Lives: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶ: ಬಿಜೆಪಿಗೆ ಅಧಿಕಾರ ಗದ್ದುಗೆ..
ಮಹಾರಾಷ್ಟ್ರ & ಜಾರ್ಖಂಡ್ ಎಕ್ಸಿಟ್ ಪೋಲ್ ರಿಸಲ್ಟ್ 2024: ಈ ಎರಡು ರಾಜ್ಯಗಳಲ್ಲಿ ಇಂದು ನವೆಂಬರ್ 20 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆಯಿತು. ಬಳಿಕ ಸಂಜೆ 6.30ಕ್ಕೆ ಎಕ್ಸಿಟ್ ಫೋಲ್ ಫಲಿತಾಂಶ (Exit Polls Result 2024) ಹೊರ ಬಿತ್ತು.
ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶವನ್ನು (Exit Polls Result) ಒಟ್ಟಾಗಿ ನೋಡಿದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿಗೆ 141-160 ಸೀಟುಗಳು ಮತ್ತು ಕಾಂಗ್ರೆಸ್ ಮೈತ್ರಿಗೆ 117ರಿಂದ 136 ಸೀಟುಗಳು ಲಭಿಸುವ ನಿರೀಕ್ಷೆ ಇದೆ. ಇತರ ಪಕ್ಷಗಳಿಗೆ 10-15 ಸೀಟುಗಳು ಬರಬಹುದು ಎನ್ನಲಾಗಿದೆ.
ಅದೇ ರೀತಿ ಜಾರ್ಖಂಡ್‌ನಲ್ಲಿ ಬಿಜೆಪಿಗೆ 37-41 ಸೀಟುಗಳು ಮತ್ತು ಕಾಂಗ್ರೆಸ್ ಕೂಟದ ಪಕ್ಷಗಳಿಗೆ 35-41 ಸೀಟುಗಳು ಬರಲಿದ್ದು, ಇತರ ಪಕ್ಷಗಳಿಗೆ 3-5 ಸ್ಥಾನಗಳು ಲಭಿಸಲಿವೆ ಎಂದು ಒಟ್ಟಾರೆ ಎಕ್ಸಿಟ್ ಪೋಲ್ ಅಂಶಗಳು ತಿಳಿಸಿವೆ. ಕಾಂಗ್ರೆಸ್ ಅನೇಕ ನಾಯಕರು ಎಕ್ಸಿಟ್ ಪೋಲ್ ಫಲಿತಾಂಶವನ್ನು ನಾವು ನಂಬುವುದಿಲ್ಲ ಎಂದಿದ್ದಾರೆ. ಅಧಿಕೃತ ಫಲಿತಾಂಶವನ್ನು ನವೆಂಬರ್ 23ರಂದು ಶನಿವಾರ ಚುನಾವಣೆ ಆಯೋಗ ಪ್ರಕಟಿಸಲಿದೆ.
ಮಹಾರಾಷ್ಟ್ರದಲ್ಲಿ 288 ಸೀಟುಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆದರೆ, ಜಾರ್ಖಂಡ್ 81 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಿತು. ಬಿಜೆಪಿ ಹಾಗೂ ಕಾಂಗ್ರೆಸ್ ನೇತೃತ್ವದಲ್ಲಿ ವಿವಿಧ ಪಕ್ಷಗಳು ತೀವ್ರ ಪೈಪೋಟಿ ಒಡ್ಡಿವೆ.







#WATCH | Bokaro: On #JharkhandElection2024 Exit Polls, former State Congress chief Rajesh Thakur says, "We believe in 'exact polls', not the exit polls... Whatever the decision would be on November 23, we will respect it..." pic.twitter.com/T1xg9v63w7
— ANI (@ANI) November 20, 2024


ಪೀಪಲ್ ಪಲ್ಸ್ ಎಕ್ಸಿಟ್ ಪೋಲ್ (ಮಹಾರಾಷ್ಟ್ರ)


ಎಕ್ಸಿಟ್ ಪೋಲ್ ಎಂದರೇನು?
















Click it and Unblock the Notifications