• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಸೇರ್ಪಡೆ, ಹೆಚ್ಚಿದ ಬಲ

|

ರಾಂಚಿ, ನವೆಂಬರ್ 01: ಜಾರ್ಖಂಡ್ ರಾಜ್ಯದ ಮಾಜಿ ಮುಖ್ಯಮಂತ್ರಿ ಮಧು ಖೋಡಾ ಅವರು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಬಲ ಹೆಚ್ಚಿದಂತಾಗಿದೆ.

ಮಧು ಖೋಡಾ ಅವರು ಮೊದಲಿಗೆ ಬಿಜೆಪಿ ಪಕ್ಷದಲ್ಲಿದ್ದರು, ಅದೇ ಪಕ್ಷದಿಂದ ಮಂತ್ರಿ ಸಹ ಆಗಿದ್ದರು ಆ ನಂತರ ಪಕ್ಷ ತೊರೆದು ವಿವಿಧ ಪಕ್ಷಗಳನ್ನು ಒಗ್ಗೂಡಿಸಿಕೊಂಡು, ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿದೆ ಮುಖ್ಯಮಂತ್ರಿ ಆಗಿದ್ದರು.

ರಾಹುಲ್ ಮಧ್ಯಸ್ಥಿಕೆ ನಂತರವೂ ಬಗೆಹರಿದಿಲ್ಲ ಟಿಕೆಟ್ ಹಂಚಿಕೆ ಬಿಕ್ಕಟ್ಟು!

ಇತ್ತೀಚೆಗಷ್ಟೆ ಮಧು ಖೋಡಾ ಅವರ ಪತ್ನಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ಇದೀಗ ಮಧು ಖೋಡಾ ಇಂದು ಕಾಂಗ್ರೆಸ್ ಸೇರಿ ಮುಂಬರುವ ಲೋಕಸಭೆ ಚುನಾವಣೆಗೆ ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಮೇಲುಗೈ ಆಗುವಂತೆ ಮಾಡುವುದಾಗಿ ಹೇಳಿದ್ದಾರೆ.

ಮಿತ್ರ ಪಕ್ಷಗಳನ್ನು ತೂಗಿಸಿಕೊಂಡು ಪಕ್ಷೇತರನಾಗಿದ್ದರೂ ಸಹ ಎರಡು ವರ್ಷ ಆಡಳಿತ ಮಾಡಿದ್ದ ಮಧು ಖೋಡಾ 2008 ರಲ್ಲಿ ರಾಜೀನಾಮೆ ನೀಡ ಬೇಕಾಯಿತು. ಆ ನಂತರ ಮಧೂ ಖೋಡಾ 2009 ರಲ್ಲಿ ಪಕ್ಷೇತರರಾಗಿ ಲೋಕಸಭೆಗೆ ಚುನಾಯಿತರಾದರು ಆದರೆ ಕಳೆದ ಚುನಾವಣೆಯಲ್ಲಿ ಹೀನಾಯವಾಗಿ ಸೋತರು.

ಚಂದ್ರಬಾಬು- ರಾಹುಲ್ ಒಟ್ಟಾಗಿ ಬಿಜೆಪಿ ವಿರುದ್ಧ ರಣ ಕಹಳೆ

ವಿದ್ಯಾರ್ಥಿ ಸಂಘಟನೆಯಿಂದ ಬಂದ ಮಧು ಖೊಡಾ ಅವರಿಗೆ ಜಾರ್ಖಂಡ್‌ನಲ್ಲಿ ಉತ್ತಮ ಬೆಂಬಲಿಗರಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಖೋಡಾ ಉತ್ತಮ ಮುನ್ನಡೆ ತಂದು ಕೊಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

English summary
Jarkhand former CM Madhu Khoda joins congress party today. His wife Geeta Khoda joins congress some days earlier. He was defeated in last Lok Sabha election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X