ಜಮ್ಮು ಕಾಶ್ಮೀರ: ಡಿಎಸ್ಪಿಯನ್ನು ಹತ್ಯೆಗೈದ ಜನ
ಶ್ರೀನಗರ (ಜಮ್ಮು-ಕಾಶ್ಮೀರ), ಜೂನ್ 23: ಮಸೀದಿಯೊಂದರ ಬಳಿ ಅಕ್ರಮವಾಗಿ ಗುಂಡು ಹಾರಿಸಿದ ಕಾರಣಕ್ಕೆ ಇಲ್ಲಿನ ಡಿಎಸ್ಪಿಯೊಬ್ಬರನ್ನು ಜನರೇ ಹೊಡೆದು ಸಾಯಿಸಿದ ಘಟನೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ.
ನಿನ್ನೆ(ಜೂನ್ 22) ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಬರುತ್ತಿದ್ದ ಜನರ ಫೋಟೋವನ್ನು ಕ್ಲಿಕ್ಕಿಸುತ್ತಿದ್ದ ಡಿಎಸ್ಪಿಗೆ ಜನರು ಫೋಟೋ ಕ್ಲಿಕ್ಕಿಸದಂತೆ ತಾಕೀತು ಹಾಕಿದ್ದಾರೆ. ಆ ಸಮಯದಲ್ಲಿ ತನ್ನ ಜೇಬಿನಲ್ಲಿದ್ದ ಪಿಸ್ತೂಲ್ ತೆಗೆದು ಗಾಳಿಯಲ್ಲಿ ಗುಂಡು ಹಾರಿಸಿದ ಡಿಎಸ್ಪಿಯನ್ನು ಹಿಡಿದು, ಜನರೇ ಹೊಡೆದು ಸಾಯಿಸಿದ್ದಾರೆ.

ಮೃತ ಡಿಎಸ್ಪಿಯನ್ನು ಮೊಹಮ್ಮದ್ ಅಯೂಬ್ ಪಂಡಿತ್ ಎಂದು ಗುರುತಿಸಲಾಗಿದ್ದು, ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.











Click it and Unblock the Notifications