Jammu Kashmir and Haryana Election Results 2024 Live:ಹರಿಯಾಣಕ್ಕೆ ಅಚ್ಚರಿಯ ಸಿಎಂ, ಕಾಶ್ಮೀರದಲ್ಲಿ ಒಮರ್ ದರ್ಬಾರ್
ಜಮ್ಮು ಕಾಶ್ಮೀರ, ಹರಿಯಾಣದಲ್ಲಿ ಇಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಜಮ್ಮು ಕಾಶ್ಮೀರದಲ್ಲಿ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1ರಂದು ಒಟ್ಟು ಮೂರು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು, ಮೊದಲ ಹಂತದಲ್ಲಿ 24 ಸ್ಥಾನಗಳಿಗೆ ಮತದಾನ ನಡೆದಿದ್ದು, ಎರಡನೇ ಹಂತದಲ್ಲಿ 26 ಮತ್ತು ಮೂರನೇ ಹಂತದಲ್ಲಿ 40 ಸ್ಥಾನಗಳಿಗೆ ಮತದಾನ ನಡೆದಿದೆ.
90 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟಾರೆಯಾಗಿ ಶೇ.63.88ರಷ್ಟು ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ಹೇಳಿದೆ. ಮೂರು ಹಂತಗಳಲ್ಲಿ ಶಾಂತಿಯುವಾಗಿ ಚುನಾವಣೆ ನಡೆದಿದ್ದು, ಆರ್ಟಿಕಲ್ 370 ರದ್ದಾದ ಬಳಿಕ ನಡೆದ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಎದುರಿಸಿದರೆ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಭಾರತೀಯ ಜನತಾ ಪಾರ್ಟಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು.

ಇಂಡಿಯಾ ಒಕ್ಕೂಟದ ಕಾಂಗ್ರೆಸ್ ಮತ್ತು ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಮೈತ್ರಿ ಸೂತ್ರದ ಜೊತೆ ಸ್ಪರ್ಧೆ ಮಾಡಿವೆ. ಬಿಜೆಪಿ ಮತ್ತು ಪಿಡಿಪಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದು, ಜಮ್ಮು ಕಾಶ್ಮೀರದಲ್ಲಿ ಎಕ್ಸಿಟ್ ಪೋಲ್‌ಗಳು ಎನ್‌ಸಿ-ಕಾಂಗ್ರೆಸ್ ಮೈತ್ರಿಯ ಬಗ್ಗೆ ಹೆಚ್ಚಿನ ನಿರೀಕ್ಷೆ ಇರಿಸಿದೆ. 2014ರ ಚುನಾವಣೆಯಲ್ಲಿ ಗೆದ್ದಿದ್ದ 25 ಸ್ಥಾನಗಳಲ್ಲಿ ಬಿಜೆಪಿ ಸ್ವಲ್ಪ ಸುಧಾರಿಸಿಕೊಳ್ಳುವ ನಿರೀಕ್ಷೆಯಿದೆ. 2014ರ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆದ್ದಿದ್ದ ಪಿಡಿಪಿ ಈ ಬಾರಿ 10ಕ್ಕಿಂತ ಕಡಿಮೆ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ.
ಹರಿಯಾಣದ ಎಲ್ಲಾ 90 ವಿಧಾನಸಭಾ ಸ್ಥಾನಗಳಿಗೆ ಅಕ್ಟೋಬರ್ 5 ರಂದು ಮತದಾನ ನಡೆಯಿತು. ಹರಿಯಾಣದಲ್ಲಿ ಶೇ. 67.90ರಷ್ಟು ಮತದಾನವಾಗಿದೆ. ಹರಿಯಾಣದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್, ಜನನಾಯಕ್ ಜನತಾ ಪಕ್ಷ (ಜೆಜೆಪಿ), ಮತ್ತು ಇಂಡಿಯನ್ ನ್ಯಾಷನಲ್ ಲೋಕ ದಳ (ಐಎನ್‌ಎಲ್‌ಡಿ) ಪ್ರಮುಖ ಪಕ್ಷಗಳಾಗಿ ಸ್ಪರ್ಧಿಸಿವೆ. ಇಂದು ಮತ ಎಣಿಕೆ ನಡೆಯುವ ಹಿನ್ನೆಲೆ ಕೇಂದ್ರಗಳ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿರುತ್ತದೆ.
ಕಾಂಗ್ರೆಸ್ ಸೋತಾಗೆಲ್ಲಾ ಮತಯಂತ್ರವನ್ನು ದೂಷಿಸುವ ಪರಿಪಾಠ ರೂಢಿಸಿಕೊಂಡಿದೆ. ಕಾಂಗ್ರೆಸ್ ತೆಲಂಗಾಣದಲ್ಲಿ ಗೆದ್ದಾಗ ಸಂಭ್ರಮಿಸಿದ್ದರು, ಆದರೆ ಈಗ ಸೋತಾಗ ಇವಿಎಂ ಅನ್ನು ದೂರುತ್ತಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಟೀಕಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಸ್ಥಿರ ಮತ್ತು ಜವಾಬ್ದಾರಿಯು ಸರ್ಕಾರವನ್ನು ರಚನೆ ಮಾಡುತ್ತೇವೆ. ಬಿಜೆಪಿ ಆಡಳಿತದ ಬಗ್ಗೆ ಜನ ಅಸಮಾಧಾನಗೊಂಡಿದ್ದಾರೆ ಎಂದು ಈ ಚುನಾವಣೆ ಫಲಿತಾಂಶದಿಂದ ಗೊತ್ತಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಹೇಳಿದ್ದಾರೆ.
Top Fight - ಸೆಂಟ್ರಲ್ ಶಾಲ್ಟೆಂಗ್
ತಾರಿಕ್ ಹಮೀದ್ ಕರ್ರಾ
(ಕಾಂಗ್ರೆಸ್)
Won
ಅಬ್ದುಲ್ ಖಯೂಮ್ ಭಟ್
(ಪಿಡಿಪಿ)
Lost
Top Fight - ಲ್ಯಾಂಗೇಟ್
ಖುರ್ಷೀದ್ ಅಹ್ಮದ್ ಶೇಖ್
(ಐಎನ್ ಡಿ)
Won
ಇರ್ಷಾದ್ ಹುಸೇನ್ ಗನೈ
(ಕಾಂಗ್ರೆಸ್)
Lost
Top Fight - ಕರ್ನಾಲ್
ಜಗಮೋಹನ್ ಆನಂದ್
(ಬಿಜೆಪಿ)
Leading
ಸುಮಿತ್ರಾ ವಿರ್ಕ್
(ಕಾಂಗ್ರೆಸ್)
Trailing
Top Fight - ಅಟೆಲಿ
ಆರ್ತಿ ಸಿಂಗ್ ರಾವ್
(ಬಿಜೆಪಿ)
Won
ಅನಿತಾ ಯಾದವ್
(ಕಾಂಗ್ರೆಸ್)
Lost
Top Fight - ಅಟೆಲಿ
ಆರ್ತಿ ಸಿಂಗ್ ರಾವ್
(ಬಿಜೆಪಿ)
Won
ಅನಿತಾ ಯಾದವ್
(ಕಾಂಗ್ರೆಸ್)
Lost
Top Fight - ಉಚನಾ ಕಾಲನ್
ದೇವೇಂದ್ರ ಅತ್ರಿ
(ಬಿಜೆಪಿ)
Won
ಬ್ರಿಜೇಂದ್ರ ಸಿಂಗ್
(ಕಾಂಗ್ರೆಸ್)
Lost
Top Fight - ಪಾಣಿಪತ್ ನಗರ
ಪ್ರಮೋದ್ ಕುಮಾರ್ ವಿಜಿ
(ಬಿಜೆಪಿ)
Won
ವರೀಂದರ್ ಕುಮಾರ್ ಶಾ
(ಕಾಂಗ್ರೆಸ್)
Lost
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜನ ನಂಬಿಕೆ ಇಟ್ಟಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣೆ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮೂರು ಕ್ಷೇತ್ರಗಳಲ್ಲಿ ಇತರೆ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಸರ್ಕಾರ ರಚನೆಗೆ ಸಜ್ಜಾಗಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ಮತ ಎಣಿಕೆ ಮುಕ್ತಾಯವಾಗಿದ್ದು, ಎನ್‌ಸಿ-ಕಾಂಗ್ರೆಸ್ ಮೈತ್ರಿಕೂಟ 48 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ 29 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪಿಡಿಪಿ ಮೂರು ಕ್ಷೇತ್ರಗಳಲ್ಲಿ ಗೆಲ್ಲುವಲ್ಲಿ ಸಫಲವಾಗಿದೆ. ಎಎಪಿ ಒಂದು ಸ್ಥಾನವನ್ನು ಗೆದ್ದುಕೊಂಡಿದೆ.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಾರಣ ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ. ಕೋಳಿವಾಡ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ವೇಳೆ ಮುಡಾ ಹಗರಣವನ್ನು ಪ್ರಸ್ತಾಪಿಸಿದ್ದರು. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದರೆ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತಿರಲಿಲ್ಲ ಎನ್ನುವಂತೆ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ.
Top Fight - ಲಾಡ್ವಾ
ನಯಾಬ್ ಸಿಂಗ್ ಸೈನಿ
(ಬಿಜೆಪಿ)
Leading
ಸಪ್ನಾ ಬರ್ಸಾಮಿ
(ಐಎನ್‌ಎಲ್‌ಡಿ)
Trailing
ಹರಿಯಾಣದ ಹಿಸಾರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳಿಗೆ ಪಕ್ಷೇತರ ಅಭ್ಯರ್ಥಿ ಮಣ್ಣು ಮುಕ್ಕಿಸಿದ್ದಾರೆ. ದೇಶದ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರವಾದ ಸಾವಿತ್ರಿ ಜಿಂದಾಲ್ ಅವರು, ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಬಯಸಿದ್ದರು. ಆದರೆ ಸಿಗದ ಕಾರಣ ಅವರು ಪಕ್ಷೇತರವಾಗಿ ನಿಂತು ಗೆದ್ದಿದ್ದಾರೆ.
Top Fight - ಬನಿಹಾಲ್
ಶಾಜದ್ ಶಾಹೀನ್
(ಎನ್‌ಸಿ)
Leading
ಮೊಹಮ್ಮದ್ ಸಲೀಂ ಭಟ್
(ಬಿಜೆಪಿ)
Trailing
Top Fight - ಶ್ರೀಗುಫ್ವಾರಾ - ಬಿಜ್ಬೆಹರಾ
ಬಶೀರ್ ಅಹ್ಮದ್ ಶಾ
(ಎನ್‌ಸಿ)
Leading
ಇಲ್ತಿಜಾ ಮೆಹಬೂಬಾ ಮುಫ್ತಿ
(ಪಿಡಿಪಿ)
Trailing
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರವೀಂದರ್ ರೈನಾ ಅವರಿಗೆ ಮತದಾರ ಆಘಾತ ನೀಡಿದ್ದಾನೆ. ನೌಶೆರಾ ವಿಧಾನಸಭಾ ಕ್ಷೇತ್ರದಲ್ಲಿ ಅವರು ಎನ್‌ಸಿ ಅಭ್ಯರ್ಥಿ ಸುರಿಂದರ್ ಚೌಧರಿ ವಿರುದ್ಧ 7000 ಮತಗಳ ಅಂತರದಲ್ಲಿ ಸೋತಿದ್ದು, ಪಕ್ಷಕ್ಕೆ ಮುಜುಗರ ತಂದಿದೆ.
Top Fight - ಬನಿಹಾಲ್
ಶಾಜದ್ ಶಾಹೀನ್
(ಎನ್‌ಸಿ)
Leading
ಮೊಹಮ್ಮದ್ ಸಲೀಂ ಭಟ್
(ಬಿಜೆಪಿ)
Trailing
Top Fight - ಮುಲಾನಾ
ಪೂಜಾ
(ಕಾಂಗ್ರೆಸ್)
Leading
ಸಂತೋಷ್ ಚೌಹಾಣ್ ಸರ್ವಾನ್
(ಬಿಜೆಪಿ)
Trailing
Top Fight - ಅಂಬಾಲಾ ಕ್ಯಾಂಟ್
ಅನಿಲ್ ವಿಜ್
(ಬಿಜೆಪಿ)
Leading
ಓಂಕಾರ್ ಸಿಂಗ್
(ಐಎನ್‌ಎಲ್‌ಡಿ)
Trailing
Top Fight - ಎಲೆನಾಬಾದ್
ಭರತ್ ಸಿಂಗ್ ಬೇನಿವಾಲ್
(ಕಾಂಗ್ರೆಸ್)
Leading
ಅಭಯ್ ಸಿಂಗ್ ಚೌತಾಲಾ
(ಐಎನ್‌ಎಲ್‌ಡಿ)
Trailing
Top Fight - ಲಾಡ್ವಾ
ನಯಾಬ್ ಸಿಂಗ್ ಸೈನಿ
(ಬಿಜೆಪಿ)
Leading
ಸಪ್ನಾ ಬರ್ಸಾಮಿ
(ಐಎನ್‌ಎಲ್‌ಡಿ)
Trailing
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಮಾತನಾಡಿದ ಸಂಸದೆ ಕುಮಾರಿ ಸೆಲ್ಜಾ, ಈ ಫಲಿತಾಂಶ ನಿರಾಸೆ ತಂದಿದೆ ಎಂದಿದ್ದಾರೆ. ಮತ ಎಣಿಕೆ ಆರಂಭವಾಗುವವರೆಗೂ ನಾವು ಗೆಲ್ಲುವ ವಿಶ್ವಾಸದಲ್ಲಿದ್ದೆವು, ಆದರೆ ಫಲಿತಾಂಶದಿಂದ ಕಾರ್ಯಕರ್ತರಿಗೆ ನಿರಾಸೆಯಾಗಿದೆ. ಈ ಸೋಲಿಗೆ ಕಾರಣಗಳೇನು ಎಂದು ನಾವು ಪರಿಶೀಲನೆ ಮಾಡಬೇಕಿದೆ ಎಂದು ಹೇಳಿದರು.
ಜಮ್ಮು & ಕಾಶ್ಮೀರ ವಿಧಾನಸಭೆ ಚುನಾಚಣೆಯ ಮತ ಎಣಿಕೆ ಇಂದು ನಡೆದಿದ್ದು, ಹಂದ್ವಾರ ಕ್ಷೇತ್ರದಿಂದ ಜೆಪಿಸಿ ಅಭ್ಯರ್ಥಿ ಸಜಾದ್ ಲೋನ್ 29,812 ಮತಗಳನ್ನು ಪಡೆಯುವ ಮೂಲಕ 663 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಜೆಎನ್‌ಸಿ ಅಭ್ಯರ್ಥಿ ಛೌದ್ರಿ ಮೊಹಮ್ಮದ್ ರಾಮ್‌ಝಾನ್ 29,150 ಮತಗಳನ್ನು ಪಡೆಯುವ ಮೂಲಕ ಸೋಲನುಭವಿಸಿದ್ದಾ ಮೊಹಮ್ಮದ್ ರಾಮ್‌ಝಾನ್ 29,150 ಮತಗಳನ್ನು ಪಡೆಯುವ ಮೂಲಕ ಸೋನನುಭವಿಸಿದ್ದಾರೆ.
Top Fight - ಹಂದ್ವಾರ
ಸಜದ್ ಗನಿ ಲೋನ್
(ಪಿಸಿ)
Won
ಗೌಹರ್ ಆಜಾದ್ ಮಿರ್
(ಪಿಡಿಪಿ)
Lost
ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು (ಅಕ್ಟೋಬರ್ 08) ನಡೆದಿದ್ದು, ಪಂಚ್‌ಕುಲ ಕ್ಷೇತ್ರದಲ್ಲಿ 67,397 ಮತಗಳನ್ನು ಪಡೆಯುವ ಮೂಲಕ 1997 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಚಂದರ್‌ಮೋಹನ್ ಗೆಲುವು ಸಾಧಿಸಿದ್ದು, 65,400 ಮತಗಳನ್ನು ಪಡೆದಿರುವ ಬಿಜೆಪಿ ಅಭ್ಯರ್ಥಿ ಸೋಲುಂಡಿದ್ದಾರೆ
Top Fight - ಪಂಚಕುಲ
ಚಂದರ್ ಮೋಹನ್
(ಕಾಂಗ್ರೆಸ್)
Leading
ಸುಶೀಲ್ ಗಾರ್ಗ್
(ಜೆಜೆಪಿ)
Trailing
ಹರಿಯಾಣ ಸಿಎಂ ಆಗಿದ್ದ ಬಿಜೆಪಿಯ ನಯಾಬ್ ಸಿಂಗ್ ಸೈನಿ ಅವರು ಲಾಡ್ವಾ ವಿಧಾನಸಭಾ ಕ್ಷೇತ್ರದಿಂದ 16,054 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗೆದ್ದ ಬೆನ್ನಲ್ಲೇ ನಯಾಬ್ ಸಿಂಗ್ ಸೈನಿ ಕುರುಕ್ಷೇತ್ರದ ಜ್ಯೋತಿಸರ್ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು
Top Fight - ಚನಪೋರಾ
ಮುಷ್ತಾಕ್ ಗುರು
(ಎನ್‌ಸಿ)
Leading
ಅಲ್ತಾಫ್ ಬುಖಾರಿ
(ಎಪಿ)
Trailing












Click it and Unblock the Notifications