Jammu And Kashmir Election Times Now Exit Poll Results: ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟ, ಯಾರಿಗೆ ಗೆಲುವು?
ನವದೆಹಲಿ, ಅಕ್ಟೋಬರ್ 05: ಲೋಕಸಭಾ ಚುನಾವಣೆಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತದಲ್ಲಿ ಈಗಾಗಲೇ ಚುನಾವಣೆ ಮುಕ್ತಾಯಗೊಂಡಿದೆ. ಶೇ. 63.88 ಮತದಾನವಾಗುವ ಮೂಲಕ ಮತದಾರ ಉತ್ತಮವಾಗಿ ಸ್ಪಂದಿಸಿದ್ದಾರೆ.
90 ಸದಸ್ಯ ಬಲವನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆ ಸೆಪ್ಟಂಬರ್ 18, 25 ಮತ್ತು ಅಕ್ಟೋಬರ್ 1ರಂದು, ಮೂರು ಹಂತದಲ್ಲಿ ನಡೆದಿತ್ತು.ಕಾಂಗ್ರೆಸ್ - ನ್ಯಾಶನಲ್ ಕಾನ್ಫರೆನ್ಸ್ - ಪ್ಯಾಂಥರ್ಸ್ ಪಾರ್ಟಿ - ಸಿಪಿಐ (ಎಂ) ಹೊಂದಾಣಿಕೆಯಿಂದ ಕಣಕ್ಕಿಳಿದಿತ್ತು. ಬಿಜೆಪಿ ಮತ್ತು ಮೆಹಬೂಬ ಮುಫ್ತಿಯ ಪೀಪಲ್ಸ್ ಡೆಮೊಕ್ರಾಟಿಕ್ ಪಾರ್ಟಿ ಇಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿವೆ. ಆಪ್, ಬಿಎಸ್ಪಿ ಸೇರಿ ಎಂಟು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿವೆ.

ಅಕ್ಟೋಬರ್ 5ರ ಸಂಜೆ ಆರು ಗಂಟೆಗೆ ಮತದಾನ ಮುಕ್ತಾಯಗೊಂಡಿದ್ದು, ಸಂಜೆ 6.30ರ ನಂತರ ಚುನಾವಣೋತ್ತರ ಸಮೀಕ್ಷೆ ಬಹಿರಂಗ ಪಡಿಸಲು ಕೇಂದ್ರ ಚುನಾವಣಾ ಆಯೋಗ ಅನುಮತಿಯನ್ನು ನೀಡಿದೆ. ಎಕ್ಸಿಟ್ ಪೋಲ್ ಮೇಲೆ ಜನರಿಗೆ ಬಾರೀ ಕುತೂಗಲ ಮೂಡಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024ರ ಕುರಿತು Poll Of Polls On Times Now ಸಮೀಕ್ಷೆ ಪ್ರಕಟಗೊಂಡಿದ್ದು, ಕಾಂಗ್ರೆಸ್ ಮೈತ್ರಿಕೂಟಕ್ಕೆ 41 ಸ್ಥಾನ ಗೆಲ್ಲಬಹುದು ಕಾಂಗ್ರೆಸ್ ಮೈತ್ರಿಕೂಟ ಅಭೂತಪೂರ್ವ ಗೆಲುವನ್ನು ಸಾಧಿಸಲಿದೆ ಎಂದು ಅಂದಾಜಿಸಿತ್ತು. ಬಿಜೆಪಿಗೆ ಕೇವಲ 28 ಸ್ಥಾನ ಸಿಗಬಹುದು, ಪಿಡಿಪಿಗೆ 7 ಸೀಟ್ ಹಾಗೂ ಇತರರು 14 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ಭವಿಷ್ಯ ನುಡಿದಿದೆ.
ಇನ್ನೂ ಇಂಡಿಯಾ ಟುಡೇ-ಸಿ ವೋಟರ್ ಪ್ರಕಾರ, ಎನ್‌ಸಿ-ಕಾಂಗ್ರೆಸ್: 40-48, ಬಿಜೆಪಿ: 27-32, ಪಿಡಿಪಿ: 6-12, ಇತರೆ: 6-11 ಸ್ಥಾನಗಳನ್ನು ಪಡೆಯಲಿವೆ. ದೈನಿಕ್ ಭಾಸ್ಕರ್ ಪ್ರಕಾರ, ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ 35-40 ಸ್ಥಾನ ಸಿಗಲಿದೆ. ಬಿಜೆಪಿ 20-25 ಸ್ಥಾನಗಳಲ್ಲಿ ಮತ್ತು ಪಿಡಿಪಿಗೆ 4-7 ಸ್ಥಾನಗಳು ಸಿಗಲಿವೆ. ಮ್ಯಾಟ್ರಿಜ್ ಸೀಟ್ ಪ್ರೊಜೆಕ್ಷನ್ ಪ್ರಕಾರ, ಬಿಜೆಪಿ - 25, ಕಾಂಗ್ರೆಸ್ - 12, ನ್ಯಾಷನಲ್ ಕಾನ್ಫರೆನ್ಸ್ -15, ಪಿಡಿಪಿ- 28, ಇತರೆ - 7 ಸ್ಥಾನಗಳನ್ನು ಪಡೆಯಲಿವೆ.












Click it and Unblock the Notifications