ಐಟಿ ಅಧಿಕಾರಿಗಳ ವಿಚಾರಣೆ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯೆ

ಬೆಂಗಳೂರು, ಅಕ್ಟೋಬರ್ 21: ಮಾಜಿ ಡಿಸಿಎಂ ಪರಮೇಶ್ವರ್ ನಿವಾಸ ಹಾಗೂ ಅವರ ಒಡೆತನದ ಕಾಲೇಜಿನ ಮೇಲೆ ನಡೆದಿದ್ದ ದಾಳಿಗೆ ಸಂಬಂಧಿಸಿದಂತೆ ಇಂದು ಐಟಿ ವಿಚಾರಣೆಗೆ ಪರಮೇಶ್ವರ್ ಹಾಜರಾಗಿದ್ದರು.

ಮಧ್ಯಾಹ್ನದ ವೇಳೆಗೆ ವಿಚಾರಣೆ ಅಂತ್ಯಗೊಳಿಸಿದ ಐಟಿ ಅಧಿಕಾರಿಗಳು, ಕಾಲೇಜಿನಲ್ಲಿ ದೊರಕಿದ ದಾಖಲೆಗಳು, ನಗದು ಹಣ, ಆಸ್ತಿ, ಪರಮೇಶ್ವರ್ ಆಪ್ತರ ಹೆಸರಲ್ಲಿ ಇದೆ ಎನ್ನಲಾಗುತ್ತಿರುವ ಹಣ-ಆಸ್ತಿಯ ಕುರಿತು ಪ್ರಶ್ನೆಗಳನ್ನು ಕೇಳಿದೆ ಎನ್ನಲಾಗಿದೆ.

ಸತತ ಮೂರು ಗಂಟೆ ಪರಮೇಶ್ವರ್ ಅವರನ್ನು ಐಟಿ ಅಧಿಕಾರಿಗಳು ಪ್ರಶ್ನೆ ಮಾಡಿದರು. ಅಕ್ಟೋಬರ್ 10 ರಂದು ಬೆಳಿಗ್ಗೆ ಪರಮೇಶ್ವರ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

Recommended Video

      ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಸ್ಪೀಕರ್ | Oneindia Kannada
      IT Officers Today Questioned G Parameshwar

      ಐಟಿ ಅಧಿಕಾರಿಗಳ ವಿಚಾರಣೆ ನಂತರ ಮಾತನಾಡಿದ ಪರಮೇಶ್ವರ್, 'ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆಲ್ಲಾ ಉತ್ತರ ನೀಡಿದ್ದೇನೆ, ದಾಖಲೆಗಳು ನೀಡಲು ಹೇಳಿದ್ದರು, ಅದರಂತೆ ದಾಖಲೆಗಳನ್ನೂ ನೀಡಿದ್ದೇನೆ. ಮತ್ತೆ ವಿಚಾರಣೆ ಹಾಜರಾಗುವಂತೆ ಅಧಿಕಾರಿಗಳು ಹೇಳಿಲ್ಲ' ಎಂದರು.

      ಪರಮೇಶ್ವರ್ ನಿವಾಸದ ಮೇಲೆ ಐಟಿ ದಾಳಿ ಆದ ನಂತರ ಪರಮೇಶ್ವರ್ ಆಪ್ತ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದ. ಐಟಿ ಅಧಿಕಾರಿಗಳು ದಾಳಿ ಮಾಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ರಮೇಶ್ ಆತ್ಮಹತ್ಯೆ ಪತ್ರ ಬರೆದಿಟ್ಟಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+