Get Updates
Get notified of breaking news, exclusive insights, and must-see stories!

ಅಪ್ಪನ ಬಂಧನದ ಬಗ್ಗೆ ಕಾರ್ತಿ ಚಿದಂಬರಂ ತೀವ್ರ ಆಕ್ರೋಶ

ನವದೆಹಲಿ, ಆಗಸ್ಟ್ 21: ಪಿ.ಚಿದಂಬರಂ ಅವರ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಮಗ ಕಾರ್ತಿ ಚಿದಂಬರಂ ಇದೊಂದು ರಾಜಕೀಯ ಭೇಟೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿ.ಚಿದಂಬರಂ ಅವರ ಬಂಧನವಾದ ಕೆಲವೇ ನಿಮಿಷಗಳ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ತಿ ಚಿದಂಬರಂ, 2017 ರಲ್ಲಿ ಪ್ರಕರಣ ದಾಖಲಾಗಿದೆ ಆದರೆ ಈವರೆಗೂ ಚಾರ್ಜ್ ಶೀಟ್ ಸಹ ಸಲ್ಲಿಸಲಾಗಿಲ್ಲ ಇದೇ ಸಾಬೀತು ಪಡಿಸುತ್ತದೆ ಇದೊಂದು ರಾಜಕೀಯ ಪ್ರೇರಿತ ಪ್ರಕರಣವೆಂದು ಎಂದು ಅವರು ಹೇಳಿದರು.

ಉದ್ದೇಶಪೂರ್ವಕವಾಗಿ ನಮ್ಮ ಮೇಲೆ ಪ್ರಕರಣ ದಾಖಲಿಸಲಾಗಿದೆ. ನನ್ನ ಮೇಲೆ ಸಿಬಿಐ ನಾಲ್ಕು ಬಾರಿ ದಾಳಿ ಮಾಡಿದೆ. ಈ ವರೆಗೆ ಯಾರ ಮೇಲೂ ಇಷ್ಟು ದಾಳಿ ನಡೆದಿಲ್ಲ. ಇಪ್ಪತ್ತು ಬಾರಿ ವಿಚಾರಣೆಗೆ ಹಾಜರಾಗಿದ್ದೇನೆ, ಅದೂ ಪ್ರತಿಬಾರಿ ಹತ್ತು ಗಂಟೆ ವಿಚಾರಣೆ ನಡೆಸುತ್ತಾರೆ. ಸತತ ಹನ್ನೊಂದು ದಿನ ಕಸ್ಟಡಿಯಲ್ಲಿಯೇ ಇದ್ದೆ ಇಷ್ಟೆಲ್ಲಾ ಆದಾಗ್ಯೂ ಇನ್ನೂ ಚಾರ್ಜ್‌ ಶೀಟ್ ಸಲ್ಲಿಸಿಲ್ಲ ಎಂದು ಕಾರ್ತಿ ಚಿದಂಬರಂ ಹೇಳಿದರು.

It is a political witch hunting: Karthi Chidambaram

ಯಾರದೋ ಕೆಲವರ ಆದೇಶದ ಮೇರೆಗೆ ಹೂಡಿರುವ ಪ್ರಕರಣ ಇದು, ಮಾಧ್ಯಮಗಳಿಗಾಗಿ, ಟಿವಿ ಟಿಆರ್‌ಪಿಗಳಿಗಾಗಿ ಈ ಪ್ರಕರಣಕ್ಕೆ ಪ್ರಾಮುಖ್ಯ ನೀಡಲಾಗುತ್ತಿದೆ ಎಂದು ಅವರು ಮಾಧ್ಯಮಗಳ ಮೇಲೂ ಅಸಮಾಧಾನ ಹೊರಹಾಕಿದ್ದರು.

2008 ರಲ್ಲಿ ಪ್ರಕರಣ ನಡೆದಿದೆ ಎನ್ನುತ್ತಾರೆ 2017 ರಲ್ಲಿ ಪ್ರಕರಣ ದಾಖಲಾಗಿದೆ. ಎರಡು ವರ್ಷ ವಿಚಾರಣೆ ನಡೆಸಿದ್ದಾರೆ ಆದರೆ ಚಾರ್ಜ್ ಶೀಟ್ ಹಾಕಿ ಆರೋಪಿಗಳನ್ನಾಗಿಯೇ ಮಾಡಲಾಗಿಲ್ಲ. ಆರೋಪಿಗಳಲ್ಲದವರನ್ನು ಸುಮ್ಮನೇ ಬಂಧಿಸಲಾಗುತ್ತಿದೆ ಎಂದು ಅವರು ಸಿಟ್ಟು ಹೊರಹಾಕಿದರು.

ನಮ್ಮ ತಂದೆ ಎಲ್ಲಿಯೂ ತಲೆಮರೆಸಿಕೊಂಡಿರಲಿಲ್ಲ. ಅವರು ಬೆಳಿಗ್ಗಿನಿಂದಲೂ ತಮ್ಮ ವಕೀಲರುಗಳೊಂದಿಗೆ ಇದ್ದರು. ನ್ಯಾಯ ನಮ್ಮ ಪರವಾಗುವ ಎಲ್ಲ ವಿಶ್ವಾಸವಿದೆ ಎಂದು ಕಾರ್ತಿ ಚಿದಂಬರಂ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+