ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಪಿಎಸ್ ತಂತ್ರಜ್ಞಾನದಲ್ಲಿ ಭಾರತ ಆಗಲಿದೆ ಸಾರ್ವಭೌಮ

|
Google Oneindia Kannada News

ಶ್ರೀಹರಿಕೋಟಾ, ಅ. 16: ಮಂಗಳಯಾನದ ಯಶಸ್ಸಿನಲ್ಲಿ ಬೀಗುತ್ತಿರುವ ಇಸ್ರೋ ಗುರುವಾರ ಮತ್ತೊಂದು ಸಾಧನೆ ಮಾಡಿದೆ ದೇಶದ ಹೆಮ್ಮ ಹೆಚ್ಚಿಸಿದೆ. ದಿಕ್ಸೂಚಿ ಉಪಗ್ರಹವೊಂದನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾ ಕೇಂದ್ರದಿಂದ ಗುರುವಾರ ಬೆಳಗಿನ ಜಾವ ಉಡಾವಣೆ ಮಾಡಲಾಗಿದ್ದು ಯಶಸ್ವಿಯಾಗಿ ಕಕ್ಷೆ ಸೇರಿದೆ.

ನೇವಿಗೇಶನ್ ವಿಭಾಗದಲ್ಲಿ ಇದು ಹೊಸ ಸಂಚಲನ ಮೂಡಿಸಿದ್ದು ಭಾರತ ಜಿಪಿಎಸ್ ಸೌಲಭ್ಯಕ್ಕೆ ಬೇರಾವ ದೇಶದ ಮುಂದೆ ಕೈ ಚಾಚಬೇಕಾಗಿಲ್ಲ. ಜಿಪಿಎಸ್ ತಂತ್ರಜ್ಞಾನ ಅಭಿವೃದ್ಧಿಗೆ ಈ ಇಂಡಿಯನ್ ರಿಜನಲ್ ನೆವಿಗೇಶನ್ ಸೆಟ್ ಲೈಟ್ ಸಿಸ್ಟಮ್ (ಐಆರ್ ಎನ್ ಎಸ್ ಎಸ್) ನೆರವು ನೀಡುತ್ತದೆ.[ಮಂಗಳನಿಂದ ಬಂದ ವಿಡಿಯೋ ನೋಡಿದ್ದೀರಾ?]

ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಐಆರ್‌ಎನ್‌ಎಸ್‌ಎಸ್‌ -1ಸಿ ಪ್ರಾದೇಶಿಕ ದಿಕ್ಸೂಚಿ ಉಪಗ್ರಹವನ್ನುಪಿಎಸ್‌ ಎಲ್‌ವಿ ಸಿ -26 ವಾಹಕದ ಮೂಲಕ ಗುರುವಾರ ಬೆಳಗಿನ ಜಾವ 1.32ರ ವೇಳೆಗೆ ಉಡಾವಣೆ ಮಾಡಲಾಗಿದ್ದು ಉಪಗ್ರಹ ಯಶಸ್ವಿಯಾಗಿ ಕಕ್ಷೆ ಸೇರಿದೆ.

ಸೋಮವಾರ ಮುಂಜಾನೆಯಿಂದ ಸತತ 67 ಗಂಟೆಗಳ ಕಾಲ ಪ್ರಯತ್ನದ ನಂತರ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. 1,425 ಕೆ.ಜಿ ತೂಕದ ಈ ಉಪಗ್ರಹ ಉಡಾವಣೆಯಾದ 20 ನಿಮಿಷಗಳ ನಂತರ ನಿಗದಿತ ಕಕ್ಷೆಗೆ ಸೇರಿದೆ.[ಹೆಮ್ಮೆ ಪಡುವಂತೆ ಮಾಡಿದವರಿಂದ ಹಣ ಪಡೆಯಲ್ಲ']

isro

ಕಾರ್ಯಕ್ರಮದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿರುವ ಇಸ್ರೋ ಅಧ್ಯಕ್ಷ ಕೆ. ರಾಧಾಕೃಷ್ಣನ್‌ ಯೋಜನೆಗೆ ಶ್ರಮಿಸಿದ ಎಲ್ಲರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಉಪಗ್ರಹದ ಜೀವಿತಾವಧಿ ಹತ್ತು ವರ್ಷಗಳಾಗಿರುವುದು. ನಿಗದಿಯಂತೆ ಅಕ್ಟೋಬರ್ 10ರಂದೇ ಉಪಗ್ರಹ ಉಡಾವಣೆಯಾಗಬೇಕಿತ್ತು. ಆದರೆ ಕೆಲ ತಾಂತ್ರಿಕ ತೊಂದರೆಗಳು ಹಿನ್ನಡೆ ಉಂಟುಮಾಡಿದವು ಎಂದು ತಿಳಿಸಿದರು.

ಪ್ರಧಾನಮಂತ್ರಿ ಕಾರ್ಯಾಲಯದ ಸಹಾಯಕ ಸಚಿವ ಜಿತೇಂದ್ರ ಸಿಂಗ್‌ ಉಪಸ್ಥಿತರಿದ್ದು, ವಿಜ್ಞಾನಿಗಳನ್ನು ಅಭಿನಂದಿಸಿದರು. ಅಲ್ಲದೇ ಭಾರತ ವೈಜ್ಞಾನಿಕ ಬೆಳವಣಿಗೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಜಗತ್ತಿನಲ್ಲಿಯೇ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.

English summary
India successfully launched IRNSS 1C on board ISRO's PSLV C26 rocket from the spaceport. Moving a step closer to setting up the country's own navigation system on par with Global Positioning System (GPS) of the US. IRNSS 1C is the third of the series of seven satellites ISRO is planing to launch to put in place what is called the Indian Regional Navigation Satellite System.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X