ಇಸ್ರೋದಿಂದ 'ಜಿಎಸ್‌ಎಲ್‌ವಿ ಮಾರ್ಕ್-3’ ಯಶಸ್ವೀ ಉಡಾವಣೆ
ಶ್ರೀಹರಿಕೋಟಾ, ಜೂನ್ 5: ಇಸ್ರೋ ತನ್ನ ಮಹತ್ವಾಕಾಂಕ್ಷಿ ಉಪಗ್ರಹ ಉಡಾವಣಾ ವಾಹಕ 'ಜಿಎಸ್‌ಎಲ್‌ವಿ ಮಾರ್ಕ್-3'ನ್ನು ಯಶಸ್ವಿಯಾಗಿ ಉಡಾಯಿಸಿದೆ.
ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕೇಶ ಕೇಂದ್ರದಿಂದ ರಾಕೆಟ್ ಉಡಾವಣೆಯಾಗಿದ್ದು, ಉಡಾವಣೆ ಯಶಸ್ವಿಯಾಗಿದೆ. ಸಂಜೆ 5.28 ನಿಮಿಷಕ್ಕೆ 3136 ಕೆಜಿ ತೂಕದ ಜಿಸ್ಯಾಟ್-19 ಸಂವಹನ ಉಪಗ್ರಹವನ್ನು ಹೊತ್ತ ರಾಕೆಟ್ 'ಜಿಎಸ್‌ಎಲ್‌ವಿ ಮಾರ್ಕ್-3 ಡಿ 1' ನಭಕ್ಕೆ ಚಿಮ್ಮಿತು. ಇದಾಗಿ 16ನೇ ನಿಮಷಕ್ಕೆ ಇಸ್ರೋ ಉಡಾವಣೆ ಯಶಸ್ವಿಯಾಗಿದೆ ಎಂದು ಘೋಷಿಸಿದೆ.

ಉಡಾವಣೆ ನಂತರ ಮಾತನಾಡಿದ ಇಸ್ರೋ ಅಧ್ಯಕ್ಷ ಎಎಸ್ ಕಿರಣ್ ಕುಮಾರ್, "ಇದೊಂದು ಐತಿಹಾಸಿಕ ದಿನ, ಉಪಗ್ರಹ ಉಡಾವಣಾ ವಾಹಕ ಯಶಸ್ವಿಯಾಗಿ ಕಕ್ಷೆಗೆ ಸೇರಿದೆ. ಈ ಯೋಜನೆಯಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಧನ್ಯವಾದಗಳು," ಎಂದು ಹೇಳಿದರು.
ಇನ್ನು ಜಿಎಸ್ಎಲ್ ಯಶಸ್ವೀ ಉಡಾವಣೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.
ISRO launches its most powerful rocket GSLV Mark III carrying GSAT-19 communication satellite from Sriharikota, AP #GSLVMK3 pic.twitter.com/3Tnme9Qlz5
— ANI (@ANI_news) June 5, 2017
ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಾಮರ್ಥ್ಯವನ್ನು ಈ ರಾಕೆಟ್ ಹೊಂದಿರುವುದರಿಂದ ಬಾಹ್ಯಾಕಾಶಕ್ಕೆ ಗಗನಯಾನಿಗಳನ್ನು ಕಳುಹಿಸುವ ಭಾರತದ ಕನಸು ಮತ್ತಷ್ಟು ಹತ್ತಿರವಾಗಿದೆ. ಇಲ್ಲಿಯವರೆಗೆ ರಷ್ಯಾ, ಚೀನಾ ಮತ್ತು ಅಮೆರಿಕಾ ಮಾತ್ರ ತಮ್ಮದೇ ಉಡಾವಣಾ ವಾಹಕದಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದು, ಈ ಅವಕಾಶ ಭಾರತದ ಪಾಲಿಗೂ ತೆರೆದುಕೊಂಡಿದೆ.
ಈಗಾಗಲೇ ಬಾಹ್ಯಾಕಾಶ ಯಾತ್ರೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಇಸ್ರೋ ನಡೆಸುತ್ತಿದ್ದು ಅದರಲ್ಲಿ 'ಜಿಎಸ್‌ಎಲ್‌ವಿ ಮಾರ್ಕ್ 3' ಪ್ರಮುಖ ಹೆಜ್ಜೆಯಾಗಿತ್ತು. ಸದ್ಯ ಇದರಲ್ಲಿ ಯಶಸ್ವಿಯಾಗಿದೆ.
300 ಕೋಟಿ ಖರ್ಚು
ಒಂದು 'ಜಿಎಸ್‌ಎಲ್‌ವಿ ಮಾರ್ಕ್ 3' ಉಡಾವಣೆಗೆ ಸುಮಾರು 300 ಕೋಟಿ ರೂಪಾಯಿ ಖರ್ಚಾಗಲಿದೆ. ಸತತ ಆರು ಪರೀಕ್ಷೆಗಳು ಯಶಸ್ವಿಯಾದ ಬಳಿಕ ಈ 'ಜಿಎಸ್‌ಎಲ್‌ವಿ ಮಾರ್ಕ್ 3'ಯಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಬಹುದಾಗಿದೆ. ಒಂದು ಅಂದಾಜಿನ ಪ್ರಕಾರ ಮುಂದಿನ 15 ವರ್ಷಗಳ ಒಳಗೆ ಭಾರತ ಗಗನಯಾನಿಗಳನ್ನು ಅಂತರಿಕ್ಷಕ್ಕೆ ಕಳುಹಿಸಲಿದೆ.
ಈ ರಾಕೆಟ್ 43 ಮೀಟರ್ ಉದ್ದವಿದೆ. ಅಂದರೆ 13 ಮಹಡಿಗಳ ಕಟ್ಟಡದಷ್ಟು ದೊಡ್ಡದಿದೆ. ಒಟ್ಟು ಈ ರಾಕೆಟ್ 640 ಟನ್ ತೂಕವಿದ್ದು ಏಕಕಾಲಕ್ಕೆ 4 ಟನ್ ಗಳಷ್ಟು ತೂಕದ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲುದಾಗಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications