Joshimath crisis: ಜೋಶಿಮಠ 'ಮಾನವ ನಿರ್ಮಿತ' ದುರಂತವೇ?: ತಜ್ಞರು ಹೇಳುವುದೇನು?
ಉತ್ತರಖಂಡದ ಜೋಶಿಮಠದಲ್ಲಿ ಭೂ ಕುಸಿತ ಸ್ಥಳೀಯರನ್ನು ಬೀದಿಗೆ ತಳ್ಳಿದೆ. ಸೂರು ಕಳೆದುಕೊಂಡ ನೂರಾರು ಜನ ಬೀದಿ ಪಾಲಾಗಿದ್ದಾರೆ. ಈಗಲೋ ಆಗಲೋ ಕುಸಿಯಲು ಸಿದ್ದವಾಗಿ ನಿಂತ ಕನಸಿಗಳ ಮನೆಗಳನ್ನ ನೋಡುತ್ತಾ ತಾವು ತಮ್ಮವರೊಂದಿಗೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಭೂಗರ್ಭದಲ್ಲಿ ಹರಿಯುತ್ತಿರುವ ನೀರು ಮನೆಗಳನ್ನು ನಾಶ ಮಾಡುತ್ತಿದೆ.
ಇದಕ್ಕೆ ಕಾರಣ ಸರ್ಕಾರದ ಯೋಜನೆಗಳು ಹಾಗೂ ಜನರು ನೀಡಿದ್ದ ಮುನ್ನಚ್ಚರಿಕೆಗಳನ್ನು ಸರ್ಕಾರ ನಿರ್ಲಕ್ಷಿಸಿರುವುದು ಎಂದು ಸ್ಥಳೀಯರು ದೂರಿದ್ದಾರೆ. ಇದರಿಂದಾಗಿ ಜೋಶಿಮಠದ ನಿವಾಸಿಗಳು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದು ಮನೆಗಳ ಪುನ:ನಿರ್ಮಾಣಕ್ಕೆ ಒತ್ತಾಯಿಸಿದ್ದಾರೆ. ಬಿರುಕು ಬಿಟ್ಟ್ ನೂರಾರು ಮನೆಗಳು, ದೇವಸ್ಥಾನಗಳು, ರಸ್ತೆಗಳ ಪರಿಶೀಲನೆಯ ಆಧಾರದ ಮೇಲೆ ತಜ್ಞರು ಭೂಕುಸಿತಕ್ಕೆ ಕೆಲ ಕಾರಣವನ್ನು ನೀಡಿದ್ದಾರೆ. ಯೋಜನೆ ಇಲ್ಲದೆ ಅತಿರೇಕದ ಮೂಲಸೌಕರ್ಯ ಅಭಿವೃದ್ಧಿ ಇದಕ್ಕೆ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.

'ಪರಿಸರದೊಂದಿಗೆ ಗೊಂದಲ'
ಜೋಶಿಮಠದಲ್ಲಿ ಭೂ ಕುಸಿತದ ಘಟನೆಗಳು 1970 ರ ದಶಕದಲ್ಲೂ ವರದಿಯಾಗಿದೆ. ಗಡ್ವಾಲ್ ಕಮಿಷನರ್ ಮಹೇಶ್ ಚಂದ್ರ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು 1978 ರಲ್ಲಿ ವರದಿಯನ್ನು ಸಲ್ಲಿಸಿತು. ಬಾದಿತ ಈ ಪ್ರದೇಶಗಳು ಹೆಚ್ಚು ಕಲ್ಲುಗಳ ರಾಶಿಗಳ ಮೇಲೆ ಇರುವುದರಿಂದ ಕಲ್ಲುಗಳ ಅಡಿ ಮಣ್ಣು ಹಾಗೂ ಕೆಸರು ಸೇರಿಕೊಳ್ಳುತ್ತದೆ. ಇದು ಹಿಮನದಿಯಿಂದ ಕೊಚ್ಚಿ ಹೋಗುವುದರಿಂದ ಇದರ ಮೇಲೆ ಯಾವುದೇ ರೀತಿಯ ದೊಡ್ಡ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಬಾರದು ಎಂದು ಹೇಳಿತು. ಆದರೂ ಈ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗಳು ಸೇರಿದಂತೆ ಯೋಜಿತವಲ್ಲದ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗಿದೆ ಎಂದು ಸಮಿತಿ ವರದಿ ಹೇಳಿದೆ.
"ಉಷ್ಣ ವಿದ್ಯುತ್ ನಿಗಮದ ಜಲವಿದ್ಯುತ್ ಯೋಜನೆಯೊಂದಿಗೆ ನಮ್ಮ ಪರಿಸರದೊಂದಿಗೆ ನಾವು ಬದಲಾಯಿಸಲಾಗದ ಮಟ್ಟಿಗೆ ಗೊಂದಲಕ್ಕೀಡಾಗುತ್ತಿದ್ದೇವೆ ಎಂಬುದಕ್ಕೆ ಜೋಶಿಮಠವು ಬಹಳ ಗಂಭೀರವಾದ ವಿಚಾರವಾಗಿದೆ" ಎಂದು ರಾಷ್ಟ್ರೀಯ ಬಿಕ್ಕಟ್ಟಿಗೆ ಕಾರಣವೆಂದು ಲೇಖಕ ಅಂಜಲ್ ಪ್ರಕಾಶ್ ವಿವರಿಸಿದರು.

ಏಕೆ ಮಾನವ ನಿರ್ಮಿತ?
"ನಿರ್ಮಾಣ ಕಾರ್ಯಗಳು ಯೋಜಿತವಲ್ಲದ ರೀತಿಯಲ್ಲಿ ನಡೆಯಲು ಪ್ರಾರಂಭಿಸಿದಾಗ ಅದನ್ನು ಮಾನವ ನಿರ್ಮಿತ ಕಾರಣ ಎಂದು ಕರೆಯಲಾಗುತ್ತದೆ" ಎಂದು ರೂರ್ಕಿ ಐಐಟಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಸತ್ಯೇಂದ್ರ ಮಿತ್ತಲ್ ಹೇಳುತ್ತಾರೆ.
'ಬಾಧಿತ ಪ್ರದೇಶದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸುರಂಗ ಕಾಮಗಾರಿ ನಡೆಯುತ್ತಿದ್ದು, ಅದರ ಲೈನಿಂಗ್ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಸುರಂಗದೊಳಗೆ ನೀರು ತುಂಬಿಕೊಂಡಿದೆ. ಇದು ಸುರಂಗದ ಯಾವುದೇ ಭಾಗದಿಂದ ಹೊರಬರುವುದಿಲ್ಲ. ಇದು ಸುರಂಗದಲ್ಲೇ ಶೇಖರಣೆಯಾಗುತ್ತಿದೆ. ಸುರಂಗದ ಯಾವುದೋ ಅಜ್ಞಾತ ಸ್ಥಳದಿಂದ ಹೊರಬರುವ ನೀರು ಎಲ್ಲೋ ಸಂಗ್ರಹವಾಗುತ್ತಿರಬೇಕು ಮತ್ತು ಆ ನೀರು ಭೂಮಿಯ ಸಾಮರ್ಥ್ಯಕ್ಕಿಂತ ಹೆಚ್ಚು ಸಂಗ್ರಹವಾದಾಗ, ಅದು ಜಲವಿದ್ಯುತ್ ಒತ್ತಡವನ್ನು ಹೆಚ್ಚಿಸುತ್ತದೆ, ಅದರ ಪರಿಣಾಮವು ಭೂಮಿಯ ಕುಸಿತವಾಗಿದೆ" ಎಂದು ಸತ್ಯೇಂದ್ರ ಹೇಳಿದ್ದಾರೆ.

ಕಾಂಗ್ರೆಸ್ ಆರೋಪವೇನು?
ಜೋಶಿಮಠ ಬಿಕ್ಕಟ್ಟನ್ನು 'ಮಾನವ ನಿರ್ಮಿತ' ದುರಂತ ಎಂದು ಕಾಂಗ್ರೆಸ್ ಸೋಮವಾರ ಬಣ್ಣಿಸಿದೆ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಮತ್ತು ತಜ್ಞರು ಮತ್ತು ಪರಿಸರವಾದಿಗಳ ವರದಿಯನ್ನು ಸಲ್ಲಿಸುವವರೆಗೆ ಈ ಪ್ರದೇಶದ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದೆ.

ಜೋಶಿಮಠ ನಿವಾಸಿಗಳ ಗಭೀರ ಆರೋಪ
ಆದರೆ ತಮಗೆ ಸೂಕ್ತ ನೆರವು ನೀಡುವಂತೆ ಒತ್ತಾಯಿಸಿ ನಿವಾಸಿಗಳು ಭಾನುವಾರ ತಹಸಿಲ್ ಪ್ರಧಾನ ಕಚೇರಿಯಲ್ಲಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು. ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ (ಎನ್‌ಟಿಪಿಸಿ) ತಪೋವನ-ವಿಷ್ಣುಗಡವನ್ನು ದೂಷಿಸಿದರು. ಪವಿತ್ರ ಪಟ್ಟಣಕ್ಕೆ 'ಬದಲಾಯಿಸಲಾಗದ' ಹಾನಿಯಾಗಿರುವುದು ವಿದ್ಯುತ್ ಯೋಜನೆಯಿಂದ ಎಂದು ದೂರಿದ್ದಾರೆ.
ಪ್ರಧಾನ ಮಂತ್ರಿಗಳ ಕಾರ್ಯಾಲಯ (ಪಿಎಂಒ) ಭಾನುವಾರ ದೆಹಲಿಯಲ್ಲಿ ಪರಿಸ್ಥಿತಿಯ ಉನ್ನತ ಮಟ್ಟದ ಪರಿಶೀಲನೆಯನ್ನು ನಡೆಸಿತು. ಇದರಲ್ಲಿ ರಾಜ್ಯ ಮತ್ತು ಕೇಂದ್ರ ಅಧಿಕಾರಿಗಳು ಮತ್ತು ಭೂವಿಜ್ಞಾನ ಮತ್ತು ವಿಪತ್ತು ನಿರ್ವಹಣೆಯ ವೈಜ್ಞಾನಿಕ ತಜ್ಞರು ಭಾಗವಹಿಸಿದ್ದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಧಾಮಿ ಅವರೊಂದಿಗೆ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.
ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಎಸ್.ಎಸ್.ಸಂಧು ನೆಲಮಟ್ಟದ ಮೌಲ್ಯಮಾಪನದ ನಂತರ, ಸುಮಾರು 350 ಮೀಟರ್ ಅಗಲದ ಭೂಮಿಗೆ ಹಾನಿಯಾಗಿದೆ ಎಂದು ನಿರ್ಧರಿಸಲಾಗಿದೆ. ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ, ರಾಜ್ಯದ ತಕ್ಷಣದ ಆದ್ಯತೆಗಳು ಪೀಡಿತ ಪ್ರದೇಶದಲ್ಲಿ ವಾಸಿಸುವ ಜನರ ಸುರಕ್ಷತೆಯಾಗಿರಬೇಕು ಎಂದು ಒತ್ತಿ ಹೇಳಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ನಾಲ್ಕು ರಾಜ್ಯ ಪಡೆಗಳು ಜೋಶಿಮಠಕ್ಕೆ ತಲುಪಿದ್ದು, ಜಿಲ್ಲಾಡಳಿತವು ಸಂತ್ರಸ್ತ ಕುಟುಂಬಗಳೊಂದಿಗೆ ಆಹಾರ, ವಸತಿ ಮತ್ತು ಭದ್ರತೆಗಾಗಿ ಸಾಕಷ್ಟು ವ್ಯವಸ್ಥೆಗಳೊಂದಿಗೆ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕೆಲಸ ಮಾಡುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications