ವೆಬ್‌ಸೈಟ್‌ನಲ್ಲಿ ಅಶ್ಲೀಲ ಜಾಹೀರಾತು: ದೂರುದಾರನಿಗೆ ಭಾರತೀಯ ರೈಲ್ವೆ ಕೊಟ್ಟ ಸಲಹೆ ಇದು!
ನವದೆಹಲಿ, ಮೇ 30: ಭಾರತೀಯ ರೈಲ್ವೆಯ ಅನೇಕ ಕುಂದುಕೊರತೆಗಳನ್ನು ಸರಿಪಡಿಸಲು ಟ್ವಿಟ್ಟರ್ ಸುಲಭ ಮತ್ತು ಸರಳ ಸಂಹವನ ಮಾರ್ಗವಾಗಿ ದೊರಕಿದೆ. ರೈಲಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ನೆರವಾಗುವ, ಟಿಕೆಟ್ ಬುಕಿಂಗ್ ವೇಳೆ ಉಂಟಾಗುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯ ಇಂಡಿಯನ್ ರೈಲ್ವೇ ಸೇವಾ ಟ್ವಿಟ್ಟರ್ ಖಾತೆ ಸ್ಪಂದಿಸುತ್ತಿದೆ.
ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವುದು ಮಾತ್ರವಲ್ಲದೆ, ಭಾರತೀಯ ರೈಲ್ವೆ ಯಡವಟ್ಟು ಮಾಡಿಕೊಳ್ಳುವ ತಮ್ಮ ಬಳಕೆದಾರರ ಕಾಲೆಳೆಯುವುದರಲ್ಲಿಯೂ ಹಿಂದೆ ಬಿದ್ದಿಲ್ಲ ಎಂಬುದು ಸಾಬೀತಾಗಿದೆ.
ಐಆರ್‌ಸಿಟಿಸಿ (ಭಾರತೀಯ ರೈಲ್ವೆ) ಆಪ್ ಬಳಕೆದಾರ ಆನಂದ್ ಕುಮಾರ್ ಎಂಬುವವರು ರೈಲ್ವೆಯ ಅಧಿಕೃತ ಟ್ವಿಟ್ಟರ್ ಖಾತೆಗೆ ಟ್ವೀಟ್ ಮಾಡಿದ್ದರು. ತಮ್ಮ ದೂರಿನಲ್ಲಿ ಅವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನೂ ಟ್ವೀಟ್ ಮಾಡಿದ್ದರು.

ಐಆರ್‌ಸಿಟಿಸಿ ಆಪ್ ತೆರೆದರೆ ಅಶ್ಲೀಲ ಜಾಹೀರಾತುಗಳೇ ಕಾಣಿಸುತ್ತಿವೆ ಎಂದು ಅವರು ಆರೋಪಿಸಿದ್ದರು. ಮೊಬೈಲ್‌ನಲ್ಲಿ ಕಾಣಿಸಿಕೊಂಡ ಜಾಹೀರಾತುಗಳ ಸ್ಕ್ರೀನ್ ಶಾಟ್ ಕೂಡ ತೆಗೆದು ಕಳುಹಿಸಿದ್ದರು.
'ಐಆರ್‌ಸಿಟಿಸಿ ಟಿಕೆಟ್ ಬುಕಿಂಗ್ ಆಪ್‌ನಲ್ಲಿ ಪದೇ ಪದೇ ಅಶ್ಲೀಲ ಮತ್ತು ಅಸಹ್ಯಕರ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿವೆ. ಇದು ತುಂಬಾ ಮುಜುಗರ ಹಾಗೂ ಕಿರಿಕಿರಿ ಉಂಟುಮಾಡುತ್ತಿದೆ. ರೈಲ್ವೆ ಸಚಿವಾಲಯ, ಐಆರ್‌ಸಿಟಿಸಿ ಅಧಿಕಾರಿಗಳು ಮತ್ತು ಪಿಯೂಷ್ ಗೋಯಲ್ ದಯವಿಟ್ಟು ಇದರತ್ತ ಗಮನ ಹರಿಸಿ' ಎಂದು ಆನಂದ್ ಕುಮಾರ್ ಟ್ವೀಟ್ ಮಾಡಿದ್ದರು.
ಇದಕ್ಕೆ ಐಆರ್‌ಸಿಟಿಸಿಯ ಗ್ರಾಹಕ ಕೇಂದ್ರದ ಖಾತೆಯಲ್ಲಿ ತಮಾಷೆಯಾಗಿ ಕಾಳೆಯುವ ಪ್ರತಿಕ್ರಿಯೆ ನೀಡಲಾಗಿದೆ. ಮೊದಲು ನಿಮ್ಮ ಬ್ರೌಸಿಂಗ್ ಹಿಸ್ಟರಿಯನ್ನು ಕ್ಲಿಯರ್ ಮಾಡಿಕೊಳ್ಳಿ ಎಂದು ಅದು ಸಲಹೆ ನೀಡಿದೆ.
#JCBkikhudai ki sari limelight le gaya anand kumar #JCBKiKhudaai #IRCTC pic.twitter.com/3wcMAoOhyU
— Gulshan (@jalazverma) 29 May 2019
'ಜಾಹೀರಾತುಗಳನ್ನು ಪೂರೈಸಲು ಐಆರ್‌ಸಿಟಿಸಿ ಗೂಗಲ್‌ನ ಜಾಹೀರಾತು ಸೇವಾ ಸಾಧನ ಎಡಿಎಕ್ಸ್‌ಅನ್ನು ಬಳಸುತ್ತಿದೆ. ಈ ಜಾಹೀರಾತುಗಳು ಬಳಕೆದಾರರನ್ನು ಗುರಿಯಾಗಿಸಲು ಕುಕಿಗಳನ್ನು ಬಳಸುತ್ತದೆ. ಬಳಕೆದಾರನ ಬ್ರೌಸಿಂಗ್ ಇತಿಹಾಸ ಮತ್ತು ಬ್ರೌಸಿಂಗ್ ನಡತೆಗಳಿಗೆ ಅನುಗುಣವಾಗಿ ಜಾಹೀರಾತುಗಳು ಬರುತ್ತವೆ. ಇಂತಹ ಜಾಹೀರಾತುಗಳನ್ನು ತಡೆಯಲು ಎಲ್ಲ ಬ್ರೌಸರ್ ಕುಕಿಗಳನ್ನು ಹಾಗೂ ಹಿಸ್ಟರಿಯನ್ನು ಸ್ವಚ್ಛಗೊಳಿಸಿ ಮತ್ತು ಅಳಿಸಿ ಹಾಕಿ' ಎಂದು ಐಆರ್‌ಸಿಟಿಸಿ ಅಧಿಕೃತ ಖಾತೆ ಪ್ರತಿಕ್ರಿಯೆ ನೀಡಿದೆ.
ಐಆರ್‌ಸಿಟಿಸಿ ಈ ರೀತಿ ಪ್ರತಿಕ್ರಿಯೆ ನೀಡುತ್ತಿದ್ದಂತೆಯೇ ಟ್ವಿಟ್ಟರ್‌ನಲ್ಲಿ ತಮಾಷೆಯ ಮೀಮ್ಸ್‌ಗಳ ಮಹಾಪೂರವೇ ಹರಿದುಬರುತ್ತಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications