ನವದೆಹಲಿಯಲ್ಲಿ ನಾರಿಶಕ್ತಿ, ಮಹಿಳಾ ದಿನ ಸಂತಸದಲ್ಲಿ ಸುಷ್ಮಾ

Posted By:
Subscribe to Oneindia Kannada

ನವದೆಹಲಿ,ಮಾರ್ಚ್,09: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕದ ಸುಪರ್ಣಾ ಬಾಕ್ಸಿ ಗಂಗೂಲಿ ಸೇರಿದಂತೆ ಒಟ್ಟು ೧೫ ಮಂದಿ ಮಹಿಳೆಯರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನವದೆಹಲಿಯಲ್ಲಿ ನಾರಿಶಕ್ತಿ ಪ್ರಶಸ್ತಿ ಪ್ರದಾನ ಮಾಡಿದರು.

ನಾರಿಶಕ್ತಿ ಪ್ರಶಸ್ತಿ ಪಡೆದ 15 ಮಹಿಳೆಯರು ಪತ್ರಿಕೋದ್ಯಮ, ಮಾನವ ಹಕ್ಕು ಹೋರಾಟ ಸಮಿತಿ ಹೀಗೆ ನಾನಾ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಾಗಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತೆಯರು, ಪರಿಸರ ಸಂಸ್ಥೆ ಹೀಗೆ ನಾನಾ ಸಂಸ್ಥೆಗಳಿಗೂ ಪ್ರಶಸ್ತಿ ನೀಡಲಾಯಿತು.['ಏಷಿಯಾ ರತ್ನ ಪ್ರಶಸ್ತಿ' ಪಡೆದ ಕೊಡಕ್ಕಲ್ ಶಿವಪ್ರಸಾದ್]

ಈ ಸುದ್ದಿಯ ಜೊತೆಗೆ ಭಾರತೀಯ ವಾಯುಪಡೆ ಯುದ್ದವಿಮಾನಗಳಲ್ಲಿ ಮೂರು ಮಹಿಳೆಯರ ನೇಮಕ, ವಿಶ್ವ ಮಹಿಳಾ ದಿನಾಚರಣೆಯಂದು ಮಹಿಳೆಯರ ಸಂಭ್ರಮ,ಮಹಿಳಾ ದಿನಾಚರಣೆಯಂದೇ ಮಹಿಳೆಯರಿಂದ ಪ್ರತಿಭಟನೆ, ಮನುಸ್ಮೃತಿ ಪ್ರತಿ ಬೆಂಕಿಗೆ ಆಹುತಿ, ಕೆಲವೆಡೆ ಭಾಗಶಃ, ಇನ್ನೂ ಹಲವೆಡೆ ಸಂಪೂರ್ಣ ಸೂರ್ಯಗ್ರಹಣ ಹೀಗೆ ನಾನಾ ಸುದ್ದಿಗಳು ಇಲ್ಲಿವೆ.

ನಾರಿಶಕ್ತಿ ಪ್ರಶಸ್ತಿ ಪಡೆದವರು

ನಾರಿಶಕ್ತಿ ಪ್ರಶಸ್ತಿ ಪಡೆದವರು

ಕರ್ನಾಟಕದ ಸುಪರ್ಣಾ ಬಕ್ಸಿ ಗಂಗೂಲಿ, ಮಹಾರಾಷ್ಟ್ರದ ಸಿಸ್ಟರ್ ಲೂಸಿ ಕುರಿಯನ್, ಪ್ರೀತಿ ಪಾಟ್ಕರ್, ಶಕುಂತಲಾ ಮಜುಮ್ ದಾರ್, ಜ್ಯೋತಿ ಮಪ್ಸೆಕರ್, ದೆಹಲಿಯ ವಾಸು ಪ್ರಮಿಳಾನಿ, ಸುಮಿತ್ ಘೋಶ್, ಅಂಜಲಿ ಶರ್ಮಾ ಮತ್ತು ಕೃಷ್ಣಾ ಯಾದವ್, ಬಿಹಾರದ ಸೌರಭ್ ಸುಮನ್, ಉತ್ತರಾಖಂಡದ ಬಸಂತಿ ದೇವಿ, ರಾಜಸ್ತಾನದ ಮೀನಾ ಶರ್ಮಾ, ಮಧ್ಯಪ್ರದೇಶದ ಉತ್ತರಾ ಪರವಾರ್, ಆಂಧ್ರಪ್ರದೇಶದ ವಿಜಯಾ ನಿರ್ಮಲಾ ಮತ್ತು ಹರಿಯಾಣದ ಸುಜಾತಾ ಸಾಹು.

ಮನುಸ್ಮೃತಿ ಪ್ರತಿಗೆ ಬೆಂಕಿ

ಮನುಸ್ಮೃತಿ ಪ್ರತಿಗೆ ಬೆಂಕಿ

ಅಖಿಲ ಭಾರತೀಯ ವಿದ್ಯಾರ್ಥಿ ಸಂಘ ಹಾಗೂ ಆರ್ಎಸ್ ಎಸ್ ಸಂಘದಿಂದ ಹೊರಬಂದ ಕೆಲವು ಕಾರ್ಯಕರ್ತರು ಭಾರತದ ಅತ್ಯಂತ ಪ್ರಾಚೀನ ಗ್ರಂಥಗಳಲ್ಲಿ ಒಂದಾದ ಮನುಸ್ಮೃತಿಯ ಪ್ರತಿಯನ್ನು ಜೆಎನ್ ಯು ಪ್ರಕರಣದ ಕೆಲವು ಗೊಂದಲ, ಗಲಾಟೆ ಹೀಗೆ ನಾನಾ ಕಾರಣಗಳನ್ನು ನೀಡಿ ಸುಟ್ಟುಹಾಕಿದರು. [ಎಬಿವಿಪಿ ತೊರೆದವರು ದೆಹಲಿಯಲ್ಲಿ ಮನುಸ್ಮೃತಿ ಸುಟ್ಟರು]

ಗ್ರಹಣ ಹಿಡಿದ ಸೂರ್ಯ

ಗ್ರಹಣ ಹಿಡಿದ ಸೂರ್ಯ

ಕೆಲವು ಭಾಗಗಳಲ್ಲಿ ಸಂಪೂರ್ಣ ಸೂರ್ಯ ಗ್ರಹಣ ಗೋಚರಿಸಿದರೆ, ಇನ್ನೂ ಕೆಲವು ಕಡೆ ಭಾಗಶಃ ಸೂರ್ಯಗ್ರಹಣ ಕಾಣಿಸಿದೆ. ಸೂರ್ಯಗ್ರಹಣವು ಬುಧವಾರ ಬೆಳಿಗ್ಗೆ 5.46 ರಿಂದ 6.45 ವರೆಗೆ ಕಾಣಿಸಿಕೊಂಡಿತ್ತು. ಬೆಲಿಂಗ್ಟನ್, ಇಂಡೋನೇಷಿಯಾದಲ್ಲಿ ಗ್ರಹಣ ಹಿಡಿದ ಸೂರ್ಯ ಕಾಣಿಸಿದ್ದು ಹೀಗೆ.[ಖಗ್ರಾಸ ಸೂರ್ಯಗ್ರಹಣ ಕುಳಿತಲ್ಲಿಯೆ ನೋಡ್ಕಂಡ್ ಬನ್ನಿ]

ಜೂ.18ಕ್ಕೆ ಯುದ್ಧ ವಿಮಾನದಲ್ಲಿ ಮಹಿಳಾ ಪೈಲಟ್

ಜೂ.18ಕ್ಕೆ ಯುದ್ಧ ವಿಮಾನದಲ್ಲಿ ಮಹಿಳಾ ಪೈಲಟ್

ಭಾರತೀಯ ವಾಯುಪಡೆಯು ಭಾವನಾ ಕಾಂತ್, ಅವ್ನಿ ಚತುರ್ವೇದಿ, ಮೋಹನ ಸಿಂಗ್ ಎಂಬ ಮೂವರು ಮಹಿಳೆಯರನ್ನು ಯುದ್ಧ ವಿಮಾನಗಳಲ್ಲಿ ಜೂನ್ ೧೮ಕ್ಕೆ ನಿಯೋಜಿಸಲು ನಿರ್ಧರಿಸಿದೆ. ಭಾರತದ ಯುದ್ಧ ವಿಮಾನಗಳಲ್ಲಿ ಮಹಿಳಾ ಪೈಲಟ್ ಗಳನ್ನು ನೇಮಕ ಮಾಡುತ್ತಿರುವುದು ಇದೇ ಮೊದಲ ಬಾರಿ.[ಜೂ.18ಕ್ಕೆ ಯುದ್ಧ ವಿಮಾನ ಏರಲಿದ್ದಾರೆ 3 ಮಹಿಳಾ ಪೈಲಟ್]

ವಿ ಆರ್ ದ ವರ್ಲ್ಡ್

ವಿ ಆರ್ ದ ವರ್ಲ್ಡ್

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನವದೆಹಲಿಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳಾ ಮಣಿಗಳ ಜೊತೆ ಸಂಭ್ರಮಿಸಿದ್ದು ಹೀಗೆ.[ಈಕೆ ಗೃಹಿಣಿಯಲ್ಲ, ಇಡೀ ಮನುಕುಲವನ್ನೇ ಹೊತ್ತ ಜಗಜ್ಜನನಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
External Affairs Minister Sushma Swaraj at an event celebrating International Women's Day, Prime Minister Narendra Modi with the award winners of "Nari Shakti Puraskar - 2015", in New Delhi, The three cadets who will be inducted in the Indian Air Force on June 18th
Please Wait while comments are loading...