Measles: ಭಾರತದಲ್ಲಿ 11 ಲಕ್ಷ ಮಕ್ಕಳು ಈ ಲಸಿಕೆ ಪಡೆದಿಲ್ಲ: ಆಘಾತಕಾರಿ ಅಂಶ ಬಹಿರಂಗಪಡಿಸಿದ ವಿಶ್ವಸಂಸ್ಥೆ
ನವದೆಹಲಿ, ನವೆಂಬರ್ 19: ದಡಾರ ಲಸಿಕೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಭಾರತದ ಲಕ್ಷಾಂತರ ಮಕ್ಕಳು ಈ ಕಾಯಿಲೆ ಕುರಿತು ಲಸಿಕೆ ಪಡೆದಿಲ್ಲ ಎಂದಿದೆ. ಇದರ ಅಂಕಿ ಸಂಖ್ಯೆಗಳನ್ನು ಮುಂದೆ ತಿಳಿಯಿರಿ.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ)ವರದಿ ಪ್ರಕಾರ, ದೇಶದಲ್ಲಿ ಅಂದಾಜು 11 ಲಕ್ಷ ಮಕ್ಕಳು ನಿರ್ಣಾಯಕ ಮೊದಲ ಡೋಸ್ ದಡಾರ ಲಸಿಕೆಯನ್ನು 2022 ರಲ್ಲಿ ಹಾಕಿಸಿಕೊಂಡಿಲ್ಲ. ಈ ಮೂಲಕ ಮೊದಲ ಡೋಸ್ ಪಡೆಯದ ಅತ್ಯಧಿಕ ಮಕ್ಕಳಿರುವ 10 ದೇಶಗಳ ಪಟ್ಟಿಯಲ್ಲಿ ಭಾರತವು ಸೇರಿದೆ ಎಂಬುದು ಕಳವಳಕಾರಿ ಸಂಗತಿಯಾಗಿದೆ.

ಕಳೆದ ವರ್ಷ 2022 ರಲ್ಲಿ ಏಕಾಎಕಿ 40,967 ದಡಾರ ಪ್ರಕರಣಗಳು ವರದಿ ಆಗಿದ್ದವು. ಹೀಗಾಗಿ ಕಾಯಿಲೆ ಹೆಚ್ಚಾದ ದೊಡ್ಡ ದೊಡ್ದ 37 ದೇಶಗಳಲ್ಲಿ ಭಾರತವೂ ಒಂದಾಗಿದೆ. ವಿಶ್ವಮಟ್ಟದಲ್ಲಿ 2008 ರಿಂದಲೇ ಈ ಸಾಂಕ್ರಾಮಿಕ ದಡಾರ ವಿರುದ್ಧ ಹೋರಾಟ ಆರಂಭಿಸಲಾಯಿತು. ಈವರೆಗೆ ಕಾಯಿಲೆ ವಿರುದ್ಧದ ಪ್ರತಿರಕ್ಷಣೆ ಕ್ರಮವು ಪರಿಣಾಮಕಾರಿಯಾಗಿಲ್ಲ.
ಕಾಯಿಲೆ ವಿರುದ್ಧದ ಪರಿಣಾಮಕಾರಿ ರಕ್ಷಣೆ ಆಗದ ಹಿನ್ನೆಲೆಯಲ್ಲಿ ಪ್ರಕರಣಗಳಲ್ಲಿ ಶೇಕಡ 18ರಷ್ಟಕ್ಕೆ ಇಳಿಯಿತು. ಕಳೆದ ವರ್ಷ 2022 ರಲ್ಲಿ ದಡಾರದಿಂದ ಮೃತಪಟ್ಟವರ ಸಂಖ್ಯೆ ಶೇಕಡಾ 43ರಷ್ಟಕ್ಕೆ ಹೆಚ್ಚಳವಾಯಿತು.
ಲಸಿಕೆ ಪಡೆಯವರ ಆರೋಗ್ಯ ಮತ್ತಷ್ಟು ದುರ್ಬಲ
ಈ ಸಾಂಕ್ರಾಮಿಕ ರೋಗದ ವಿರುದ್ಧ 2020 ಮತ್ತು 2021 ರಲ್ಲಿ ಆರೋಗ್ಯ ರಕ್ಷಣೆಯಲ್ಲಿ ಕುಸಿತವಾಗಿದೆ ಎಂದು ವರದಿ ತಿಳಿಸುತ್ತದೆ. ವಿಶೇಷವೆಂದರೆ ನಿರ್ಲಕ್ಷ್ಯ ಅಥವಾ ಬೇರೇನೋ ಕಾರಣಗಳಿಂದ ಲಸಿಕೆ ತಪ್ಪಿಸಿಕೊಂಡಿದ್ದೆ ಆದಲ್ಲಿ ಆ ವ್ಯಕ್ತಿ ಆರೋಗ್ಯವು ದಡಾರದಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆಗಳು ಇವೆ.

ಸಾಂಕ್ರಾಮಿಕ ಸಮಯದಲ್ಲಿ ಪೆರಿ-ಅರ್ಬನ್ ಪ್ರದೇಶಗಳು ಮತ್ತು ಕ್ಲಸ್ಟರ್ ಪ್ರದೇಶಗಳಲ್ಲಿ ಈ ಕಾಯಿಲೆ ಹೆಚ್ಚು ವರದಿ ಆದವು ಎಂದು ರೋಗನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಜಿಐ) ಮುಖ್ಯಸ್ಥ ಡಾ.ಎನ್.ಕೆ.ಅರೋರಾ ಹೇಳಿದರು.
ಲಸಿಕೆ ಪಡೆದರೆ ಶೇ.97 ರಕ್ಷಣೆ
ಮಕ್ಕಳು ದಡಾರ್ ಲಸಿಕೆ ಪಡೆದಿದ್ದಾರೆ ಅಲ್ಲಿ ಅವರಿಗೆ ಶೇಕಡಾ 97 ರಕ್ಷಣೆ ಸಿಗಲಿದೆ ವರದಿ ಹೇಳುತ್ತದೆ. ಒಂದೇ ಡೋಸ್ ಪಡೆಯುವುದು ಅಷ್ಟಾಗಿ ಸುರಕ್ಷತೆಯನ್ನು ನಿರೀಕ್ಷೆ ಮಾಡಲಾಗದು. ಸಾಮಾನ್ಯವಾಗಿ ಹೆಚ್ಚಿನ ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಮೆದುಳಿನ ಊತ, ನ್ಯುಮೋನಿಯಾ ಮತ್ತು ಉಸಿರಾಟದ ತೊಂದರೆಗಳನ್ನು ಸೃಷ್ಟಿಸುತ್ತದೆ. ತೀವ್ರ ಅತಿಸಾರವು ಸಹ ಇದರ ಲಕ್ಷಣಗಳಾಗಿವೆ.
ಜಾಗತಿಕವಾಗಿ 33 ಮಿಲಿಯನ್ ಮಕ್ಕಳು ಎರಡೂ ಡೋಸ್ ಅಥವಾ ಎರಡನೇ ಡೋಸ್ ಅನ್ನು ತಪ್ಪಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಆದಷ್ಟು ಶೀಘ್ರವೇ ಲಸಿಕೆ ಪಡೆಯದ ಮಕ್ಕಳನ್ನು ಆರೋಗ್ಯ ಇಲಾಖೆಗಳು ತಲುಪುವ ಪ್ರಯತ್ನ ಮಾಡುತ್ತಿವೆ ಎಂದು ಡಾ.ಅರೋರಾ ತಿಳಿಸಿದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.












Click it and Unblock the Notifications