ಚೀನಾ ಗಡಿಯಲ್ಲಿ ರೈಲು ನಿಲ್ದಾಣಕ್ಕೆ ಪರಿಕ್ಕರ್ ಹಸಿರು ನಿಶಾನೆ

ಪಣಜಿ ಏ. 12: ಚೀನಾ ಗಡಿಯಲ್ಲಿ ರೈಲು ನಿಲ್ದಾಣವೊಂದನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅರುಣಾಚಲ ಪ್ರದೇಶದ ಚೀನಾ ಗಡಿ ಸಮೀಪ ರೈಲು ನಿಲ್ದಾಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್ ತಿಳಿಸಿದ್ದಾರೆ.

ಯೋಜನೆ ಅನುಷ್ಠಾನದ ಬಗ್ಗೆ ರೈಲ್ವೆ ಸಚಿವ ಸುರೇಶ್‌ ಪ್ರಭು ಅವರೊಂದಿಗೆ ಮಾತನಾಡಿದ್ದೇನೆ. ಕರುಡು ಸಿದ್ಧವಾಗಿದ್ದು ಅದಕ್ಕೆ ಎಲ್ಲರ ಒಪ್ಪಿಗೆ ಪಡೆದು ಸಹಿ ಹಾಕಲಾಗುವುದು ಎಂದು ತಿಳಿಸಿದ್ದಾರೆ.[ಅಬ್ಬಬ್ಬಾ.. ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಇದೆಂಥಾ ಮೋಸ]

railway

ನೇಪಾಳಕ್ಕೆ ಸಂಪರ್ಕ ನೀಡಲು ಚೀನಾ ಮೌಂಟ್ ಎವರೆಸ್ಟ್ ಪರ್ವತದ ತಪ್ಪಲಿನಲ್ಲಿ ಹೊಸ ಸುರಂಗ ಮಾರ್ಗ ಕೊರೆದು ಮಾರ್ಗ ನಿರ್ಮಿಸುತ್ತೇನೆ ಎಂದು ಇತ್ತೀಚೆಗೆ ಹೇಳಿತ್ತು. ಅಲ್ಲದೇ ಅರಿಣಾಚಲ ಪ್ರದೇಶಕ್ಕೆ ಸಂಬಂಧಿಸಿ ಗಡಿ ಕ್ಯಾತೆಯನ್ನು ತೆಗೆದಿತ್ತು. ಇಂಥ ಸಂದರ್ಭದಲ್ಲಿ ಪರಿಕ್ಕರ್ ಮಹತ್ವದ ಹೇಳಿಕೆ ನೀಡಿದ್ದಾರೆ.[ಇನ್ನೂ 4 ತಿಂಗಳ ಮೊದಲೇ ರೈಲ್ವೆ ಟಿಕೆಟ್ ಬುಕ್ ಮಾಡಿ]

ಭಾರತದ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಲಿದ್ದು ನಾಗರೀಕರಿಗೆ ಅನುಕೂಲಕಾರಿಯಾಗಲಿದೆ. ನಮ್ಮ ದೇಶದ ಘನತೆ ಮತ್ತು ಗೌರವವನ್ನು ಎತ್ತಿ ಹಿಡಯಬೇಕಾಗಿದೆ. ಅದಕ್ಕೆ ಈ ಯೋಜನೆ ಪೂರಕವಾಗಲಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಪರಿಕ್ಕರ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+