Indian Railways: ರೈಲ್ ಒನ್ ಆ್ಯಪ್ ಬಳಕೆದಾರರಿಗೆ ರೈಲ್ವೆ ಹೊಸ ನಿಯಮ ಜಾರಿ
ರೈಲ್ ಒನ್ ಆ್ಯಪ್ ಮೂಲಕ ರೈಲು ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಮಹತ್ವದ ಸೂಚನೆ ನೀಡಿದೆ. ಇನ್ನು ಮುಂದೆ ರೈಲಿನ ಪ್ರಯಾಣ ಮಾಡುವ ವೇಳೆ ರೈಲ್ ಒನ್ ಆ್ಯಪ್್ನಲ್ಲಿರುವ ಮೂಲ ಡಿಜಿಟಲ್ ಟಿಕೆಟ್ ಮಾತ್ರ ಮಾನ್ಯ ಆಗಲಿದೆ. ಟಿಕೆಟ್ ಸ್ಕ್ರೀನ್ಶಾಟ್, ಪೋಟೋ, PDF ಅಥವಾ ವಾಟ್ಸ ಆ್ಯಪ್ ಮೂಲಕ ಬಂದಿರುವ ಪ್ರತಿಯನ್ನು ತೋರಿಸಿದರೆ ಅದನ್ನು ಮಾನ್ಯ ಎಂದು ಪರಿಗಣಿಸುವುದಿಲ್ಲ. ಈ ನಿಯಮ ಉಲ್ಲಂಘನೆ ಮಾಡಿದರೆ ದಂಡ ಹಾಕುವ ಸಾಧ್ಯತೆ ಇರುತ್ತದೆ.
ಡಿಜಿಟಲ್ ಟಿಕೆಟ್್ಗಳ ದುರುಪಯೋಗ ತಡೆಯಲು ಹಾಗೂ ಟಿಕೆಟ್ ಪರಿಶೀಲನೆ ಪ್ರಕ್ರಿಯೆ ಇನ್ನಷ್ಟು ಸುಲಭ ಮತ್ತು ಸುರಕ್ಷಿತ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಹೊಸ ನಿಯಮ ಏನು ಹೇಳುತ್ತದೆ
ರೈಲ್ ಒನ್ ಆ್ಯಪ್ ಮೂಲಕ ಬುಕ್ ಮಾಡಿದ ಟಿಕೆಟ್ ಅನ್ನು ಪ್ರಯಾಣದ ವೇಳೆ ಅದೆ ಮೊಬೈಲ್ ಪೋನಿನಲ್ಲಿ ತೋರಿಸಬೇಕು. ಜೊತೆಗೆ, ಟಿಕೆಟ್ ಬುಕ್ ಮಾಡಿದ ಪೋನ್ ನಂಬರ್ ಅದೇ ಸಂಖ್ಯಯಲ್ಲೆ ಲಭ್ಯವಿರಬೇಕು. ಟಿಕೆಟ್ಟುಗಳು ಪರಿಶೀಲನೆಗೆ ಬಂದಾಗ ಆ್ಯಪ್್ನಲ್ಲಿರುವ ಮೂಲ ಡಿಜಿಟಲ್ ಟಿಕೆಟ್ ತೋರಿಸುವುದು ಕಡ್ಡಾಯ ಮಾಡಲಾಗಿದೆ.
ಯಾವ ಟಿಕೆಟ್ಗಳು ಮಾನ್ಯ ಅಲ್ಲ
ರೈಲ್ವೆ ಇಲಾಖೆ ಸ್ಪಷ್ಟ ಪಡಿಸಿದಂತೆ ಕೆಳಗಿನ ರೂಪದಲ್ಲಿ ತೋರಿಸಿದರೆ ಟಿಕೆಟ್ ಮಾನ್ಯ ಎಂದು ಪರಿಗಣಿಸುವುದಿಲ್ಲ
* ಟಿಕೆಟ್ ಪೋಟೋ
* PDF ಕಾಪಿ
* ವಾಟ್ಸ್ಆ್ಯಪ್ ಮೂಲಕ ಬಂದ ಟಿಕೆಟ್
* ಟಿಕೆಟ್ ಫಾರ್ವರ್ಡ್ ಮಾಡಿದ ಮೇಸೆಜ್
* ಟಿಕೆಟ್ ಸ್ಕ್ರೀನ್ಶಾಟ್
ಈ ತರಹದ ಯಾವುದೇ ಪ್ರತಿಯನ್ನು ತೋರಿಸಿದರು ಟಿಕೆಟ್ ಅಮಾನ್ಯವಾಗುತ್ತದೆ.
ಟಿಕೆಟ್ ಯಾವಾಗ ಮತ್ತು ಹೇಗೆ ಮಾಡಬೇಕು
ಅನಿರಕ್ಷಿತ ಡಿಜಿಟಲ್ ಟಿಕೆಟ್ ಅನ್ನು ರೈಲು ನಿಲ್ದಾಣದಿಂದ ಹೊರಡುವ ಮೊದಲು ಬುಕ್ ಮಾಡಿರಬೇಕು. ರೈಲು ಹೊರಟ ನಂತರ ಬುಕ್ ಮಾಡಿದ ಟಿಕೆಟ್ ರೈಲ್ ಒನ್ ಆ್ಯಪ್ ಕಾಣಿಸಿಕೊಂಡರು ಅದನ್ನು ಮಾನ್ಯ ಎಂದು ಹೇಳುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಲಹೆ
* ಟಿಕೆಟನ್ನು ಬುಕ್ ಮಾಡಿ ಮೊಬೈಲ್ ಅನ್ನು ಜೊತೆಗೆ ಕೊಂಡೊಯ್ಯಬೇಕು
* ಮೊಬೈಲ್ ಬ್ಯಾಟರಿ ಚಾರ್ಜ ಮಾಡಿಕೊಳ್ಳಿ
* ಪ್ರಯಾಣಿಕ್ಕೂ ಮೊದಲು ಟಿಕೆಟ್ ದಿನಾಂಕ, ನಿಲ್ದಾಣ ಸೇರಿದಂತೆ ಎಲ್ಲ ವಿವರಗಳನ್ನು ಪರಿಶೀಲಿಸಿ.
* ಸ್ಕ್ರೀನ್ಶಾಟ್ ಅಥವಾ ಫಾರ್ವರ್ಡ್ ಮಾಡಿದ ಟಿಕೆಟ್ ನಂಬಬೇಡಿ
* ರೈಲ್ ಒನ್ ಆ್ಯಪ್ ಮೂಲ ಟಿಕೆಟ್ ಸಿದ್ದವಾಗಿರುವಂತೆ ನೋಡಿಕೊಳ್ಳಿ.
ಈ ನಿಯಮ ಎಲ್ಲ ಟಿಕೆಟ್್ಗೂ ಅನ್ವಯವಾಗುತ್ತದೆಯೇ?
ಇಲ್ಲ, ಈ ಹೊಸ ನಿಯಮ ರೈಲ್ ಒನ್ ಆ್ಯಪ್ ಮೂಲಕ ಬುಕ್ ಮಾಡುವ ಅನಿರಕ್ಷತ ಡಿಜಿಟಲ್ ಟಿಕೆಟ್ ಮಾತ್ರ ಅನ್ವಯಿಸುತ್ತದೆ. ಕಾಯ್ದಿರಿಸಿದ ಟಿಕೆಟ್್ಗಳ ಪರಿಶೀಲನೆ ಗುರುತಿನ ಚೀಟಿ ಆಧಾರದಲ್ಲಿ ನಡೆಯುವುದರಿಂದ ಈ ನಿಯಮ ಅನ್ವಯಿಸುವುದಿಲ್ಲ.
ಈ ಹೊಸ ನಿಯಮ ಉದ್ದೇಶ
ಡಿಜಿಟಲ್ ಟಿಕೆಟ್ ಬಳಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸ್ಕ್ರೀನ್ಶಾಟ್ ಹಾಗೂ ಫಾರ್ವರ್ಡ್ ಮಾಡಿದ ಪ್ರತಿಗಳ ಮೂಲಕ ಅನಧಿಕೃತ ಪ್ರಯಾಣದ ಘಟನೆಗಳು ಬೆಳಕಿಗೆ ಬಂದಿದೆ. ಇದನ್ನು ತಡೆಯಲು ಹಾಗೂ ಡಿಜಿಟಲ್ ಟಿಕೆಟ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ರೈಲ್ವೆ ಈ ನಿಯಮ ಜಾರಿಗೆ ತಂದಿದೆ.
ಇಲ್ಲಿವೆ ಪ್ರಮುಖ ಅಂಶಗಳು
* ರೈಲ್ ಒನ್ ಆ್ಯಪ್್ಲ್ಲಿರುವ ಮೂಲ ಡಿಜಿಟಲ್ ಟಿಕೆಟ್ ಮಾತ್ರ ಮಾನ್ಯ.
* ಸ್ಕ್ರೀನ್ಶಾಟ್ PDF ಹಾಗೂ ವಾಟ್ಸ್ಆ್ಯಪ್ ಮೂಲಕ ಬಂದ ಟಿಕೆಟ್್ಗಳನ್ನು ಸ್ವಿಕರಿಸುವುದಿಲ್ಲ.
* ಟಿಕೆಟ್ ಬುಕ್ ಮಾಡಿದ ಅದೇ ಮೊಬೈಲ್ ಮತ್ತು ನೋಂದಾಯಿತ ಸಂಖ್ಯೆಯಲ್ಲೇ ಟಿಕೆಟ್ ಇರಬೇಕು.
* ರೈಲು ಹೊರಟ ಬಳಿಕ ಬುಕ್ ಮಾಡಿದ ಅನಿರಕ್ಷಿತ ಟಿಕೆಟ್ ಮಾನ್ಯವಾಗುವುದಿಲ್ಲ.
* ನಿಯಮ ಉಲ್ಲಂಘನೆ ಮಾಡಿದರೆ ದಂಡ ವಿಧಿಸಬಹುದು.














Click it and Unblock the Notifications