ರೈಲು ಪ್ರಯಾಣಿಕರ ಬೇಡಿಕೆಗೆ ಅಸ್ತು : ಹೌರಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಬಣ್ಣ ಬಣ್ಣದ ಬೆಡ್ ಸ್ಪ್ರೆಡ್

Indian Railways: ಭಾರತೀಯ ರೈಲ್ವೆ ಇತ್ತೀಚಿನ ದಿನಗಳಲ್ಲಿ ಹೈಜೀನ್ ಬಗ್ಗೆ ಹೆಚ್ಚಿನ ಒತ್ತು ಕೊಡುತ್ತಿದೆ. ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡುತ್ತಿದೆ. ಮೊದಲೆಲ್ಲಾ ರೈಲು ಹತ್ತಿದರೆ ಸಾಕು ಟಾಯ್ಲೆಟ್ ವಾಸನೆ ಮೂಗಿಗೆ ಬಡಿಯುವುದು. ರೈಲಿನ ಒಳಗೆ ಎಲ್ಲಿ ನೊಡಿದರೂ ಕಸ, ಕೊಳಕು. ಈಗ ಹಾಗಲ್ಲ. ಟಾಯ್ಲೆಟ್​ ಗಳನ್ನು ಕ್ಲೀನ್ ಮಾಡಿಸಲಾಗುತ್ತದೆ. ಪದೇ ಪದೇ ಬೋಗಿಗಳಿಗೆ ಬಂದು ಕಸ ತೆಗೆಯುವುದಲ್ಲದೆ, ಬೋಗಿಯ ನೆಲವನ್ನು ನೀಟಾಗಿ ಒರೆಸಿ ಹೋಗುತ್ತಾರೆ. ಇದೀಗ ರೈಲು ಪ್ರಯಾಣಿಕರ ಪ್ರಯಾಣವನ್ನು ಆರಾಮವಾಗಿಸುವ ನಿಟ್ಟಿನಲ್ಲಿ ಪೂರ್ವ ರೈಲ್ವೆ (ER) ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

Indian Railways Replacement Of Blankets Floral Comforters In 1st AC Howrah New Delhi Rajdhani Express

ರೈಲು ಪ್ರಯಾಣವನ್ನು ಹೆಚ್ಚು ಆರಾಮದಾಯಕ ಮತ್ತು ಆರೋಗ್ಯಕರವಾಗಿಸಲು, ಪೂರ್ವ ರೈಲ್ವೆ (ER) ಹೌರಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸಿನ ಫಸ್ಟ್ ಎಸಿ ಬೋಗಿಗಳಲ್ಲಿ ಕಂಬಳಿಗಳ ಬದಲಿಗೆ ಫ್ಲೋರಲ್ ಕಂಫರ್ಟರ್ ಬೆಡ್ ಶೀಟ್ ಗಳನ್ನು ಪರಿಚಯಿಸಿದೆ. ಮೊದಲು ಬಿಳಿ ಬಣ್ಣದ ಬೆಡ್ ಸ್ಪ್ರೆಡ್ ಮತ್ತು ಕಂಬಳಿಯನ್ನು ಕೊಡುತ್ತಿದ್ದರು. ಈಗ ಜಾಗಕ್ಕೆ ಹೂವಿನ ಡಿಸೈನ್ ಇರುವ ಬಣ್ಣ ಬಣ್ಣದ ಬೆಡ್ ಶೀಟ್ ಮತ್ತು ಸ್ಪ್ರೆಡ್ ಬಂದಿದೆ.

ರೈಲಿನಲ್ಲಿ ಕೊಡುವ ಬೆಡ್ ಶೀಟ್, ಕಂಬಳಿಯನ್ನು ಪ್ರತಿ ಸಲ ವಾಶ್ ಮಾಡುವುದಿಲ್ಲ. ಒಬ್ಬರು ಉಪಯೋಗಿಸಿದ ಬೆಡ್ ಶೀಟ್ ಕಂಬಳಿಯನ್ನೇ ಮತ್ತೆ ಮತ್ತೆ ಬಳಕೆಗೆ ಕೊಡಲಾಗ್ತದೆ. ದಿಂಬಿನ ಕವರ್ ಕೂಡಾ ಒಗೆಯುವುದಿಲ್ಲ ಎನ್ನುವ ದೂರು ರೈಲ್ವೆಗೆ ಬಂದಿತ್ತು. ವಾಶ್ ಮಾಡದೇ ಇರುವ ಬೆಡ್ ಶೀಟ್ ಗಳನ್ನು ಬಳಸುವುದು ಹೇಗೆ ಎನ್ನುವ ಪ್ರಶ್ನೆ ಕೂಡಾ ಎದ್ದಿತ್ತು. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ರೈಲ್ವೆ ಉತ್ತರಿಸಿದೆ. ಹೈಜೀನ್ ಬಗ್ಗೆ ಎದ್ದಿರುವ ಸಮಸ್ಯೆಗೆ ಪರಿಹಾರ ಕೊಟ್ಟಿದೆ. ಪ್ರಯಾಣಿಕರ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಮತ್ತು ಆರಾಮದಾಯಕ ಅನುಭವ ನೀಡಲು ಪ್ರತಿ ಪ್ರಯಾಣದ ನಂತರ ಬೆಡ್​ ಶೀಟನ್ನು ತೆಗದು ವಾಶ್ ಮಾಡಿ ಸ್ಯಾನಿಟೈಸ್ ಮಾಡಲಾಗುವುದು ಎಂದು ಹೇಳಿದೆ. ನಂತರ ಕವರ್ ನಲ್ಲಿ ಹಾಕಿ ಅದನ್ನು ಪ್ರಯಾಣಿಕರಿಗೆ ನೀಡಲಾಗುವುದು ಎಂದು ಪೂರ್ವ ರೈಲ್ವೆ ಹೇಳಿದೆ.

ಭಾರತದ ಮೊದಲ ರಾಜಧಾನಿ ಎಕ್ಸ್‌ಪ್ರೆಸ್‌ :

ಕೋಲ್ಕತ್ತಾ ರಾಜಧಾನಿ ಎಕ್ಸ್ ಪ್ರೆಸ್ ಎಂದೂ ಕರೆಯಲ್ಪಡುವ ಹೌರಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ಕೋಲ್ಕತ್ತಾ ಮತ್ತು ರಾಷ್ಟ್ರ ರಾಜಧಾನಿ ನವದೆಹಲಿ ನಡುವ ಓಡಾಡುತ್ತದೆ. ಇದು ಭಾರತದ ಮೊದಲ ರಾಜಧಾನಿ ಎಕ್ಸ್‌ಪ್ರೆಸ್‌. ಮಾರ್ಚ್ 3, 1969 ರಲ್ಲಿ ಇದು ತನ್ನ ಮೊದಲ ಸಂಚಾರ ಶುರು ಮಾಡಿತ್ತು.

ಇದನ್ನು ಮೊದಲು ಪರಿಚಯಿಸಿದಾಗ, ಪೆರಂಬೂರಿನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ತಯಾರಿಸಿದ ಒಂಭತ್ತು ವ್ಯಾಕ್ಯೂಮ್-ಬ್ರೇಕ್ಡ್ ಬೋಗಿಗಳನ್ನು ಈ ರೈಲಿನಲ್ಲಿ ಇರಿಸಲಾಗಿತ್ತು. ಎರಡು ಪವರ್ ಕಾರ್, ಐದು ಎಸಿ ಚೇರ್ ಕಾರ್, ಒಂದು ಎಸಿ ಡೈನಿಂಗ್ ಕಾರ್ ಮತ್ತು ಒಂದು ಫಸ್ಟ್ ಎಸಿ ಬೋಗಿಯನ್ನು ಈ ರೈಲು ಒಳಗೊಂಡಿತ್ತು.

Indian Railways ನಲ್ಲಿ ಬಹಳಷ್ಟು ಅಪ್ ಡೇಟ್ ಕಂಡ ರೈಲು

ಇಲ್ಲಿವರೆಗೆ ಕೋಲ್ಕತಾ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಬಹಳಷ್ಟು ಬದಲಾವಣೆ ಮಾಡಲಾಗಿದೆ. ಇದು ಈಗ ಲಿಂಕೆ-ಹಾಫ್ಮನ್-ಬುಷ್ (ಎಲ್ ಎಚ್ ಬಿ) ಬೋಗಿಗಳನ್ನು ಹೊಂದಿದೆ. ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಪ್ರಯಾಣ ಮತ್ತು ಸುಧಾರಿತ ಆನ್ ಬೋರ್ಡ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ಬೋಗಿಗಳನ್ನು ಡಿಸೈನ್ ಮಾಡಲಾಗಿದೆ.

ರೈಲ್ವೆ (railways) ಒದಗಿಸಿದ ಕೋಚ್ ಸಂಯೋಜನೆಯ ಪ್ರಕಾರ, ರೈಲಿನಲ್ಲಿ 22 ಎಲ್ ಎಚ್ ಬಿ ಬೋಗಿಗಳಿವೆ. ಇದರಲ್ಲಿ ಎರಡು ಫಸ್ಟ್ ಎಸಿ ಬೋಗಿ, ಆರು ಎಸಿ 2-ಟೈರ್ ಬೋಗಿ, 11 ಎಸಿ 3-ಟೈರ್ ಬೋಗಿ, ಒಂದು ಪ್ಯಾಂಟ್ರಿ ಕಾರ್ ಮತ್ತು ಎರಡು ಪವರ್ ಕಾರ್-ಕಮ್-ಲಗೇಜ್ ವ್ಯಾನ್ ಸೇರಿವೆ.

ಹೌರಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಸಂಖ್ಯೆ 12301 ಹೌರಾದಿಂದ ನವದೆಹಲಿ ಮತ್ತು 12302 ನವದೆಹಲಿಯಿಂದ ( new delhi) ಹೌರಗೆ ಪ್ರಯಾಣ ಬೆಳೆಸುತ್ತದೆ. ಪಾಟ್ನಾ ಮೂಲಕ ಹೋಗುವ ಟ್ರೈನ್ 12305 ಹೌರಾದಿಂದ ನವದೆಹಲಿ ಮತ್ತು 12306 ನವದೆಹಲಿಯಿಂದ ಹೌರಾಗೆ ಚಲಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+