ಬೇಸಿಗೆ ರಜೆಗೆ 217 ವಿಶೇಷ ರೈಲುಗಳು: ಕರ್ನಾಟಕದ ಪ್ರವಾಸಿ ತಾಣಗಳಿಗೆ ಸಂಪರ್ಕ- ಮಾಹಿತಿ, ವಿವರ ತಿಳಿಯಿರಿ

ನವದೆಹಲಿ, ಏಪ್ರಿಲ್‌ 13: ರೈಲ್ವೇ ಸಚಿವಾಲಯವು ( Indian Railways ) ಬೇಸಿಗೆ ರಜೆಗೆ 217 ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಇವುಗಳ ದೇಶದ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಸಲಿವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕ್ರಮವನ್ನು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕೈಗೊಳ್ಳಲಾಗಿದೆ. ಬೇಸಿಗೆ ಅವಧಿಯಲ್ಲಿ ನಿರೀಕ್ಷಿತ ಹೆಚ್ಚುವರಿ ಜನದಟ್ಟಣೆಯನ್ನು ಅನ್ನು ಕಡಿಮೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ತಿಳಿದುಬಂದಿದೆ.

ವಿಶೇಷ ರೈಲುಗಳು ಭಾರತದಾದ್ಯಂತ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುತ್ತವೆ. ಪಾಟ್ನಾ, ಮುಂಬೈ, ಬೆಂಗಳೂರು ಮತ್ತು ಚೆನ್ನೈನಂತಹ ಜನಪ್ರಿಯ ಪ್ರವಾಸಿ ತಾಣಗಳಿಗೆ ಹೋಗುವವರ ಪ್ರಯಾಣ ಅಗತ್ಯಗಳನ್ನು ಪೂರೈಸುತ್ತವೆ. ಈ ಸೌಲಭ್ಯವು ಬೇಸಿಗೆಯ ತಿಂಗಳುಗಳಲ್ಲಿ ಮಾತ್ರ ಲಭ್ಯವಿರುತ್ತದೆ.

Indian Railways plans to run 217 special trains to tackle summer vacation rush - Details

ರೈಲ್ವೆ ಇಲಾಖೆಯ ಹೇಳಿಕೆಯ ಪ್ರಕಾರ, ನೈಋತ್ಯ ರೈಲ್ವೆಯಿಂದ 69 ವಿಶೇಷ ರೈಲುಗಳು ಕಾರ್ಯನಿರ್ವಹಿಸಲಿವೆ. ದಕ್ಷಿಣ ಕೇಂದ್ರ ವಿಭಾಗವು ಅಂತಹ 48 ರೈಲುಗಳನ್ನು ಯೋಜಿಸಿದೆ. ನೈಋತ್ಯ ರೈಲ್ವೆ ವಲಯವು ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದ ರೈಲು ನಿಲ್ದಾಣಗಳನ್ನು ಒಳಗೊಳ್ಳುತ್ತದೆ. ಈ ಉಪಕ್ರಮದ ಭಾಗವಾಗಿ, ಪಶ್ಚಿಮ ರೈಲ್ವೆ ವಲಯವು 40 ವಿಶೇಷ ರೈಲುಗಳನ್ನು ಓಡಿಸಲಿದೆ ಮತ್ತು ದಕ್ಷಿಣ ರೈಲ್ವೆ ವಲಯವು 20 ವಿಶೇಷ ರೈಲುಗಳನ್ನು ಓಡಿಸಲಿದೆ.

ಕೇಂದ್ರ ಮತ್ತು ಪೂರ್ವ ಕೇಂದ್ರ ರೈಲ್ವೆ ವಲಯಗಳು ತಲಾ 10 ವಿಶೇಷ ರೈಲುಗಳನ್ನು ನಿರ್ವಹಿಸಲಿವೆ. ಬಿಹಾರವನ್ನು ಒಳಗೊಂಡಿರುವ ಪೂರ್ವ ಕೇಂದ್ರ ರೈಲ್ವೆ ವಲಯವು ಒಟ್ಟು 296 ಟ್ರಿಪ್‌ಗಳನ್ನು ಪೂರ್ಣಗೊಳಿಸುವ 10 ವಿಶೇಷ ರೈಲುಗಳನ್ನು ಓಡಿಸಲಿದೆ. ಹೆಚ್ಚುವರಿಯಾಗಿ, ಪಶ್ಚಿಮ ಬಂಗಾಳವನ್ನು ಒಳಗೊಂಡಿರುವ ಪೂರ್ವ ರೈಲ್ವೆ ವಲಯವು ಅದರ ಮಾರ್ಗದಲ್ಲಿ ನಾಲ್ಕು ವಿಶೇಷ ರೈಲುಗಳನ್ನು ಓಡಿಸಲಿದೆ.

Indian Railways plans to run 217 special trains to tackle summer vacation rush - Details

ವಾಯುವ್ಯ ರೈಲ್ವೆ ವಲಯವು 16 ಬೇಸಿಗೆ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಘೋಷಿಸಿದ. ಆದರೆ ಉತ್ತರ ರೈಲ್ವೆ ವಲಯಕ್ಕೆ ಅಂತಹ ಯಾವುದೇ ರೈಲುಗಳನ್ನು ನಿಯೋಜಿಸಲಾಗಿಲ್ಲ. ಪ್ರತಿ ವಲಯದ ಅಡಿಯಲ್ಲಿ ಬರುವ ಪ್ರಮುಖ ನಿಲ್ದಾಣಗಳನ್ನು ಮಾತ್ರ ಈ ಉಪಕ್ರಮದಲ್ಲಿ ಸೇರಿಸಲಾಗುವುದು ಎಂದು ರೈಲ್ವೆಯ ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಸ್ತುತ, ಈ ವಿಶೇಷ ಬೇಸಿಗೆ ರೈಲುಗಳ ಸಂಖ್ಯೆ, ಹೆಸರುಗಳು, ದಿನಾಂಕಗಳು ಮತ್ತು ಮಾರ್ಗಗಳ ಬಗ್ಗೆ ಹೊರತುಪಡಿಸಿ ರೈಲ್ವೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಈ ವಿಶೇಷ ರೈಲುಗಳಲ್ಲಿ ಟಿಕೆಟ್ ಕಾಯ್ದಿರಿಸಲು ಯೋಜಿಸುತ್ತಿರುವ ಪ್ರಯಾಣಿಕರು ಶೀಘ್ರದಲ್ಲೇ ರೈಲ್ವೆ ಅಧಿಕಾರಿಗಳಿಂದ ಪ್ರಕಟಣೆಯನ್ನು ಗಮನಿಸಬೇಕು.

Indian Railways plans to run 217 special trains to tackle summer vacation rush - Details

ಕೇಂದ್ರ ಮತ್ತು ಪೂರ್ವ ಕೇಂದ್ರ ರೈಲ್ವೆ ವಲಯಗಳು ತಲಾ 10 ವಿಶೇಷ ರೈಲುಗಳನ್ನು ನಿರ್ವಹಿಸಲಿವೆ. ಬಿಹಾರವನ್ನು ಒಳಗೊಂಡಿರುವ ಪೂರ್ವ ಕೇಂದ್ರ ರೈಲ್ವೆ ವಲಯವು ಒಟ್ಟು 296 ಟ್ರಿಪ್‌ಗಳನ್ನು ಪೂರ್ಣಗೊಳಿಸುವ 10 ವಿಶೇಷ ರೈಲುಗಳನ್ನು ಓಡಿಸಲಿದೆ. ಹೆಚ್ಚುವರಿಯಾಗಿ, ಪಶ್ಚಿಮ ಬಂಗಾಳವನ್ನು ಒಳಗೊಂಡಿರುವ ಪೂರ್ವ ರೈಲ್ವೆ ವಲಯವು ಅದರ ಮಾರ್ಗದಲ್ಲಿ ನಾಲ್ಕು ವಿಶೇಷ ರೈಲುಗಳನ್ನು ಓಡಿಸಲಿದೆ.

ವಾಯುವ್ಯ ರೈಲ್ವೆ ವಲಯವು 16 ಬೇಸಿಗೆ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಘೋಷಿಸಿದೆ. ಆದರೆ ಉತ್ತರ ರೈಲ್ವೆ ವಲಯಕ್ಕೆ ಅಂತಹ ಯಾವುದೇ ರೈಲುಗಳನ್ನು ನಿಯೋಜಿಸಲಾಗಿಲ್ಲ. ಪ್ರತಿ ವಲಯದ ಅಡಿಯಲ್ಲಿ ಬರುವ ಪ್ರಮುಖ ನಿಲ್ದಾಣಗಳನ್ನು ಮಾತ್ರ ಈ ಉಪಕ್ರಮದಲ್ಲಿ ಸೇರಿಸಲಾಗುವುದು ಎಂದು ರೈಲ್ವೆಯ ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+