Indian Railways: ಚೆನ್ನೈ ರೈಲ್ವೆ ಉತ್ಪಾದನಾ ಕಂಪನಿಗೆ ರೈಲ್ವೆಯಿಂದ ಪತ್ರ: ಬೇಡಿಕೆ ಏನು?
ಬೆಂಗಳೂರು, ಜೂನ್ 09: ದೇಶದಲ್ಲಿ ನಿತ್ಯ ಓಡಾಡುವ ಸಾಮಾನ್ಯ ರೈಲುಗಳು ಪೈಕಿ ಗರಿಷ್ಠ ವೇಗ 160 ಕಿಲೋ ಮೀಟರ್ ವರೆಗೆ ಇದೆ. ಇವು ವಂದೇ ಭಾರತ್ ರೈಲುಗಳಾಗಿವೆ. ಇದೀಗ ಭಾರತೀಯ ರೈಲ್ವೆ ಭವಿಷ್ಯದಲ್ಲಿ ಗಂಟೆಗೆ 250 ಕಿಲೋ ಮೀಟರ್ ವೇಗದ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಈ ಸಂಬಂಧ ಭಾರತೀಯ ರೈಲ್ವೇ ಸಚಿವಾಲಯವು ತನ್ನ ರೈಲು ಉತ್ಪಾದಿಸುವ ಘಟಕ ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ (ICF) ಈ ಕುರಿತು ಮನವಿ ಮಾಡಿದೆ. ಇದೇ ತಿಂಗಳ ಜೂನ್ 4ರಂದು ಪತ್ರದ ಬರೆದಿದೆ. ಅದರ ಮುಖೇನ ಅತೀ ವೇಗದಲ್ಲಿ ಚಲಿಸುವ ಎರಡು ರೈಲುಗಳು ಬೇಕು, ಅಂತಹ ರೈಲುಗಳನ್ನು ತಯಾರಿಸುವಂತೆ ಕೇಳಿಕೊಂಡಿದೆ.

ಗಂಟೆಗೆ 250 ಕಿಮೀ (ಕಿಮೀ) ವೇಗದಲ್ಲಿ ಚಲಿಸುವ ಎರಡು ರೈಲುಗಳನ್ನು ತಯಾರಿಸಲು ಕೇಳಿಕೊಂಡಿದೆ. ರೈಲ್ವೆಯು ಪ್ರಸಕ್ತ ಆರ್ಥಿಕ ವರ್ಷ 2024-25ರ ರೈಲುಗಳ ಉತ್ಪಾದನಾ ಉಪಕ್ರಮದ ಭಾಗವಾಗಿ ಗಂಟೆಗೆ 250 ಕಿಮೀ ವೇಗದಲ್ಲಿ ಚಲಿಸುವ ಎರಡು ರೈಲುಗಳ ತಯಾರಿಸಿಕೊಡಲು ಎಂದು ಪತ್ರದಲ್ಲಿ ತಿಳಿಸಿದೆ.
ಸ್ಟ್ಯಾಂಡರ್ಡ್ ಗೇಜ್‌ನಲ್ಲಿ ತಯಾರು
ಈ ಅತ್ಯಧಿಕ ವೇಗದ ರೈಲುಗಳು ಸಂಪೂರ್ಣ ಉಕ್ಕಿನಿಂದ ನಿರ್ಮಿಸಲ್ಪಡಲಿದೆ. ಕನಿಷ್ಠ 220 ಕಿಮೀ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯ ಹೊಂದಿರಲಿದ್ದು, ಇವುಗಳನ್ನು ಸ್ಟ್ಯಾಂಡರ್ಡ್ ಗೇಜ್‌ನಲ್ಲಿ ತಯಾರಾಗಲಿವೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಭವಿಷ್ಯದ ದೃಷ್ಟಿಯಿಂದ ವಂದೇ ಭಾರತ್ ರೈಲುಗಳ ವೇಗದ ಸಲುವಾಗಿ ಈ ಸಾರಿಗೆಯ ಮೂಲ ಸೌಕರ್ಯ ಹೆಚ್ಚಿಸಲಾಗಿದೆ. ಬರಲಿರುವ ಉಕ್ಕಿನ ದೇಹದ ಎರಡು ಹೊರ ರೈಲುಗಳಿಗೆ ತಲಾ ಎಂಟು ಬೋಗಿಗಳನ್ನು ಹೊಂದಿರಲಿವೆ. ಕಳೆದ ವರ್ಷ ರಾಜಸ್ಥಾನದಲ್ಲಿ ಸ್ಟ್ಯಾಂಡರ್ಡ್ ಗೇಜ್ ರೈಲುಗಳಿಗೆ ಪರೀಕ್ಷಾ ಮಾರ್ಗವನ್ನು ಅಭಿವೃದ್ಧಿಪಡಿಸುವ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿಂದ ರೈಲುಗಳನ್ನು ಬ್ರಾಡ್ ಗೇಜ್‌ನಿಂದ ಸ್ಟ್ಯಾಂಡರ್ಡ್ ಗೇಜ್‌ಗೆ ಪರಿವರ್ತಿಸಲಾಗುತ್ತಿದೆ.
ಭಾರತದಲ್ಲಿ 250 ಕಿಮೀ ವೇಗದ ರೈಲುಗಳು ಇಲ್ಲ
250 ಕಿಮೀ ವೇಗದ ರೈಲು ತಯಾರಿಕೆ ಒಂದು ರೀರಿಯ ಸವಾಲು ಎಂದು ತಜ್ಞರು ಹೇಳಿದ್ದಾರೆ. ವಂದೇ ಭಾರತ್ ರೈಲುಗಳ ಗರಿಷ್ಠ ವೇಗ ಗಂಟೆಗೆ 180 kmph ಆಗಿದೆ. 2025ರ ಮಾರ್ಚ್ ತಿಂಗಳ ಹೊತ್ತಿಗೆ ಈ ಉದ್ದೇಶಿತ 250 ಕಿಮೀ ಸ್ಟ್ಯಾಂಡರ್ಡ್ ಗೇಜ್ ರೈಲಿನ ತಯಾರಿಕೆ ಅಸಾಧ್ಯ ಎಂದು ಮೊದಲ ವಂದೇ ಭಾರತ್ ರೈಲುಗಳನ್ನು ತಯಾರಿಸಲು ಮುಂದಾದ ICFನ ಮಾಜಿ ಪ್ರಧಾನಿ ವ್ಯವಸ್ಥಾಪಕರು ತಿಳಿಸಿದರು.
ತಯಾರಿಕೆಗೆ ಬೇಕು 3-4 ವರ್ಷ
ಗರಿಷ್ಠ ವೇಗದ ರೈಲು ತಯಾರಿಕೆಗೆ ಐಸಿಎಫ್ ಕಂಪನಿಯನ್ನು ಮುಕ್ತವಾಗಿ ಉತ್ತೇಜಿಸಬಹುದು. ಆದರೆ ಅದರ ತಯಾರಿಕೆಗೆ 3-4 ವರ್ಷ ಹಿಡಿಯಬಹುದು. ಅವರು ಯಶಸ್ವಿಯಾದರೆ ಅದು ಬಹಳ ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗುತ್ತದೆ.
ಸದ್ಯದ ರೈಲ್ವೆಯ ಉಸ್ತುವಾರಿ ಸಚಿವ ಅಶ್ವಿನಿ ವೈಷ್ಣವ್ (ಲೋಕಸಭಾ ಚುನಾವಣಾ ಪ್ರೋಟೋಕಾಲ್ ಸಂಬಂಧ ತಮ್ಮ ಸ್ಥಾನಕ್ಕೆ ರಾಜಕೀನಾಮೆ) ಬಿಸಿನೆಸ್ ಸ್ಟ್ಯಾಂಡರ್ಡ್‌ಗೆ ಸರ್ಕಾರವು ಹೈಸ್ಪೀಡ್ ರೈಲು ತಂತ್ರಜ್ಞಾನವನ್ನು ಸ್ವದೇಶಿಗೊಳಿಸುವ ಗುರಿಯನ್ನು ಹೊಂದಿದೆ. ಬಜೆಟ್‌ನಲ್ಲಿ ರೈಲ್ವೆ ಮೂಲ ಸೌಕರ್ಯಕ್ಕೆ ನೀಡಿದ ಆದ್ಯತೆ ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದಾರೆ.












Click it and Unblock the Notifications