Indian Railways: ಭಾರತೀಯ ರೈಲ್ವೆ ಟಿಕೆಟ್ ದರ ತೀರಾ ಅಗ್ಗ: ದೈನಂದಿನ ರೈಲು ಸೇವೆ 11,740 ಕ್ಕೆ ಹೆಚ್ಚಳ..

ನವದೆಹಲಿ, ಡಿಸೆಂಬರ್ 11: ಭಾರತೀಯ ರೈಲ್ವೆಯ ದೈನಂದಿನ ಸೇವೆಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಜೊತೆಗೆ 2020ರ ಮೊದಲಿನ ವರ್ಷಗಳಿಗೆ ಹೋಲಿಸಿದರೆ ಸೇವೆಯನ್ನು ಇಲಾಖೆ ಹೆಚ್ಚಿಸಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರದಲ್ಲಿ ರೈಲ್ವೆ ಟಿಕೆಟ್ ದರ ಅಗ್ಗವಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದರು.

ಸಂಸತ್ ಚಳಿಗಾಲ ಅಧಿವೇಶನದಲ್ಲಿ ವಿಪಕ್ಷ ನಾಯಕರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಭಾರತೀಯ ರೈಲ್ವೆಯ ದೈನಂದಿನ ರೈಲು ಸೇವೆಗಳು ಇದೇ 2025ರ ನವೆಂಬರ್ ಹೊತ್ತಿಗೆ 11,740 ಕ್ಕೆ ಏರಿಕೆ ಆಗಿದೆ. ಈ ಸಂಖ್ಯೆ ಕೋವಿಡ್ -19 ಗಿಂತ ಮೊದಲಿನ ವರ್ಷದಲ್ಲಿ 11,283 ರಷ್ಟು ಇತ್ತು ಎಂದು ಅವರು ಅಂಕಿ ಸಂಖ್ಯೆ ಸಮೇತ ವಿವರಿಸಿದರು.

Indian Railways Expands Daily Service to 11 740 and Maintains Affordable Tickets Ashwini Vaishnaw

ರೈಲ್ವೆ ಮೇಲ್ ಮತ್ತು ಎಕ್ಸ್‌ಪ್ರೆಸ್ ಸೇವೆಗಳ ಸಂಖ್ಯೆ 1,768 ರಿಂದ 2,238 ಕ್ಕೆ ವಿಸ್ತರಿಸಿ ಪ್ರಗತಿ ಕಂಡಿದೆ. ರೈಲು ಪ್ರಯಾಣಿಕರ ಸುರಕ್ಷತೆ ಮತ್ತು ರೈಲು ಸಮಯಪಾಲನೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಐಐಟಿ ಬಾಂಬೆ ಸಹಕಾರದಲ್ಲಿ ಸೂಕ್ತ ವೇಳಾಪಟ್ಟಿ ಪ್ರಕಟಿಸುವುದು, ತರ್ಕಬದ್ಧಗೊಳಿಸುವಲ್ಲಿ ಇಲಾಖೆ ಹೆಚ್ಚಿನ ಗಮನ ಹರಿಸಿದೆ. ಈ ಮೂಲಕ ರೈಲು ಪ್ರಯಾಣಿಕರಿಗೆ ಸಕಾಲಕ್ಕೆ ಸೇವೆ ಮತ್ತು ಸಮಯ ಮೌಲ್ಯ ಕುರಿತು ತಿಳಿಸಿದರು.

ವಂದೇ ಭಾರತ್ ರೈಲು, ಸ್ಲೀಪರ್ ರೈಲು ಸೇವೆ

ದೇಶದಲ್ಲಿ ಸದ್ಯ 164 ವಂದೇ ಭಾರತ್ ರೈಲುಗಳು (Vande Bharat Express) ನಿತ್ಯ ಸೇವೆ ನೀಡುತ್ತಿವೆ. ಇದರಲ್ಲಿ ಪ್ರಾಯೋಗಿಕ ಹಂತದಲ್ಲಿ ಹೊಸ ಸ್ಲೀಪರ್ ರೈಲು ಸೇರಿದೆ. ಅದರ ಕಾರ್ಯಾಚರಣೆ ಇನ್ನೇನು ಆರಂಭವಾಗಲಿದೆ. ಈ ವಿಬಿ ಸ್ಲೀಪರ್ ರೈಲುಗಳಲ್ಲಿ ಕವಚ ಸುರಕ್ಷತಾ ತಂತ್ರಜ್ಞಾನ ವ್ಯವಸ್ಥೆ ಅಳವಡಿಸಲಾಗಿದೆ. ಇದರಿಂದ ಬ್ರೇಕಿಂಗ್, ತುರ್ತು ಪರಿಸ್ಥಿತಿಗಳಿಗಾಗಿ ವರ್ಧಿತ ಸಂವಹನ ಸೌಲಭ್ಯಗಳು ಸೇರಿದಂತೆ ಸುಧಾರಿತ ಸುರಕ್ಷತಾ ಕ್ರಮ ವ್ಯವಸ್ಥೆ ಲಭ್ಯವಾಗುತ್ತದೆ.

ಭಾರತೀಯ ರೈಲು ಸೇವೆ ಅಗ್ಗ..!

ಸದನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅಶ್ವಿನಿ ವೈಷ್ಣವ್ ಅವರು, ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ರೈಲು ಸೇವೆ ಅಗ್ಗವಾಗಿದೆ. ಇಲ್ಲಿ ರೈಲು ಟಿಕೆಟ್ ದರ ಎಲ್ಲ ವರ್ಗದವರಿಗೆ ಕೈಗೆಟುಕುವಂತಿವೆ. ಟಿಕೆಟ್ ಬೆಲೆಗಳ ದುಬಾರಿ ಆಗದಂತೆ ನೋಡಿಕೊಳ್ಳಲು ಭಾರತೀಯ ರೈಲ್ವೆ ಕಳೆದ ವರ್ಷ 60,000 ಕೋಟಿ ರೂಪಾಯಿ ಸಬ್ಸಿಡಿ ಒದಗಿಸಿದೆ ಎಂದು ತಿಳಿಸಿದರು.

ಭಾರತಕ್ಕೆ ಹೋಲಿಸಿದರೆ ವಿದೇಶಗಳಲ್ಲಿ ರೈಲು ಸೇವೆ ಸುಮಾರು 05 ಅಥವಾ 10 ಪ್ರತಿಶತದಷ್ಟು ಹೆಚ್ಚಿದೆ. ಭಾರತದಲ್ಲಿ ರೈಲು ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಯಾಣಿಕರಿಗೆ ಟಿಕೆಟ್ ದರ ದುಬಾರಿ ಅನ್ನಿಸದಂತೆ ನೋಡಿಕೊಳ್ಳಲಾಗಿದೆ ಎಂದು ಲೋಕಸಭೆಯಲ್ಲಿ, 'ಕೋವಿಡ್ ಪೂರ್ವದಂತೆ ಹಿರಿಯ ನಾಗರಿಕರಿಗೆ ರೈಲು ಟಿಕೆಟ್ ರಿಯಾಯಿತಿ ಮುಂದುವರಿಸುವ' ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+