ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೇ ಇಲಾಖೆಯಿಂದ ವಿಶ್ವದ ಅತಿದೊಡ್ಡ ಆನ್ ಲೈನ್ ಪರೀಕ್ಷೆ

ಭಾರತೀಯ ರೈಲ್ವೆ ವಿಶ್ವದ ಅತಿ ದೊಡ್ಡ ಆನ್ ಲೈನ್ ಪರೀಕ್ಷೆಯನ್ನು ನಡೆಸುತ್ತಿದೆ. ವಿವಿಧ ವಿಭಾಗಗಳ 18,000 ಹುದ್ದೆಗಳನ್ನು ಭರ್ತಿಗೊಳಿಸಲು ಈ ಪರೀಕ್ಷೆ ನಡೆಸಲಾಗಿದೆ.

By Mahesh
|
Google Oneindia Kannada News

ನವದೆಹಲಿ, ಫೆಬ್ರವರಿ 11: ಭಾರತೀಯ ರೈಲ್ವೆ ವಿಶ್ವದ ಅತಿ ದೊಡ್ಡ ಆನ್ ಲೈನ್ ಪರೀಕ್ಷೆಯನ್ನು ನಡೆಸುತ್ತಿದೆ. ವಿವಿಧ ವಿಭಾಗಗಳ 18,000 ಹುದ್ದೆಗಳನ್ನು ಭರ್ತಿಗೊಳಿಸಲು ಈ ಪರೀಕ್ಷೆ ನಡೆಸಲಾಗುತ್ತಿದ್ದು, ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರಗಳನ್ನು ತಡೆಯುವ ನಿಟ್ಟಿನಲ್ಲಿ ಇದು ಸೂಕ್ತ ಕ್ರಮ ಎನ್ನಲಾಗಿದೆ. ಸುಮಾರು 13 ಲಕ್ಷ ಉದ್ಯೋಗಿಗಳಿರುವ ಭಾರತೀಯ ರೈಲ್ವೆಯಲ್ಲಿ ಪ್ರಸಕ್ತ 2 ಲಕ್ಷ ಹುದ್ದೆಗಳು ಖಾಲಿಯಾಗಿವೆ.

ವಿವಿಧ ಹುದ್ದೆಗಳಿಗೆ ಸುಮಾರು 92 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು ಇವರ ಪೈಕಿ 2.73 ಲಕ್ಷ ಮಂದಿ ಪ್ರಿಲಿಮಿನರಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ. ಜನವರಿ 17ರಿಂದ 19ರ ತನಕ ನಡೆದ ಲಿಖಿತ ಪರೀಕ್ಷೆಗಳನ್ನು ನಡೆಸಲಾಯಿತು.

Indian Railways conducts world's largest online test to fill up 18,000 vacancies

ಈ ಹಿಂದೆ ಪ್ರಶ್ನೆ ಪತ್ರಿಕೆ ಸೋರಿಕೆ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಈ ಬಾರಿ ಮಂಡಳಿ ಆನ್ ಲೈನ್ ಪರೀಕ್ಷೆ ನಡೆಸಲು ತೀರ್ಮಾನಿಸಿತ್ತು. ಈ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಅಭ್ಯರ್ಥಿಗಳಿಗೆ ಒಂದು ವಾರದ ನಂತರ ಅವರ ಉತ್ತರ ಪತ್ರಿಕೆಗಳನ್ನು ಆನ್ ಲೈನ್ ಮೂಲಕವೇ ತೋರಿಸಲಾಗಿದೆ. ಆಕ್ಷೇಪಗಳೇನಾದರೂ ಇದ್ದರೆ ಜನವರಿ 30ರೊಳಗೆ ಅಭ್ಯರ್ಥಿಗಳು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ರೈಲ್ವೆ ನೇಮಕಾತಿ ಮಂಡಳಿಯು ಒಟ್ಟು18,252 ಪದವೀಧರ ಮಟ್ಟದ ಗ್ರೂಪ್-3 ಹುದ್ದೆಗಳಿಗೆ ಈ ಆನ್ ಲೈನ್ ಪರೀಕ್ಷೆ ನಡೆಸಿದ್ದು, ಇದರಲ್ಲಿ ಯಶಸ್ವಿಯಾದವರಿಗೆ ಅಸಿಸ್ಟೆಂಟ್ ಸ್ಟೇಶನ್ ಮಾಸ್ಟರ್, ಗೂಡ್ಸ್ ಗಾರ್ಡ್ ಇಂಕ್ವೈರಿ-ರಿಸರ್ವೇಶನ್ ಕ್ಲರ್ಕ್, ಟ್ರಾಫಿಕ್ ಹಾಗೂ ಕಮರ್ಷಿಯಲ್ ಅಪ್ರೆಂಟಿಸ್ ಹಾಗೂ ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಹುದ್ದೆಗಳು ದೊರಯಲಿವೆ.

ಮುಂದಿನ ಹಂತದಲ್ಲಿ ಲೋಕೊ ಪೈಲಟ್, ಟೆಕ್ನಿಕಲ್ ಸಪ್ರ್ ವೈಸರ್ ಸೇರಿದಂತೆ 20 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ.(ಪಿಟಿಐ)

English summary
Aiming at eliminating the scope for malpractices in its recruitment process, Indian Railways is conducting the world's "largest" online examination to fill up over 18,000 vacancies in various categories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X