2 ಗಂಟೆಯ ರೈಲ್ವೆ ಪರೀಕ್ಷೆ ಮುಗಿದ್ರು 48 ಗಂಟೆ ಸರ್ವರ್ ಓಪನ್! ರೈಲ್ವೆ ನೇಮಕಾತಿಯಲ್ಲಿ ಭಾರೀ ಅಕ್ರಮ ಬಯಲು

ನವದೆಹಲಿ: ಎರಡು ಗಂಟೆಗಳ ಕಾಲ ನಡೆದ ರೈಲ್ವೆ ನೇಮಕಾತಿ ಪರೀಕ್ಷೆಯು ಕಂಪ್ಯೂಟರ್ ಸರ್ವರ್‌ನಲ್ಲಿ 48 ಗಂಟೆಗಳಿಗೂ ಹೆಚ್ಚು ಕಾಲ ಲೈವ್‌ ಆಗಿತ್ತು ಎಂದು ಆರೋಪಿಸಲಾಗಿದೆ. ಉತ್ತರಗಳನ್ನು ಬದಲಾಯಿಸಲು ಸಹಾಯ ಮಾಡುವ ಉದ್ದೇಶದಿಂದಲೇ ಈ ವಿಂಡೋವನ್ನು ಪರೀಕ್ಷೆ ಮುಗಿದ ಎರಡು ದಿನಗಳವರೆಗೂ ಒಪನ್‌ ಇಡಲಾಗಿತ್ತು ಎನ್ನುವುದು ಸಿಬಿಐ ತನಿಖೆಯಿಂದ ಬಹಿರಂಗೊಂಡಿದೆ.

ನವೆಂಬರ್ 22, 2024 ರಂದು ಪಶ್ಚಿಮ ರೈಲ್ವೆ ನಡೆಸಿದ ಡೀಸೆಲ್ ಮೆಕ್ಯಾನಿಕ್ ಗ್ರೇಡ್ III ಹುದ್ದೆಗೆ ನಡೆದ ಇಲಾಖಾ ಪರೀಕ್ಷೆಯ ತನಿಖೆಯ ಸಂದರ್ಭದಲ್ಲಿ ಈ ಅಕ್ರಮ ಬೆಳಕಿಗೆ ಬಂದಿತ್ತು. ರೈಲ್ವೆ ವಿಜಿಲೆನ್ಸ್ ಇಲಾಖೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ (CBT) ಅಕ್ರಮ ನಡೆದಿರುವುದನ್ನು ಪತ್ತೆ ಹಚ್ಚಿತ್ತು. ನಂತರ ಸಿಬಿಐ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.

Indian Railway

ಸರ್ವರ್‌ನ ವಿಧಿವಿಜ್ಞಾನ ಪರೀಕ್ಷೆಯ ವೇಳೆ ಭದ್ರತಾ ಉಲ್ಲಂಘನೆಗಳಾಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಪ್ರೋಟೋಕಾಲ್ ಅಡಿಯಲ್ಲಿ ಅಗತ್ಯವಿರುವಂತೆ ಎರಡು ಗಂಟೆಗಳ ಪರೀಕ್ಷೆಯ ನಂತರ 178 ಅಭ್ಯರ್ಥಿಗಳ ಪರೀಕ್ಷಾ ಅವಧಿಯನ್ನು ತಕ್ಷಣವೇ ಕ್ಲೋಸ್‌ ಮಾಡಿಲ್ಲ. ಬದಲಿಗೆ ಎರಡು ದಿನಗಳಿಗಿಂತ ಹೆಚ್ಚು ವಿಂಡೋ ಒಪನ್‌ ಇತ್ತು ಎನ್ನುವುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಎನಿಡೆಸ್ಕ್ ಇನ್‌ಸ್ಟಾಲ್‌

ಇನ್ನು ಹೊಸ ಸರ್ವರ್‌ನಲ್ಲಿ ಎನಿಡೆಸ್ಕ್ ಅನ್ನು ಇನ್‌ಸ್ಟಾಲ್‌ ಮಾಡಲಾಗಿತ್ತು. ಪರೀಕ್ಷಾ ಕಂಪ್ಯೂಟರ್‌ಗಳಲ್ಲಿ ಈ ಸಾಫ್ಟ್‌ವೇರ್ ಬಳಕೆಗೆ ಯಾವುದೇ ಅವಕಾಶ ಇಲ್ಲ. ಆದರೂ ‌ಎನಿಡೆಸ್ಕ್ ಅನ್ನು ಇನ್‌ಸ್ಟಾಲ್‌ ಮಾಡುವ ಮೂಲಕ ಪರೀಕ್ಷೆಯ ನಂತರ ಹೊರಗಿನಿಂದಲೇ ಸಿಸ್ಟಮ್‌ಗೆ ಅಕ್ಸೆಸ್‌ ಪಡೆಯುವ ಅವಕಾಶ ಮಾಡಿಕೊಡಲಾಗಿತ್ತು.

ತನಿಖೆಯ ಪ್ರಕಾರ, ಪರೀಕ್ಷಾ ದಿನಾಂಕ ಮತ್ತು ಪರೀಕ್ಷಾ ಅವಧಿಗಳ ಅಂತಿಮ ಮುಕ್ತಾಯದ ನಡುವೆ ಎನಿಡೆಸ್ಕ್ ಲಾಗಿನ್ ಅವಧಿಗಳನ್ನು ವಿಧಿವಿಜ್ಞಾನ ವರದಿಯಲ್ಲಿ ಹೇಳಲಾಗಿದೆ. ಇನ್ನು ಈ ಅವಧಿಯಲ್ಲಿ ಸರ್ವರ್ ಸಕ್ರಿಯ ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವುದು ಕೂಡಾ ಗಮನಕ್ಕೆ ಬಂದಿದೆ. ಪರೀಕ್ಷೆಯ ನಂತರದ ಅವಧಿಯಲ್ಲಿ ನಿರ್ಣಾಯಕ ಬಳಕೆದಾರರ ಲಾಗಿನ್ ಐಡಿಗಳು ಕಾಣೆಯಾಗಿವೆ ಎಂದು ತನಿಖಾಧಿಕಾರಿಗಳು ಕಂಡು ಕೊಂಡಿದ್ದಾರೆ.

ರೈಲ್ವೆ ಅಧಿಕಾರಿಗಳ ವಿಚಾರಣೆ

ಆಗಿನ ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಜಿತೇಶ್ ಅಗರ್ವಾಲ್, ಐಟಿ ಡೇಟಾಬೇಸ್ ಸಹಾಯಕ ನವ್ರೋಜ್ ಕುರಾನಿ, ನಿವೃತ್ತ ಮುಖ್ಯ ಓಎಸ್ (ಐಟಿ) ಕೆಪಿ ಮನೋಜ್ ನಾರಾಯಣನ್ ಮತ್ತು ಹಿರಿಯ ಗುಮಾಸ್ತ ಮಹೇಂದ್ರ ಕುಮಾರ್ ಶಿರ್ಷತ್ ಸೇರಿದಂತೆ ಹಲವಾರು ರೈಲ್ವೆ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿಲಾಯಿತು.

ಅಧಿಕಾರಿಗಳು ಪರೀಕ್ಷಾರ್ಥಿಗಳಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಫರ್ಹಾನ್ ಮನ್ಸೂರಿ ಎಂಬ ಅಭ್ಯರ್ಥಿ ಕೂಡಾ ಅಸಾಧಾರಣವಾಗಿ ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಅವರು ಪರೀಕ್ಷೆಗೆ ಸ್ವಲ್ಪ ಮೊದಲು ಲೋನ್‌ ಪಡೆದಿದ್ದರು ಎನ್ನುವುದು ಇನ್ನೂ ಕುತೂಹಲಕಾರಿ ಅಂಶ.

ಸಿಬಿಐ ಆರೋಪಿಗಳ ವಿರುದ್ಧ ಬಿಎನ್‌ಎಸ್ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಇಲಾಖಾ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಂಸ್ಥೆಯು ಡಿಸೆಂಬರ್ 2025 ರಲ್ಲಿ ಮೂರು ಎಫ್‌ಐಆರ್‌ಗಳನ್ನು ದಾಖಲಿಸಿದೆ. ಆರೋಪಿಗಳಲ್ಲಿ ಹಿರಿಯ ರೈಲ್ವೆ ಅಧಿಕಾರಿಗಳೂ ಸೇರಿದ್ದಾರೆ. ತನಿಖೆ ಮುಂದುವರೆದಿದ್ದು, ಪಶ್ಚಿಮ ರೈಲ್ವೆ ವಿಭಾಗದ ಇತರ ಹಲವಾರು ಅಧಿಕಾರಿಗಳು ಇನ್ನೂ ಸಿಬಿಐ ನಿಗಾದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+