ನೇಪಾಳ ಗಡಿಯಲ್ಲಿ 'ಯೇತಿ' ನಿಗೂಢ ಹೆಜ್ಜೆ ಗುರುತು ಪತ್ತೆ
ನವದೆಹಲಿ, ಏಪ್ರಿಲ್ 30: ಮೊತ್ತ ಮೊದಲ ಬಾರಿಗೆ ಭಾರತೀಯ ಸೇನೆಯ ಪರ್ವತಾರೋಹಿಗಳ ತಂಡವೊಂದು 'ಯೇತಿ' ಯ ಹೆಜ್ಜೆ ಗುರುತನ್ನು ಪತ್ತೆ ಮಾಡಿದೆ. 32x15 ಇಂಚು ಅಳತೆಯ ಈ ಹೆಜ್ಜೆಗುರುತು ಯೇತಿಯದೇ ಎಂದು ಅಂದಾಜಿಸಲಾಗಿದ್ದು, ಕುತೂಹಲ ಸೃಷ್ಟಿಯಾಗಿದೆ.
ಈ ಚಿತ್ರಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಯೇತಿ ಅಸ್ತಿತ್ವದ ಬಗ್ಗೆ ಮತ್ತೆ ಚರ್ಚೆ ಎದ್ದಿದೆ.
ನೇಪಾಳ ಮತ್ತು ಟಿಬೆಟ್ ನ ಹಿಮಾಲಯದ ಪ್ರದೇಶದಲ್ಲಿ ವಾಸಿಸುವ ಆದಿವಾಸಿ ಹಿಮ ಮಾನವನನ್ನು ಅಥವಾ ಹಿಮ ಕರಡಿಯಂಥ ಜೀವಿಯನ್ನು 'ಯೇತಿ' ಎಂದು ಕರೆಯಲಾಗುತ್ತದೆ. ಅದು ಇತಿಹಾಸದಲ್ಲಿ ಈ ಪ್ರದೇಶದಲ್ಲಿ ವಾಸಿಸುತ್ತಿತ್ತು ಎನ್ನಲಾಗುತ್ತಿತ್ತಾದರೂ ವೈಜ್ಞಾನಿಕವಾಗಿ ಯೇತಿ ಅಸ್ತಿತ್ವದ ಬಗ್ಗೆ ಈಗಲೂ ಪ್ರಶ್ನೆಗಳಿವೆ. ಅದೊಂದು ಕಾಲ್ಪನಿಕ ಪಾತ್ರ ಎಂದೇ ಇಂದಿಗೂ ಬಹುತೇಕ ಜನರು ನಂಬಿದ್ದಾರೆ.
| Array |
ಭಾರತೀಯ ಸೇನೆ ಟ್ವೀಟ್
ಇದೀಗ ಮತ್ತೆ ಯೇತಿಯ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ. ನೇಪಾಳದ ಮಕಲು ಬೇಸ್ ಕ್ಯಾಂಪ್ ನಲ್ಲಿ ಏಪ್ರಿಲ್ 9 ರಂದು ಈ ಹೆಜ್ಜೆ ಗುರುತು ಪತ್ತೆಯಾಗಿತ್ತು ಎಂದು ಎಡಿಜಿ ಪಿಐ-ಇಂಡಿಯನ್ ಆರ್ಮಿ ಟ್ವೀಟ್ ಮಾಡಿದೆ.

1921 ರಲ್ಲಿ ಪತ್ತೆಯಾಗಿದ್ದ ಯೇತಿ
20 ನೇ ಶತಮಾನದಲ್ಲಿ 1921 ರಲ್ಲಿ ಲೆಫ್ಟಿನೆಂಟ್ - ಕರ್ನಲ್ ಚಾರ್ಲ್ಸ್ ಹೊವರ್ಡ್ - ಬುರಿ ನೇತೃತ್ವದಲ್ಲಿ ಅಲ್ಫಿನ್ ಕ್ಲಬ್ ಮತ್ತು ರಾಯಲ್ ಜಿಯಾಗ್ರಾಫಿಕಲ್ ಸೊಸೈಟಿ ಜಂಟಿಯಾಗಿ ಕೈಗೊಂಡಿದ್ದ ಎವರೆಸ್ಟ್ ಪರ್ವತಾರೋಹಣ ಯಾತ್ರೆಯಲ್ಲಿ ಈ ದೈತ್ಯ ಜೀವಿಯ ಅಸ್ತಿತ್ವವನ್ನು ಪತ್ತೆ ಮಾಡಲಾಗಿತ್ತು.

ಏನಿದು ಯೇತಿ?
ಹಿಮ ಪ್ರದೇಶದಲ್ಲಿ ಕಂಡು ಬರುವ ಒಂದು ರೀತಿಯ ದೈತ್ಯ ಪ್ರಾಣಿ. ಇದು ಹಿಮ ಕರಡಿಯನ್ನೇ ಹೋಲುತ್ತದಾದರೂ, ದೈತ್ಯಾಕಾರವಾಗಿರುತ್ತದೆ. ಯೇತಿ ಎಂದರೆ ಕಲ್ಲು, ಶಿಲೆ, ಕರಡಿ ಎಂಬಿತ್ಯಾದಿ ಅರ್ಥವಿದೆ. ಮೇಹ್ ತೇಹ್ ಎಂಬ ಹೆಸರಿನಲ್ಲೂ ಇದನ್ನು ಕರೆಯಲಾಗುತ್ತದೆ. ಅಂದರೆ ಕರಡಿ ರೂಪದ ಮನುಷ್ಯ ಎಂದರ್ಥ. ಹಿಮಾಲಯದಲ್ಲಿ ಹಲವು ಕಾಲ ಸಾಧನೆಗೆಂದು ತೆರಳಿದ ಹಲವರು ಯೇತಿಯನ್ನು ಕಂಡಿದ್ದಾರೆನ್ನಲಾಗುತ್ತದೆಯಾದರೂ ಇದುವರೆಗೂ ಅದರ ಪೂರ್ಣ ಚಿತ್ರ ಮಾತ್ರ ಸಿಕ್ಕಿಲ್ಲ. ಅದರ ಹೆಜ್ಜೆ ಗುರುತಿನ ಚಿತ್ರ ಮಾತ್ರ ಹಲವು ಬಾರಿ ಲಭ್ಯವಾಗಿದೆ.

ದಾಖಲೆ ನೀಡಿದ ಯೇತಿ ಕೂದಲು
ಯೇತಿಯ ಅಸ್ತಿತ್ವಕ್ಕೆ ಪುಷ್ಠಿ ನೀಡುವಂತೆ, ಹಿಮಾಲಯ ಪ್ರವಾಸಕ್ಕೆ ತೆರಳಿದ್ದ ಹಲವರಿಗೆ ಯೇತಿಯ ಉದ್ದದ ಕೂದಲುಗಳು ಸಿಕ್ಕಿವೆ. ಅವುಗಳ ಅಧ್ಯಯನದ ಮೂಲಕವೂ ಯೇತಿ ಇದ್ದಿದ್ದು ಸತ್ಯ ಎಂಬುದಕ್ಕೆ ಪುರಾವೆ ಸಿಕ್ಕಿದೆ. ಯೇತಿ ಇದುವರೆಗೂ ಪೂರ್ಣವಾಗಿ ಯಾರಿಗೂ ಕಾಣಿಸಿಕೊಳ್ಳದೆ, ಆದರೆ ತನ್ನ ಇರುವನ್ನು ಆಗಾಗ ನೆನಪಿಸುವಂಥ ಪುರಾವೆಗಳನ್ನು ನೀಡುತ್ತ ಸುದ್ದಿಯಲ್ಲೇ ಇರುತ್ತದೆ. ಯೇತಿ ಹೆಸರಿನಲ್ಲಿ ಸಿನಿಮಾಗಳು, ಸಾಹಿತ್ಯಗಳು, ವಿಡಿಯೋ ಗೇಮ್ ಗಳು ಅವೆಷ್ಟು ಬಂದಿವೆಯೋ ಲೆಕ್ಕಕ್ಕಿಲ್ಲ. ಇದೀಗ ಮತ್ತೊಮ್ಮೆ ತನ್ನ ಹೆಜ್ಜೆ ಗುರುತು ಮೂಡಿಸಿ ಇರುವನ್ನು ನೆನಪಿಸಿದೆ ಯೇತಿ!
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications