ದೇಶದ ಒಳಗೆ ನುಸುಳಲು ಯತ್ನಿಸುತ್ತಿದ್ದ ಪಾಕ್ ನ 10 ಉಗ್ರರ ಹತ್ಯೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಕಾಶ್ಮೀರ, ಸೆ.20: ಪಾಕಿಸ್ತಾನದಿಂದ ಒಳ ನುಸುಳಸಲು ಯತ್ನಿಸುತ್ತಿದ್ದ ಹದಿನೈದು ಉಗ್ರರ ಪೈಕಿ ಹತ್ತು ಮಂದಿಯನ್ನು ಭಾರತೀಯ ಯೋಧರು ಕೊಂದಿದ್ದಾರೆ. ಮಂಗಳವಾರ ಮಧ್ಯಾಹ್ನ ಉರಿ ಸೆಕ್ಟರ್ ನ ಲಚೀಪುರ ಪ್ರದೇಶದಲ್ಲಿ ನಡೆದ ಆಪರೇಷನ್ ನಲ್ಲಿ ಉಗ್ರರನ್ನು ಕೊಲ್ಲಲಾಗಿದೆ. ಇತರ ಐವರಿಗಾಗಿ ಶೋಧ ಮುಂದುವರಿದಿದೆ.

ಉರಿ ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ ಎರಡು ದಿನ ಕಳೆದಿದೆ. ಆ ದಾಳಿ ವೇಳೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಕೊಲ್ಲಲಾಗಿತ್ತು. ಹದಿನೆಂಟು ಯೋಧರು ಹುತಾತ್ಮರಾಗಿದ್ದರು. ಇದಕ್ಕೂ ಮುನ್ನ ಉರಿ ಸೆಕ್ಟರ್ ನ ಗಡಿನಿಯಂತ್ರಣ ರೇಖೆ ಬಳಿ ಗುಂಡಿನ ದಾಳಿ ನಡೆಸಿತ್ತು. ಆ ನಂತರ ಉಗ್ರರು ಭಾರತದೊಳಗೆ ನುಸುಳುವುದು ಹೆಚ್ಚಾಗಿದೆ.[ಉರಿ ಭಯೋತ್ಪಾದಕ ದಾಳಿ, ಅಜರ್ ಮೇಲೆ ಎನ್ಐಎ ಟಾರ್ಗೆಟ್]

Indian Army kills 10 terrorists at Uri

ಭಾನುವಾರ ಉರಿ ಸೆಕ್ಟರ್ ನ ಸೇನಾ ಕ್ಯಾಂಪ್ ಮೇಲೆ ದಾಳಿಯಾದ ನಂತರ ಹಲವು ಉಗ್ರಗಾಮಿಗಳು ದೇಶದ ಗಡಿಯೊಳಗೆ ನುಸುಳಲು ಹೊಂಚು ಹಾಕುತ್ತಿದ್ದಾರೆ ಎಂದು ಗೊತ್ತಾಗಿದೆ. ಬುರ್ಹಾನ್ ವನಿ ಎನ್ ಕೌಂಟರ್ ಆದ ಜುಲೈ 9ರಿಂದ ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಆರಂಭವಾಗಿತ್ತು. ಆ ನಂತರ ರಾಜ್ಯದೊಳಗೆ ನುಸುಳಿರುವ ಉಗ್ರರನ್ನು ಹೇಳ ಹೆಸರಿಲ್ಲದಂತೆ ಮಾಡುವುದಕ್ಕೆ ಸೇನೆ ಹಾಗೂ ಗುಪ್ತಚರ ದಳ ಒಟ್ಟಾಗಿ ಕೆಲಸ ಮಾಡುತ್ತಿದೆ.

ಉರಿ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ಎಫ್ ಐಆರ್ ದಾಖಲಿಸಿದೆ. ಮೃತ ಉಗ್ರಗಾಮಿಗಳ ಡಿಎನ್ ಎ ಮಾದರಿಯನ್ನು ಸಂಗ್ರಹಿಸಿದೆ. ಜತೆಗೆ ಉಗ್ರರು ಬಳಸಿದ ಜಿಪಿಎಸ್ ಅನ್ನು ಅಮೆರಿಕಾದ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಇದರಿಂದ ಉಗ್ರರು ಬಳಸಿದ ದಾರಿ ತಿಳಿಯುತ್ತದೆ.[ಬಂದರು, ಕೊಂದರು, ಸತ್ತರು: ಉಗ್ರರನ್ನು ಕೊಂದದ್ದು 12 ನಿಮಿಷದಲ್ಲಿ]

ಪಾಕಿಸ್ತಾನವನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿ ಮಾಡಲು ಭಾರತ ಸೋಮವಾರ ನಿರ್ಧರಿಸಿದೆ. ಅದರ ಮೊದಲ ಹೆಜ್ಜೆಯಾಗಿ ವಿದೇಶಾಂಗ ಸಚಿವರು ಸೆ.26ರಂದು ವಿಶ್ವ ಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಬಲವಾದ ಸಂದೇಶ ರವಾನಿಸಲು ತೀರ್ಮಾನಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian army has killed 10 out of 15 terrorists who were trying to infiltrate to India from Pakistan. The operation was carried out on Tuesday afternoon at Lachipura area in the Uri sector
Please Wait while comments are loading...