ಗಡಿಯಲ್ಲಿ ನುಸುಳಲು ಯತ್ನಿಸಿದ ಇಬ್ಬರು ಉಗ್ರರ ಕೊಂದ ಸೇನೆ
ಜಮ್ಮು, ನವೆಂಬರ್ 05 : ಉತ್ತರ ಕಾಶ್ಮೀರದ ಉರಿ ಭಾಗದಲ್ಲಿ ಗಡಿ ಒಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನೆ ಭಾನುವಾರ ಮುಂಜಾನೆ ಹೊಡೆದುರುಳಿಸಿದೆ.
ಖಚಿತ ಮಾಹಿತಿಯೊಂದಿಗೆ ಕಾರ್ಯಾಚರಣೆ ಪ್ರಾರಂಭ ಮಾಡಿದ ಸೇನಾಪಡೆ ಯೋಧರು ಇಬ್ಬರು ಉಗ್ರಗಾಮಿಗಳನ್ನು ಪರಲೋಕಕ್ಕೆ ರವಾನಿಸಿದ್ದಾರೆ. ಕಾರ್ಯಾಚರಣೆ ಇನ್ನೂ ಚಾಲ್ತಿಯಲ್ಲಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮುಂಚೆ 2016ರ ಸೆಪ್ಟೆಂಬರ್ ತಿಂಗಳಲ್ಲಿ ಇದೇ ಭಾಗದಲ್ಲಿ ನುಸುಳಿದ್ದ ಭಯೋತ್ಪಾದಕರು ಭಾರತೀಯ ಸೇನಾ ಪಡೆಯ 18 ಮಂದಿ ಸೇನಾ ಯೋಧರನ್ನು ಕೊಂದಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ವಿಶ್ವವೇ ಬೆಚ್ಚಿ ಬೀಳುವಂತೆ ಸರ್ಜಿಕಲ್ ದಾಳಿ ನಡೆಸಿ ಭಾರತದ ಗಡಿ ಆಚೆಗಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಮುಯ್ಯಿ ತೀರಿಸಿಕೊಂಡಿತ್ತು.












Click it and Unblock the Notifications